ವೈರಲ್ ವಿಡಿಯೋ; ಕೇರಳ ಯುವತಿ ಮದುವೆಯಾಗಿರುವ ಆಫ್ರಿಕನ್-ಅಮೇರಿಕನ್ ತನ್ನತ್ತೆ ಮಲೆಯಾಳಂನಲ್ಲಿ ಮಾತಾಡಿದ್ದನ್ನು ಅರ್ಥಮಾಡಿಕೊಂಡ

ಈ ವಿಡಿಯೋವನ್ನು ಕೆಲ ದಿನಗಳ ಹಿಂದೆ ಪೋಸ್ಟ್​ ಮಾಡಿದ್ದು ಈಗ ವೈರಲ್ ಅಗಿದೆ. ಈಗಾಗಲೇ ಅದು 36 ಲಕ್ಷ ವ್ಯೂಗಳನ್ನು ಪಡೆದುಕೊಂಡಿದೆ ಮತ್ತು ಅದನ್ನು ವೀಕ್ಷಿಸುತ್ತಿರುವವರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದೆ ಮತ್ತು ಸಾಕಷ್ಟು ಕಾಮೆಂಟ್​ಗಳು ಸಹ ವ್ಯಕ್ತವಾಗಿವೆ.

ವೈರಲ್ ವಿಡಿಯೋ; ಕೇರಳ ಯುವತಿ ಮದುವೆಯಾಗಿರುವ ಆಫ್ರಿಕನ್-ಅಮೇರಿಕನ್ ತನ್ನತ್ತೆ ಮಲೆಯಾಳಂನಲ್ಲಿ ಮಾತಾಡಿದ್ದನ್ನು ಅರ್ಥಮಾಡಿಕೊಂಡ
ಅತ್ತೆಯೊಂದಿಗೆ ಡೆಂಜೆಲ್
TV9kannada Web Team

| Edited By: Arun Belly

Aug 10, 2022 | 1:56 PM

ಜೆನೊವಾ ಜೂಲಿಯನ್ ಪ್ರಿಯಾರ್ (Jenova Juliann Pryor) ಹೆಸರಿನ ಕೇರಳದ ಮಹಿಳೆ ತಮ್ಮ ಪತಿ ಮತ್ತು ಅಮ್ಮನ (mom) ನಡುವೆ ನಡೆಯುವ ಸಂಭಾಷಣೆಯ ವಿಡಿಯೋವೊಂದನ್ನು ಇನ್ಸ್ಟಾಗ್ರಾಮ್​ ನಲ್ಲಿ ಪೋಸ್ಟ್ ಮಾಡಿ, ನನ್ನ ಗಂಡ ಡೆಂಜೆಲ್ ಎ ಪ್ರಿಯಾರ್ (Denzel A Pryor) ಮಲೆಯಾಳಂ ಭಾಷೆ ಕಲಿಯುವ ಪ್ರಯತ್ನ ಮಾಡುತ್ತಿದ್ದಾರೆ. ಹಾಗೆ ನೋಡಿದರೆ ಅವರೀಗ ನನಗಿಂತ ಚೆನ್ನಾಗಿ ಮಾತಾಡಲಾರಂಭಿಸಿದ್ದಾರೆ. ನನ್ನ ಭಾಷೆಯನ್ನು ಅದಷ್ಟು ಬೇಗ ಉತ್ತಮಪಡಿಸಿಕೊಳ್ಳಬೇಕು, ಎಂದು ವಿಡಿಯೋ ಶೇರ್ ಮಾಡುವಾಗ ಬರೆದಿದ್ದಾರೆ.

ವಿಡಿಯೋ ಕ್ಲಿಪ್ ಟೆಕ್ಸ್ಟ್​​ ​ನೊಂದಿಗೆ ಆರಂಭವಾಗುತ್ತದೆ. ‘ನನ್ನ ಭಾರತೀಯ ಅಮ್ಮ ಮಲೆಯಾಳಂನಲ್ಲಿ ಮಾತಾಡಲು ಪ್ರಾಂರಂಭಿಸಿದಾಗ ಆಫ್ರಿಕನ್ ಮೂಲದ ಅಮೆರಿಕನ್​ ಅಗಿರುವ ನನ್ನ ಪತಿ ಅದನ್ನು ಅರ್ಥ ಮಾಡಿಕೊಳ್ಳುತ್ತಾರೆ,’ ಅಂತ ಮೆಸೇಜು ಹೇಳುತ್ತದೆ. ವಿಡಿಯೋನಲ್ಲಿ, ಅತ್ತೆ ತನ್ನಳಿಯನಿಗೆ ಮಲೆಯಾಳಂನಲ್ಲಿ ನಿಮಗೆ ಹಸಿವಾಗಿದ್ದರೆ ಅಡುಗೆ ತಯಾರಾಗಿದೆ ಎಂದು ಹೇಳುತ್ತಾರೆ. ಅವರು ಹೇಳಿದ್ದು ಅಳಿಯನಿಗೆ ಕೂಡಲೇ ಅರ್ಥವಾಗುವುದಿಲ್ಲ. ಆದರೆ ಸ್ವಲ್ಪ ಸಮಯದ ಬಳಿಕ ಅದನ್ನು ಗ್ರಹಿಸಿಕೊಂಡು ಅವರು ದೊಡ್ಡದಾಗಿ ನಗುವುದರ ಜೊತೆಗೆ ವಿಡಿಯೋ ಕೊನೆಗೊಳ್ಳುತ್ತದೆ.

ಈ ವಿಡಿಯೋವನ್ನು ಕೆಲ ದಿನಗಳ ಹಿಂದೆ ಪೋಸ್ಟ್​ ಮಾಡಿದ್ದು ಈಗ ವೈರಲ್ ಅಗಿದೆ. ಈಗಾಗಲೇ ಅದು 36 ಲಕ್ಷ ವ್ಯೂಗಳನ್ನು ಪಡೆದುಕೊಂಡಿದೆ ಮತ್ತು ಅದನ್ನು ವೀಕ್ಷಿಸುತ್ತಿರುವವರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದೆ ಮತ್ತು ಸಾಕಷ್ಟು ಕಾಮೆಂಟ್​ಗಳು ಸಹ ವ್ಯಕ್ತವಾಗಿವೆ.

‘ನಿಜಕ್ಕೂ ಈ ಮನುಷ್ಯನಿಗೆ ಪ್ರಶಸ್ತಿ ನೀಡಿ ಗೌರವಿಸಬೇಕು,’ ಎಂದು ಒಬ್ಬ ಯೂಸರ್ ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು, ‘ನಿಮ್ಮ ಪತಿಯ ಬಗ್ಗೆ ಗೌರವ ಹೆಚ್ಚಾಗಿದೆ,’ ಎಂದು ಹೇಳಿದ್ದಾರೆ. ‘ಈ ವ್ಯಕ್ತಿ ಅತ್ತೆಯ ಪ್ರೀತಿ ಗೆದ್ದುಬಿಟ್ಟ!’ ಅಂತ ಮೂರನೇಯವರು ಕಾಮೆಂಟ್ ಮಾಡಿದ್ದಾರೆ. ನಾಲ್ಕನೇಯವರು,  ‘ಓ ಬ್ರೋ ಅತ್ತೆ ಹೇಳಿದನ್ನು ಅರ್ಥಮಾಡಿಕೊಂಡುಬಿಟ್ಟ,’ ಎಂದು ಹೇಳಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada