ಸೀಲಿಂಗ್ ಒಡೆದು ಹೊರಬಿದ್ದ ಜೋಡಿ ಹೆಬ್ಬಾವನ್ನು ನೋಡಿ ಬೆಚ್ಚಿ ಬೀಳುತ್ತಿರುವ ನೆಟ್ಟಿಗರು
Pythons : ಸೀಲಿಂಗ್ನಿಂದ ತೂರಿಬಿದ್ದ ಬಾಲ ನೋಡಿ ಸಣ್ಣ ಹಾವಿರಬಹುದು ಎಂದುಕೊಂಡಿದ್ದಾರೆ. ಸೀಲಿಂಗ್ ಒಡೆದು ಹೊರಬಿದ್ದ ಆ ಹೆಬ್ಬಾವುಗಳ ಗಾತ್ರ ನೋಡಿ ಅಲ್ಲಿದ್ದ ಜನ ಭಯದಿಂದ ಕೂಗಿದ್ದಾರೆ. ನೋಡಿ ವಿಡಿಯೋ.
Viral Video : ಹಾವು, ಹಲ್ಲಿ, ಗೆದ್ದಲು, ಇಲಿ, ಹೆಗ್ಗಣ ಮುಂತಾದವುಗಳಿಗೆ ಮನೆಗಳು, ಅಂಗಡಿಗಳು, ಗೋದಾಮುಗಳು, ಕಾರ್ಖಾನೆಗಳು ಅತ್ಯಂತ ಸುರಕ್ಷಿತ ತಾಣಗಳು. ಹಾಗಾಗಿ ಯಾವ ಸಮಯದಲ್ಲಿ ಎಲ್ಲಿ ಅಡಗಿರುತ್ತವೆ ಎನ್ನುವುದು ಗೊತ್ತೇ ಆಗದಂತೆ ಜೀವಿಸುತ್ತಿರುತ್ತವೆ. ಹಾಗೆಂದು ಅವುಗಳು ಗೂಡೊಳಗೆ, ಗೋಡೆಯೊಳಗೆ ಎಷ್ಟು ದಿನಗಳಂತ ಇರಲು ಸಾಧ್ಯ? ಒಮ್ಮೆ ಅವುಗಳೇ ಹೊರಬರಬೇಕು ಅಥವಾ ಆ ಸ್ಥಳವನ್ನು ಸ್ವಚ್ಛಗೊಳಿಸುವಾಗ ಅವೇ ಕಣ್ಣಿಗೆ ಬೀಳಬೇಕು. ಉಳಿದ ಪ್ರಾಣಿಗಳು ಬಿಡಿ. ಹೆಬ್ಬಾವು ಕಣ್ಣಿಗೆ ಬಿದ್ದರೆ? ಒಂದಲ್ಲ ಎರಡು!
मुहावरा: छप्पर फाड़ के देना। उदाहरण : ….,,. ??♂️ pic.twitter.com/ojgLtPJct7
ಇದನ್ನೂ ಓದಿ— Saket Badola IFS (@Saket_Badola) February 14, 2023
ನೋಡಿ ಸೀಲಿಂಗ್ನಿಂದ ಮೊದಲು ಬಾಲ ಇಳಿಬಿದ್ದಿದೆ. ಸಣ್ಣ ಹಾವಿರಬೇಕೆಂದು ಹಾವು ಹಿಡಿಯುವವರು ಅದನ್ನು ಎಳೆಯಲು ನೋಡಿದಾಗ ಸೀಲಿಂಗ್ ಮುರಿದುಬಿದ್ದಿದೆ. ಅದರೊಳಗಿಂದ ಜೋಡಿ ಹೆಬ್ಬಾವುಗಳು ಕಾಣಿಸಿಕೊಂಡಿವೆ. ಅಲ್ಲಿದ್ದ ಜನ ಭಯಭೀತರಾಗಿ ಕೂಗಾಡಿದ್ದಾರೆ. ಊಹಿಸಲು ಅಸಾಧ್ಯವಾದಂಥ ದೃಶ್ಯ, ಯಾರಿಗೂ ಗಾಬರಿ ಸಹಜ ಅಲ್ಲವೆ?
ಇದನ್ನೂ ಓದಿ : ತೆಲಂಗಾಣದ ಆಸ್ಪತ್ರೆಯಲ್ಲಿ ರೋಗಿಯ ಬೆಡ್ ಕೆಳಗೆ ಹಾವು ಪತ್ತೆ, ಈ ತಿಂಗಳಲ್ಲಿ ಇದು ಎರಡನೇ ಪ್ರಕರಣ
ಈಗಾಗಲೇ ಈ ವಿಡಿಯೋ ಅನ್ನು ಸುಮಾರು 15,000 ಜನ ನೋಡಿದ್ದಾರೆ. ಅವುಗಳು ಹೊರಬೀಳುತ್ತಿದ್ದಂತೆ ನಿಜಕ್ಕೂ ನನ್ನ ಎದೆಬಡಿತ ನಿಂತೇಹೋಯಿತು ಎಂದು ಒಬ್ಬರು ಹೇಳಿದ್ದಾರೆ. ಇಂಡೋನೇಶಿಯಾ, ಮಲೇಶಿಯಾದ ಮನೆಗಳಲ್ಲಿ ಇವೆಲ್ಲ ಸರ್ವೇಸಾಮಾನ್ಯ ಎಂದಿದ್ದಾರೆ ಮತ್ತೊಬ್ಬರು. ಇದು ಅನಕೊಂಡಾ ಅಥವಾ ಪೈಥಾನ್? ಎಂದು ಮಗದೊಬ್ಬರು ಕೇಳಿದ್ದಾರೆ.
ಇದನ್ನೂ ಓದಿ : ಉತ್ತರಪ್ರದೇಶದ ಶಾಲಾ ಬಸ್ಸಿನಲ್ಲಿ ಹೆಬ್ಬಾವು ಪತ್ತೆ, ವಿಡಿಯೋ ವೈರಲ್
ನಾನು ಮೊದಲ ಸಲ ನೋಡಿದ ಭಯಾನಕ ದೃಶ್ಯವಿದು ಎಂದು ಇನ್ನೂ ಒಬ್ಬರು ಹೇಳಿದ್ದಾರೆ. ಈ ವಿಡಿಯೋ ಅಪ್ಲೋಡ್ ಮಾಡಿ ನನಗೆ ಕನಸಿನಲ್ಲಿಯೂ ಭಯ ಬೀಳುವಂತೆ ಮಾಡಿದ್ದೀರಿ ಎಂದು ಮತ್ತೊಬ್ಬರು ಹೇಳಿದ್ದಾರೆ. ಇದು ಬಹುಶಃ ಚೀನಾದಲ್ಲಿ ಇರಬೇಕು. ಅವರಿಗೆ ಎಲ್ಲವೂ ಆಹಾರವೇ. ಅದಕ್ಕೇ ಸಾಕಿಕೊಂಡಿದ್ದಿರಬೇಕು ಎಂದಿದ್ದಾರೆ ಒಬ್ಬರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 11:38 am, Thu, 16 February 23