AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತ್ನಿ ಆಸೆಯಂತೆ ಆಕೆಯ ಸ್ನೇಹಿತೆಯನ್ನ ಮದ್ವೆಯಾದ ಭೂಪ: ಇಬ್ಬರ ಹೆಂಡರನ್ನ ಪರಿಚಯಿಸಿದ ವಿಡಿಯೋ ವೈರಲ್

ಇಲ್ಲೋರ್ವ ಮಹಿಳೆ ತನ್ನ ಗಂಡನಿಗೆ ತಾನೇ ಮುಂದೆ ನಿಂತು ಎರಡನೇ ಮದುವೆ ಮಾಡಿಸಿದ್ದಾಳೆ. ಅಚ್ಚರಿ ಎನಿಸಿದರೂ ಇದು ಸತ್ಯ. ಈ ವಿಡಿಯೋ ಸಖತ್ ವೈರಲ್ ಆಗಿದೆ.

ಪತ್ನಿ ಆಸೆಯಂತೆ ಆಕೆಯ ಸ್ನೇಹಿತೆಯನ್ನ ಮದ್ವೆಯಾದ ಭೂಪ: ಇಬ್ಬರ ಹೆಂಡರನ್ನ ಪರಿಚಯಿಸಿದ ವಿಡಿಯೋ ವೈರಲ್
TV9 Web
| Edited By: |

Updated on:Feb 15, 2023 | 9:14 PM

Share

ನವದೆಹಲಿ: ಮೊದಲ ಪತ್ನಿ (Wife) ಬದುಕಿರುವಾಗಲೇ ಇನ್ನೊಂದು ಮದುವೆಯಾಗುವುದು ಕಾನೂನು ಪ್ರಕಾರ ಅಪರಾಧ. ಮೊದಲ ಹೆಂಡತಿ ಬದುಕಿರುವಾಗಲೇ 2ನೇ ಮದುವೆ ಆಗಲು ಕಾನೂನಿನಲ್ಲಿ ಅವಕಾಶ ಇಲ್ಲ. ಆದ್ರೆ, ನಿಖರ ಕಾರಣಗಳೊಂದಿಗೆ ಕಾನೂನಿನ ಪ್ರಕಾರ ಮೊದಲ ಪತ್ನಿ ವಿಚ್ಛೇದನ ಬಳಿಕ ಎರಡನೇ ಮದ್ವೆಯಾಗಬಹುದು.ಇನ್ನು ಮೊದಲ ಪತ್ನಿ ಇದ್ದು, ಕದ್ದುಮುಚ್ಚಿ ಇನ್ನೊಂದು ಮದುವೆಯಾದ ಬಳಿಕ ಸಂಸಾರದಲ್ಲಿ ರಂಪಾಟ ಆದ ಉದಾಹರಣೆಗಳು ಸಾಕಷ್ಟು ಇವೆ. ಆದ್ರೆ, ಇಲ್ಲೋರ್ವ ಮಹಿಳೆ ತನ್ನ ಗಂಡನಿಗ(Husband) ಖುದ್ದು ತಾನೇ ಮುಂದೆ ನಿಂತು ಎರಡನೇ ಮದುವೆ ಮಾಡಿಸಿದ್ದಾಳೆ. ಇದು ಅಚ್ಚರಿ ಅನ್ನಿಸಿದರೂ ಸತ್ಯ.

ಮಹಿಳೆಯೊಬ್ಬಳು ತನ್ನ ಗಂಡನಿಗೆ ತನ್ನ ಸ್ನೇಹಿತೆಯ ಜೊತೆ ಎರಡನೇ ಮದುವೆ ಮಾಡಿಸಿದ್ದಾಳೆ. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್​ ಆಗಿದ್ದು, ಮೂವರ ನಡುವೆ ನಡೆದಿರುವ ಸಂಭಾಷಣೆ ನೆಟ್ಟಿಗರ ಹುಬ್ಬೇರುವಂತೆ ಮಾಡಿದೆ. ಪತ್ನಿಯನ್ನು ಸಂತೋಷವಾಗಿ ಇಡಲೆಂದೇ ಆಕೆಯ ಸ್ನೇಹಿತೆಯನ್ನು ಎರಡನೇ ಮದುವೆ ಆಗಿದ್ದಾಗಿ ವಿಡಿಯೋದಲ್ಲಿರುವ ವ್ಯಕ್ತಿ ಹೇಳಿಕೊಂಡಿದ್ದಾನೆ.

ಸೆಲ್ಫಿ ವಿಡಿಯೋ ರೆಕಾರ್ಡ್​ ಮಾಡಿರುವ ವ್ಯಕ್ತಿ ಮೊದಲು ತನ್ನ ಹಿಂದಿರುವ ಮೊದಲ ಪತ್ನಿಯ ಪರಿಚಯ ಮಾಡುತ್ತಾನೆ. ಈಕೆ ನನ್ನ ಪತ್ನಿ ಎಂದು ಹೇಳುತ್ತಾನೆ. ಬಳಿಕ ನಿನ್ನ ಬಯಕೆ ಏನು ಎಂದು ಪತ್ನಿಯನ್ನು ಪ್ರಶ್ನೆ ಮಾಡುತ್ತಾನೆ. ಇದಕ್ಕೆ ಉತ್ತರಿಸಿದ ಮೊದಲ ಸಂಗಾತಿ,  ನನ್ನ ಫ್ರೆಂಡ್​ ಜೊತೆ ನಾನು ಹೆಚ್ಚಿಗೆ ಸಮಯ ಕಳೆಯಬೇಕೆಂದು ಕೇಳುತ್ತಾಳೆ. ಇದಕ್ಕೆ ಮರು ಪ್ರಶ್ನಿಸಿದ ಗಂಡ ನಿನ್ನ ಸಮಸ್ಯೆಯನ್ನು ನಾನು ಬಗೆಹರಿಸಿದ್ದೇನೆಯೇ? ಎನ್ನುತ್ತಾನೆ. ಅದಕ್ಕೆ ಪತ್ನಿ ಹೌದು ಎನ್ನುತ್ತಾಳೆ.

ಇದಾದ ಬಳಿಕ ಆ ವ್ಯಕ್ತಿ ತನ್ನ ಕ್ಯಾಮೆರಾವನ್ನು ತನ್ನ ಪಕ್ಕದಲ್ಲಿ ಕುಳಿತಿರುವ ಇನ್ನೋರ್ವ ಮಹಿಳೆ ಕಡೆ ತಿರುಗಿಸಿ ಇವಳೇ ಇವಳೇ ನನ್ನ ಎರಡನೇ ಪತ್ನಿ. ಹೆಸರು ಸಕಿನಾತ್​. ನನ್ನ ಮೊದಲ ಪತ್ನಿಯ ಸ್ನೇಹಿತೆ ಎಂದು ಪರಿಚಯಿಸುತ್ತಾನೆ. ಈ ವೇಳೆ ಮೊದಲ ಪತ್ನಿ ಜವಿಮ್​ ಅದು ನಾನಲ್ಲ ಎಂದು ಹೇಳಿದಾಗ ಸುಮ್ಮನೇ ಇರವಂತೆ ಕೊಂಚ ಧ್ವನಿಯೇರಿಸುತ್ತಾನೆ. ಕೊನೆಗೆ ಕ್ಯಾಮೆರಾವನ್ನು ಎರಡನೇ ಪತ್ನಿಯ ಕಡೆ ತಿರುಗಿಸಿ, ನನ್ನ ಕುಟುಂಬಕ್ಕೆ ಸ್ವಾಗತ ಸಕಿನಾತ್​ ಎಂದು ಹೇಳುತ್ತಾನೆ. ಈ ವೇಳೆ ಎರಡನೇ ಪತ್ನಿ ನಾಚಿಕೊಂಡಿರುವುದು ವಿಡಿಯೋನಲ್ಲಿದೆ.

ಈ ವಿಡಿಯೋವನ್ನು ಘರ್​ ಕೆ ಕಲೇಶ್​ ಹೆಸರಿನ ಟ್ವಿಟರ್​ ಖಾತೆಯಿಂದ ಶೇರ್ ಆಗಿದ್ದು, ಈವರೆಗೂ 45 ಸಾವಿರಕ್ಕೂ ಅಧಿಕ ವೀಕ್ಷಣೆ ಮಾಡಿದ್ದಾರೆ. 1,283 ಲೈಕ್ಸ್​ ಬಂದಿವೆ. ಇನ್ನು 212 ಜನರು ಈ ವಿಡಿಯೋವನ್ನು ರೀಟ್ವೀಟ್ ಮಾಡಿದ್ದಾರೆ. ಕೆಲವರು ಇದಕ್ಕೆ ಫನ್ನಿಯಾಗಿ ಕಾಮೆಂಟ್ ಮಾಡಿದ್ರೆ, ಇನ್ನೂ ಕೆಲವರು ಸಿಟ್ಟಿನಿಂದ ಬೈದಿದ್ದಾರೆ. ಆದರೆ, ವಿಡಿಯೋ ಅಸಲಿಯತ್ತೇನು? ಅವರು ಎಲ್ಲಿಯವರು? ಎನ್ನುವುದು ತಿಳಿದುಬಂದಿಲ್ಲ.ವಿಡಿಯೋ ಮಾತ್ರ ಸಖತ್​ ವೈರಲ್ ಆಗಿದೆ.

ಇನ್ನಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 9:12 pm, Wed, 15 February 23

Follow Us
ಅಗಲಿದ ಅಮ್ಮನಿಗೆ ವಿಕೆಟ್ ಅರ್ಪಿಸಿದ ಮುಖೇಶ್ ಚೌಧರಿ
ಅಗಲಿದ ಅಮ್ಮನಿಗೆ ವಿಕೆಟ್ ಅರ್ಪಿಸಿದ ಮುಖೇಶ್ ಚೌಧರಿ
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ