Viral Video: ರಿಮಝಿಮ ಗಿರೆ ಸಾವನ್​; ಮುಂಬೈನಲ್ಲಿ ಈ ಹಾಡನ್ನು ಮರುಸೃಷ್ಟಿಸಿದ ಜೋಡಿ

Manzil : ರಾಜಸ್ಥಾನ ಮಹಿಳಾ ಆಯೋಗದ ಅಧ್ಯಕ್ಷೆ ರೆಹಾನಾ ರಯಾಝ್​ ಚಿಷ್ಟಿ ''ವಿಡಿಯೋ ಹಂಚಿಕೊಂಡಿದ್ದಕ್ಕೆ ಧನ್ಯವಾದ ಆನಂದ್​ಜೀ, ಇದೆಲ್ಲವನ್ನೂ ಮುಂದುವರೆಸಿಕೊಂಡು ಹೋಗಬೇಕು. ವಯಸ್ಸು ಎಂದೂ ಅಡ್ಡಿಯಾಗಬಾರದು” ಎಂದಿದ್ದಾರೆ.

Viral Video: ರಿಮಝಿಮ ಗಿರೆ ಸಾವನ್​; ಮುಂಬೈನಲ್ಲಿ ಈ ಹಾಡನ್ನು ಮರುಸೃಷ್ಟಿಸಿದ ಜೋಡಿ
ರಿಮಝಿಮ ಗಿರೇ ಸಾವನ್​- ಹಾಡನ್ನು ಮರುಸೃಷ್ಟಿಸಿದ ಜೋಡಿ
Follow us
ಶ್ರೀದೇವಿ ಕಳಸದ
|

Updated on:Jul 03, 2023 | 7:04 PM

Couple : ರಿಮಝಿಮ ಗಿರೇ ಸಾವನ್ (RimJhim Gire Sawan), ಅಮಿತಾಬ್​ ಬಚ್ಚನ್ (Amitab Bacchan) ಮತ್ತು ಮೌಶಮಿ ಚಟರ್ಜಿ ಅಭಿನಯದ ”ಮಂಜಿಲ್​”  ಸಿನೆಮಾದ ಈ ಹಾಡು ಕೇಳುತ್ತಿರುವಾಗಲೇ ಕಿಟಕಿಯಾಚೆ ಧೋಮಳೆ. ಹಾಡು ನಿಂತಾಗ ಪರದೆ ಮೇಲಿರುವವರು ಅವರಲ್ಲವೆ…? ಮತ್ತೆ  ಇವರು ಯಾರು? ಇವರು ನಡುವಯಸ್ಸಿನ ಜೋಡಿ. ಅದೇ ಸಮುದ್ರ ಅದೇ ತೀರ ಅದೇ ಹಾಡು ಅದೇ ಹೆಜ್ಜೆ ಅದೇ ಭಾವ. ಈ ಜೋಡಿ ಅದೇ ಹಾಡನ್ನು ಹೀಗೆ ಮರುಸೃಷ್ಟಿಸಿದೆ. ಇದೀಗ ಈ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರು ಈ ವಿಡಿಯೋ ನೋಡುತ್ತ ರೋಮಾಂಚನಗೊಳ್ಳುತ್ತಿದ್ದಾರೆ. ಉದ್ಯಮಿ ಆನಂದ್ ಮಹೀಂದ್ರಾ ಈ ವಿಡಿಯೋ ಟ್ವೀಟ್ ಮಾಡಿದ್ದಾರೆ.

”ಮುಂಬೈನ ಬೀಚಿನಲ್ಲಿ ಈ ಜೋಡಿ ವಿಡಿಯೋ ಅನ್ನು ಮರುಸೃಷ್ಟಿಸಿದೆ. ಈ ಜೋಡಿಯನ್ನು ಈ ಮೂಲಕ ನಾನು ಅಭಿನಂದಿಸುತ್ತಿದ್ದೇನೆ. ”ನಿಮ್ಮ ಕಲ್ಪನೆಗೆ ರೆಕ್ಕೆ ಹಚ್ಚಿಕೊಂಡರೆ ನಿಮಗೆ ಬೇಕಾದಂತೆ ನಿಮ್ಮ ಜೀವನವನ್ನು ಛಂದಗೊಳಿಸಿಕೊಳ್ಳಬಹುದು” ಎಂದು ಅವರು ನಮಗೆ ಸಂದೇಶ ರವಾನಿಸುತ್ತಿದ್ದಾರೆ!” ಎಂದಿದ್ದಾರೆ ಆನಂದ್ ಮಹೀಂದ್ರಾ.

ಇದನ್ನೂ ಓದು : Viral Video: ಅಣಾ ನೀನೆಷ್ಟಾರಾ ಕಣ್ಕಟ್ಟು ಬಯಲು ಮಾಡ್ಕೋ ನಾವ್ ಮಾತ್ರ ಆ ಹುಡುಗೀನೇ ನೋಡೋದು; ಸಮೂಹ ಸನ್ನಿಗೊಳಗಾದ ನೆಟ್ಟಿಗರು

ಈ ಜೋಡಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಾಗಿದೆ ಆದ್ದರಿಂದ ಇಂಥ ಮಳೆಗಾಲದ ದಿನಗಳನ್ನು ಆನಂದಿಸುತ್ತಿದ್ದಾರೆ ಎಂದಿದ್ದಾರೆ ಒಬ್ಬರು. ವಯಸ್ಸು ಒಂದು ಅಂಕಿಸಂಖ್ಯೆ ಅಷ್ಟೇ. ಆದರೆ ನಿಮ್ಮೊಳಗಿನ ನಿಮ್ಮ ಮಗುತನ ಯಾವತ್ತೂ ಕಾಪಾಡಿಕೊಳ್ಳಿ ಎಂದಿದ್ಧಾರೆ ಮತ್ತೊಬ್ಬರು. ನಿನ್ನೆಯಷ್ಟೇ ಹಂಚಿಕೊಂಡ ಈ ವಿಡಿಯೋ ಅನ್ನು ಈಗಾಗಲೇ 3 ಮಿಲಿಯನ್​ಗಿಂತಲೂ ಹೆಚ್ಚು ಜನರು ನೋಡಿದ್ದಾರೆ. ಸಾವಿರಾರು ಜನರು ರೀಟ್ವೀಟ್ ಮಾಡಿದ್ದಾರೆ.

ಇದನ್ನು ಓದಿದ ನಿಮಗೀಗ ಮಳೆಯಲ್ಲಿ ಹೋಗಿ ನೆನಯಬೇಕು ಹಾಗೇ ಹೆಜ್ಜೆ ಹಾಕಬೇಕು ಅನ್ನಿಸುತ್ತಿದೆಯಾ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 6:59 pm, Mon, 3 July 23

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು