Viral Video: ‘ಅಣಾ ನೀನೆಷ್ಟಾರಾ ಕಣ್ಕಟ್ಟು ಬಯಲು ಮಾಡ್ಕೋ ನಾವ್ ಮಾತ್ರ ಆ ಹುಡುಗೀನೇ ನೋಡೋದು!​’ ಸಮೂಹ ಸನ್ನಿಗೊಳಗಾದ ನೆಟ್ಟಿಗರು

Magic Reveal : ಆ ಮಂತರ್ ಈ ಮಂತರ್ ನೂರಾಎಂಟ್​ ಮಂತರ್​​ ಹಿಂದಿನ ಮರ್ಮಾನೇ ತೋರಿಸ್​​ಬುಟ್ಟಿವ್ನೀ. ಆದ್ರೂ ನೀವ್ಗಳು ನನ್ ತಾವಾ ಇರೋ ಹುಡುಗೀನ್ನೇ ಶ್ಯಾನೆ ಹೊಗಳ್ತಿದೀರಲ್ಲ. ನ್ಯಾಯಾನಾ ಸೋಮಿ? ಕೇಳ್ತವ್ನೆ ಪಾರಿನ್​ ಮಾಂತ್ರಿಕ!

Viral Video: 'ಅಣಾ ನೀನೆಷ್ಟಾರಾ ಕಣ್ಕಟ್ಟು ಬಯಲು ಮಾಡ್ಕೋ ನಾವ್ ಮಾತ್ರ ಆ ಹುಡುಗೀನೇ ನೋಡೋದು!​' ಸಮೂಹ ಸನ್ನಿಗೊಳಗಾದ ನೆಟ್ಟಿಗರು
ಜಾದೂವೆಂದರೆ ತಂತ್ರ!
Follow us
ಶ್ರೀದೇವಿ ಕಳಸದ
|

Updated on:Jul 03, 2023 | 12:31 PM

Magic : ಓಹ್​ ಪವಾಡವೇ ನಡೆಯಿತು, ಜಾದೂ ನಡೆಯಿತು, ಅದ್ಭುತ ನಡೆಯಿತು, ಕಣ್ಣಿಂದ ನಂಬಲು ಸಾಧ್ಯವೇ ಇಲ್ಲ… ಜಾತ್ರೆಯಲ್ಲಿ, ಪ್ರದರ್ಶನದಲ್ಲಿ, ಶಾಲೆಯಲ್ಲಿ ಜಾದೂ ನೋಡಿ ಹೀಗೆ ಉದ್ಗರಿಸಿರುತ್ತೀರಿ ಅಲ್ಲವೆ? ಆದರೆ ಇದೆಲ್ಲ ಹೇಗೆ ಸಾಧ್ಯವಾಯಿತು? ಕೆಲವರಿಗೆ ತಮ್ಮ ತಲೆಯನ್ನು ಹೊಕ್ಕ ಈ ಹುಳಕ್ಕೆ ಬಹುಶಃ ಉತ್ತರಗಳು ಸಿಕ್ಕಿರಲಿಕ್ಕಿಲ್ಲ. ಆದರೆ ಈ ವಿಡಿಯೋ ನೋಡಿ ಭಾರೀ ವೈರಲ್ ಆಗುತ್ತಿದೆ. ಒಂದಿಷ್ಟು ಜಾದೂ ತಂತ್ರಗಳನ್ನು (Magic Techniques) ಇದು ಬಯಲು ಮಾಡಿದೆ. ಈತನಕ ಸುಮಾರು 5.3 ಮಿಲಿಯನ್​ ನೆಟ್ಟಿಗರು ಈ ವಿಡಿಯೋ ನೋಡಿದ್ದಾರೆ. 9,000ಕ್ಕಿಂತಲೂ ಹೆಚ್ಚು ಜನ ರೀಟ್ವೀಟ್ ಮಾಡಿದ್ದಾರೆ.

ಹೆಸರೇ ಹೇಳುವಂತೆ ಇದು ಕಣ್ಕಟ್ಟು ವಿದ್ಯೆ. ಅಪಾರ ಪರಿಶ್ರಮ, ಜಾಣತನ, ಚಾಕಚಕ್ಯತೆ, ಬುದ್ಧಿವಂತಿಕೆಯಿಂದ ಇದನ್ನು ಸಾಧಿಸಬೇಕಾಗುತ್ತದೆ. ಹಾಗಾಗಿ ಇದು ಕೆಲವರಿಗಷ್ಟೇ ಒಲಿಯುವ ವಿದ್ಯೆ. ನಿಮ್ಮ ಗಮನವನ್ನು ಬೇರೆಡೆ ಸೆಳೆಯುತ್ತಲೇ ಜಾದೂಗಾರರು ಜಾದೂ ಮಾಡಿಬಿಟ್ಟಿರುತ್ತಾರೆ. ನೆಟ್ಟಿಗರಂತೂ ಈ ವಿಡಿಯೋ ನೋಡಿ, ಅಬ್ಬಾ ಇಷ್ಟು ವರ್ಷಗಳ ಮೇಲಾದರು ಜಾದೂ ಹಿಂದಿನ ತಂತ್ರಗಳನ್ನು ಸ್ವತಃ ನೋಡಲು ಸಿಕ್ಕಿತಲ್ಲ! ಎಂಥ ತಯಾರಿ ಬೇಕಲ್ಲ ಇದರ ಪ್ರದರ್ಶನಕ್ಕೆ ಎಂದು ಅಚ್ಚರಿ ಪಡುತ್ತಿದ್ದಾರೆ.

ಇದನ್ನೂ ಓದಿ : Viral Video: ಜಪಾನಿನ ಸುಶಿ; ಅನ್ನ ಬೇಳೆಯನ್ನು ದಯವಿಟ್ಟು ಅವಮಾನಿಸಬೇಡಿ ಎನ್ನುತ್ತಿರುವ ನೆಟ್ಟಿಗರು

ಜಾದೂಗಾರರು ಕಣ್ಣುಮಿಟುಕಿಸುವುದರಲ್ಲಿ ತಮ್ಮ ತಂತ್ರಗಳನ್ನು ಸಾಧಿಸಿಬಿಟ್ಟಿರುತ್ತಾರೆ. ನಿಜಕ್ಕೂ ಅವರು ಮಾಂತ್ರಿಕರೇ ಎಂದಿದ್ದಾರೆ ಒಬ್ಬರು. ಯಾರನ್ನೋ ಕೊಲ್ಲಲು ಹೊರಟಿದ್ಧಾನೇನೋ ಎಂಬಂತಿದೆ ಅವನ ಹಾವಭಾವ ಎಂದಿದ್ಧಾರೆ ಇನ್ನೊಬ್ಬರು. ಆಕೆಯಂತೂ ಮುದ್ದಾಗಿದ್ದಾಳೆ ಎಂದು ಮತ್ತೊಬ್ಬರು. ಈ ಜಾದೂಗಾರನಿಗಿಂತ ನಾನು ಆ ಹುಡುಗಿಯನ್ನು ನೋಡುತ್ತಿದ್ದೇನೆ, ಆಕೆ ದೇವರ ಮಾಂತ್ರಿಕ ಸೃಷ್ಟಿ! ಎಂದಿದ್ದಾರೆ ಇನ್ನೂ ಒಬ್ಬರು. ನಾನಂತೂ ಈ ಹುಡುಗಿಯೊಂದಿಗೆ ಪ್ರೀತಿಯಲ್ಲಿ ತೇಲುತ್ತಿದ್ದೇನೆ ಎಂದು ಅನೇಕರು ಹೇಳುತ್ತಿದ್ಧಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:30 pm, Mon, 3 July 23

ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ