Viral Video: 73 ವರ್ಷದ ವೈದ್ಯರಿಗೆ ಮೊದಲ ಸಲ ಹಾಡಲು ವೇದಿಕೆ ಸಿಕ್ಕಾಗ…

National Doctor's Day 2023 : “ಎಲ್ಲವೂ ಕಗ್ಗಂಟಾಗಿ ಹೋದ ಇಂದಿನ ಈ ಜಗತ್ತಿನಲ್ಲಿ ಇಂಥ ಸುಂದರ ಗಳಿಗೆಯನ್ನು ನಮ್ಮೊಂದಿಗೆ ಹಂಚಿಕೊಂಡದ್ದಕ್ಕೆ ಧನ್ಯವಾದಗಳು, ನಿಜಕ್ಕೂ ಸ್ಫೂರ್ತಿದಾಯಕ! ಇವರ ಉತ್ಸಾಹಕ್ಕೆ ಸಲಾಂ,” ನೆಟ್ಟಿಗರ ಪ್ರಶಂಸೆ.

Viral Video: 73 ವರ್ಷದ ವೈದ್ಯರಿಗೆ ಮೊದಲ ಸಲ ಹಾಡಲು ವೇದಿಕೆ ಸಿಕ್ಕಾಗ...
ಕೇರಳದ ಡಾ. ಸುರೇಶ್​ ನಂಬಿಯಾರ್ ಗಾಯಕ ಶಾನ್​ನೊಂದಿಗೆ ಹಾಡುತ್ತಿರುವುದು
Follow us
ಶ್ರೀದೇವಿ ಕಳಸದ
|

Updated on:Jul 01, 2023 | 5:49 PM

Singer : ಹುಣಸೆ ಮರ ಮುಪ್ಪಾದರೆ ಹುಳಿಗೆ ಮುಪ್ಪೇ? ಜೀವ ಹಳತಾದರೂ ಒಳಗೆ ತುಡಿಯುವ ಜೀವಸೆಲೆ ಕ್ಷಣಕ್ಷಣಕ್ಕೂ ಹೊಸತೇ. “ಸಂಗೀತ ನಿಮ್ಮ ಧಮನಿಗಳಲ್ಲಿದ್ದರೆ ಅದನ್ನು ವಯಸ್ಸು ತಡೆಯಲಾರದು’.’ 73 ವರ್ಷ ಕೇರಳದ ಡಾ. ಸುರೇಶ್ ನಂಬಿಯಾರ್ (Dr. Suresh Nambiar) ಹುರುಪಿನಿಂದ ಹಾಡುತ್ತಿರುವ ವಿಡಿಯೋ ಅನ್ನು Nims ಎಂಬ ಟ್ವಿಟರ್​ ಖಾತೆದಾರರು ಹಂಚಿಕೊಂಡಿದ್ದಾರೆ. ಹಳೆಯ ಜನಪ್ರಿಯ ಹಿಂದೀ (Bollywood Song) ಹಾಡೊಂದನ್ನು ಖ್ಯಾತ ಬಾಲಿವುಡ್ ಗಾಯಕ ಶಾನ್ (Shaan) ಅವರೊಂದಿಗೆ ಹಾಡಿದ್ದಾರೆ. ಇದೀಗ ಈ ವಿಡಿಯೋ ಸ್ವಾಭಾವಿಕವಾಗಿ ಇದು ನೋಡುಗರ ಮನವನ್ನು ಗೆದ್ದಿದೆ. ಒಮ್ಮೆ ನೋಡಿದವರು ಪದೇಪದೇ ನೋಡುತ್ತ ಇತರರೊಂದಿಗೆ ಹಂಚಿಕೊಳ್ಳುತ್ತ ಇದು ವೈರಲ್ ಆಗಿದೆ.

“ನನಗೀಗ 73 ವರ್ಷ. ನಮ್ಮಲ್ಲಿ ಹಾಡುವವರಿಗಾಗಿ ಬಹಳಷ್ಟು ಸ್ಪರ್ಧೆಗಳಿವೆ, ವೇದಿಕೆಗಳಿವೆ. ಆದರೆ ಸಾಮಾನ್ಯವಾಗಿ ಅವೆಲ್ಲ 20 ವರ್ಷದ ಕೆಳಗಿನವರಿಗೆ, ಅಥವಾ 20ರಿಂದ 40 ವರ್ಷದವರಿಗೆ ಮಾತ್ರ ಲಭ್ಯ. ನಮ್ಮಂಥವರಿಗೆ ಇಂಥ ಅವಕಾಶಗಳು ವಿರಳ. ನಾನು ನೋಡಿದಂತೆ ಇದೇ ಮೊದಲು,” ಎಂದು ಆ ಕಾರ್ಯಕ್ರಮ ಆಯೋಜಿಸಿದ ಐಸಿಐಸಿಐ ಬ್ಯಾಂಕ್‌ನವರಿಗೆ (ICICI Bank) ಕೃತಜ್ಞತೆ ಸಲ್ಲಿಸಿದ್ದಾರೆ. ವೃತ್ತಿಯಲ್ಲಿ ವೈದ್ಯರಾದ ಡಾ. ಸುರೇಶ ನಂಬಿಯಾರ್ ಅವರು ನಿರರ್ಗಳವಾಗಿ ಇಂಗ್ಲಿಷ್​ನಲ್ಲಿ ಮಾತನಾಡುತ್ತ ಹಿರಿಯ ಗಾಯಕರಿಗಾಗಿ ವೇದಿಕೆಗಳನ್ನು ಸೃಷ್ಟಿಸುವಂತೆ ಈ ಮೂಲಕ ಕೋರಿದ್ದಾರೆ.

ಇದನ್ನೂ ಓದಿ : Viral Video: ಸಿಗರೇಟು ಭಾಗ್ಯದ ನಾರಿಯರು; ಇದೇನು ನಿಜವೋ ನಾಟಕವೋ ರಾಜಕೀಯದಾಟವೋ?

ಅಷ್ಟೇ ಅಸ್ಖಲಿತವಾಗಿಯೂ ಚೂರೂ ತಪ್ಪಿಲ್ಲದ ಉಚ್ಚಾರಣೆಯೊಂದಿಗೂ ಶಮ್ಮಿ ಕಪೂರ್ (Shammi Kapoor) ಅಭಿನಯದ ಮೊಹಮ್ಮದ್ ರಫಿ ಹಾಡಿದ “ಜವಾನಿಯಾಂ ಯೆ ಮಸ್ತ್ ಮಸ್ತ್ ಬಿನ್ ಪಿಯೇ” ಎಂಬ ಹಾಡನ್ನು ಗಾಯಕ ಶಾನ್ ಅವರೇ ಅಚ್ಚರಿ ಪಡುವಷ್ಟು ಸೊಗಸಾಗಿ ಹಾಡಿದ್ದಾರೆ. ಈ ಅಜ್ಜನ ಯೌವನವನ್ನು ನೋಡಿ ಶನಿವಾರದ ಈ ಸಂಜೆ ನಿಮಗೂ ಕುಡಿಯದೆಯೇ ನಶೆಯೇರುವುದೇ? ತಿಳಿಸಿ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:49 pm, Sat, 1 July 23

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ