Viral Video: ‘ಸಿಗರೇಟು ಭಾಗ್ಯದ ನಾರಿಯರು’ ಇದೇನು ನಿಜವೋ ನಾಟಕವೋ ರಾಜಕೀಯದಾಟವೋ?

Free: ನಡುವಯಸ್ಸಿನ ಮಹಿಳೆಯರು ಒಬ್ಬರಿಗೊಬ್ಬರು ಸಿಗರೇಟು ಹಂಚುತ್ತಾ ಕಡ್ಡಿ ಗೀರಿ ಅಂಟಿಸುತ್ತಾ ಜುರ್ರನೆ ಜುರುಕಿಯೆಳೆದು ಆನಂದಿಸುತ್ತಿದ್ದಾರೆ. “ಯಪ್ಪಾ ಸಿಗರೇಟೂ ಫ್ರೀನಾ? ಇದೊಂದು ಬಾಕಿ ಇತ್ತು” ಸಂಕಟಪಡುತ್ತಿದೆ ಪುರುಷಕುಲ.

Viral Video: 'ಸಿಗರೇಟು ಭಾಗ್ಯದ ನಾರಿಯರು' ಇದೇನು ನಿಜವೋ ನಾಟಕವೋ ರಾಜಕೀಯದಾಟವೋ?
ಮಹಿಳೆಯರ ಗುಂಪು ಸಿಗರೇಟು ಸೇದುತ್ತಿರುವುದು
Follow us
ಶ್ರೀದೇವಿ ಕಳಸದ
|

Updated on:Jul 01, 2023 | 4:09 PM

Cigarette : ಒಂದು ಹಳೆಯ ದೇವಸ್ಥಾನದ ಕಮಾನು (Temple Arch). ಸುತ್ತಲೂ ಆಕಾಶಕ್ಕೆ ಮುಖಮಾಡಿ ಚಾಚಿರುವ ಮರಗಳು. ಅದರೀಚೆಗೆ ವಿಶಾಲವಾದ ಆವಾರ. ದಣಿವಾರಿಸಿಕೊಳ್ಳಲು ಹೇಳಿಮಾಡಿಸಿದ ಜಾಗ ಎಂಬಂತಿದೆ. ಇಲ್ಲಿ ನಡುವಯಸ್ಸಿನ ಮಹಿಳೆಯರ ಗುಂಪೊಂದು ನೆರೆದಿದೆ. ಛಂದಛಂದದ ಸೀರೆಯುಟ್ಟು, ಹಣೆಗೆ ಬೊಟ್ಟಿಟ್ಟು ದೇವರ ದರ್ಶನ ಮುಗಿಸಿಕೊಂಡು ಹೊರಬಂದ ನಡುವಯಸ್ಸಿನ ಸಾಧ್ವಿಯರು ಇಲ್ಲಿ ಸೇರಿದ್ಧಾರೆ. ಅವರೊಂದಿಗೆ ಒಂದಷ್ಟು ತರುಣಿಯರು ಇದ್ದಾರೆ. ತಕ್ಷಣಕ್ಕೆ ನೋಡಿದರೆ, ಪರಸ್ಪರರು ಆರತಿ ತಟ್ಟೆಯ ದೀಪವನ್ನು ಅಂಟಿಸಿಕೊಳ್ಳುತ್ತಿದ್ದಾರೇನೋ ಎಂಬ ಭಾಸವಾಗುತ್ತದೆ. ಒಂದು ಚಿಕ್ಕ ಊರಿನ, ಅಥವಾ ನಮ್ಮ ಬೆಂಗಳೂರಿನ ಹಳೆಯ ಭಾಗಗಳಲ್ಲಿ ಕಾಣುವಂಥ ಸಾಮಾನ್ಯ ನೋಟವಿದು, ವಿಶೇಷವೇನಿಲ್ಲ.

ಆದರೆ ಇಲ್ಲಿ ವಿಶೇಷ ಘಟಿಸುತ್ತದೆ. ಅವರಲ್ಲಿ ಒಬ್ಬಾಕೆಯ ಕೈಯ್ಯಲ್ಲಿ ಸಿಗರೇಟು ಪ್ಯಾಕೆಟು! ಅದನ್ನು ಬಿಚ್ಚಿ ಸುತ್ತ ನೆರೆದ ಗೆಳತಿಯರಿಗೆಲ್ಲ ಒಂದೊಂದೇ ಹಂಚುತ್ತಾಳೆ. ಅವರು ಸಿಗರೇಟು ಹೊತ್ತಿಸಿಕೊಂಡು ಸೇದತೊಡಗುತ್ತಾರೆ. ಇದಕ್ಕೆ ಮಾಲಾಶ್ರೀ ಅಭಿನಯದ, ಮಂಜುಳಾ ಗುರುರಾಜ್​ ಹಾಡಿರುವ ”ನಂಜುಂಡಿ ಕಲ್ಯಾಣ” ಸಿನೆಮಾದ “ಒಳಗೆ ಸೇರಿದರೆ ಗುಂಡು” ಹಾಡಿನ ಹಿನ್ನೆಲೆ ಬೇರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : Viral Video:ಫ್ಯೂಷನ್​ ಪುಚ್ಕಾ; ಕೋಕಾಕೋಲಾ ಐಸು ಎಳನೀರಿನಲ್ಲಿ ಮುಳುಗೇಳುವ ಈ ತಿನಿಸು ಬೇಕೆ?

ಸಿಗರೇಟಿನ ಮೂತಿಗೆ ಬೆಂಕಿ ಹಚ್ಚಿಕೊಂಡು ರೂಢಿಯಿಲ್ಲದ ಒಂದಿಬ್ಬರು ಕಷ್ಟಪಡುತ್ತಿರುವುದನ್ನು ಎಲ್ಲರೂ ನೋಡಿ ನಗುತ್ತಾರೆ. ಬಾಯಲ್ಲಿ ಸಿಗರೇಟು ಇಟ್ಟುಕೊಂಡು ಅದರಿಂದಲೇ ಇನ್ನೊಬ್ಬಾಕೆಯ ಸಿಗರೇಟಿಗೆ ಮುತ್ತಿಕ್ಕಿ ಅದನ್ನು ಹೊತ್ತಿಸುವ ಆ ಪರಿ, ಒಂದು ಬದಿಗೆ ನಿಂತ ಸ್ವಲ್ಪ ವಯಸ್ಸಾದ ಹೆಣ್ಣುಮಗಳೊಬ್ಬಳು ಲೀಲಾಜಾಲವಾಗಿ ಹೊಗೆ ಸೂಸುವ ರೀತಿ…

ಇದನ್ನೂ ಓದಿ : Viral Video: ”ನಾನು ಕೊಳವೆಬಾವಿಯಲ್ಲಿ ಇಳಿಯುತ್ತೇನೆ” 14 ವರ್ಷದ ಬಾಲಕ ಮಗುವನ್ನೆತ್ತಿಕೊಂಡು ಹೊರಬಂದ

ಈ ವಿಡಿಯೋ ಅನ್ನು ಫೇಸ್​ಬುಕ್ಕಿನಲ್ಲಿ ಕಳಲೆ ಪುರುಷೋತ್ತಮ ಎನ್ನುವವರು ಹಂಚಿಕೊಂಡಿದ್ದಾರೆ. ಏನಿದು ವಿಚಿತ್ರ? ಇದೇನು ನಿಜವೋ ನಾಟಕವೋ ಕಣ್ಕಟ್ಟೋ? ಮಹಿಳೆಯರು ಸಾರ್ವಜನಿಕವಾಗಿ ಸೇರಿ ಅದೂ ದೇವಸ್ಥಾನದ ಎದುರು ಸಿಗರೇಟು ಸೇದುತ್ತಿರುವುದು ಮೀರುವಿಕೆಯ ಘೋಷಣೆಯೋ, ಸಮಾನತೆಯ ಸಾರುವಿಕೆಯೋ? ಯಾರದೋ ರಾಜಕೀಯ ತಂತ್ರವೋ, ಲೈಕುಗಳಿಗಾಗಿ ಮಾಡಿದ ಬರಿಯ ಗಿಮಿಕ್ಕೋ? ನಿಮಗೇನೆನ್ನಿಸುತ್ತದೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:08 pm, Sat, 1 July 23

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ