AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video:ಫ್ಯೂಷನ್​ ಪುಚ್ಕಾ; ಕೋಕಾಕೋಲಾ ಐಸು ಎಳನೀರಿನಲ್ಲಿ ಮುಳುಗೇಳುವ ಈ ತಿನಿಸು ಬೇಕೆ?

Fusion Puchka : ಓಯ್ ಬಂಗಾಳಿ​ ಬಾಬೂ, ಇಷ್ಟೆಲ್ಲಾ ತೊಂದರೆ ತೆಗೆದುಕೊಳ್ಳಬೇಡಿ, ಬದಲಾಗಿ ತೊಟ್ಟು ವಿಷ ಕೊಟ್ಟುಬಿಡಿ ಎಂದು ಒಬ್ಬರು. ನೀವು ಹೀಗೆ ರೀಲಿಗೋಸ್ಕರ ಮಾಡ್ತಾನೇ ಇರ್ರಿ, ಖಾಯಂ ಗಿರಾಕಿಗಳನ್ನೂ ಕಳ್ಕೊಳ್ತೀರಿ ಎಂದು ಇನ್ನೊಬ್ಬರು.

Viral Video:ಫ್ಯೂಷನ್​ ಪುಚ್ಕಾ; ಕೋಕಾಕೋಲಾ ಐಸು ಎಳನೀರಿನಲ್ಲಿ ಮುಳುಗೇಳುವ ಈ ತಿನಿಸು ಬೇಕೆ?
ಕೊಲ್ಕತ್ತೆಯ ಬೀದಿಬದಿ ವ್ಯಾಪಾರಿ ಫ್ಯೂಷನ್ ಪುಚ್ಕಾ ತಯಾರಿಸುತ್ತಿರುವ ದೃಶ್ಯ.
ಶ್ರೀದೇವಿ ಕಳಸದ
|

Updated on: Jul 01, 2023 | 3:03 PM

Share

Puchka: ಈ ಬೀದಿಬದಿಯ ತಿಂಡಿ ಮಾರಾಟಗಾರರ ವಿಚಿತ್ರ ಪ್ರಯೋಗಗಳು ಮತ್ತು ಫುಡ್​ ವ್ಲಾಗರ್​​ಗಳ ಹಾವಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂಬಂಥ ಸಂದಿಗ್ಧ ಪರಿಸ್ಥಿತಿ ಉಂಟಾಗಿದೆ. ನೋಡಿ ಮತ್ತೀಗ ಕೋಕಾಕೋಲಾ (Coca Cola), ಎಳನೀರು, ಐಸುಗಡ್ಡೆ ಸೇರಿಸಿ ಈತ ಹೀಗೊಂದು ತಿನಿಸನ್ನು ತಯಾರಿಸಿದ್ದಾನೆ ಇದಕ್ಕೆ ಪುಚ್ಕಾ ಎನ್ನುವುದೋ, ಪಾನೀ ಬಟಾಶಾ (Paani Batasha) ಎನ್ನುವುದೋ, ಗೋಲ್ಗಪ್ಪಾ (Golgappe) ಎನ್ನುವುದೋ ಅಥವಾ ಪಾನೀಪುರಿ (Paani Puri) ಎನ್ನುವುದೋ ನೀವೇ ಹೆಸರಿಸಿ. ಏನು ಕರೆದರೂ ಸರಿ, ನಾಲಗೆಗೆ ರುಚಿ ಎನ್ನಿಸಿದ್ದನ್ನು ಜನ ಮುಗಿಬಿದ್ದು ತಿನ್ನುತ್ತಾರೆ. ನಂತರದ ಪರಿಣಾಮ ಯಾರಿಗೆ ಬೇಕು? ನೋಡಿ ಹೊಸ ಅತ್ಯಾರೋಗ್ಯರ ತಿಂಡಿಯೊಂದು ಆವಿಷ್ಕಾರವಾಗುವ ಈ ಬಗೆಯನ್ನು ನೋಡಿ ಪಾವನರಾಗಿ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ದಿ ಫುಡೀಸ್ ರಿಟ್ರೀಟ್ ರೀಲ್ಸ್ ಎಂಬ ಇನ್‌ಸ್ಟಾಗ್ರಾಮ್ ಪುಟದಲ್ಲಿ ಇದನ್ನು ಪೋಸ್ಟ್​ ಮಾಡಲಾಗಿದೆ. ಈ ಫ್ಯೂಷನ್​ ಪುಚ್ಕಾ ಕೊಲ್ಕತ್ತೆಯ ವಿವೇಕಾನಂದ ಪಾರ್ಕ್​ನಲ್ಲಿ ಲಭ್ಯವಿದೆ ಎಂದು ಈ ಪೋಸ್ಟ್​ನಡಿ ಬರೆಯಲಾಗಿದೆ. ಅನೇಕರು ಈ ತಿನಿಸಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆರೋಗ್ಯಕ್ಕೆ ಮಾರಕವಾಗುವಂಥ ಸಾಮಗ್ರಿಗಳನ್ನು ಇದರಲ್ಲಿ ಹಾಕಲಾಗಿದೆ. ಇಂಥ ಪದಾರ್ಥಗಳನ್ನು ತಿನ್ನುವ ಗೋಜಿಗೇ ನಾನು ಹೋಗಲಾರೆ ಎಂದಿದ್ದಾರೆ ಒಬ್ಬರು.

ಇದನ್ನೂ ಓದಿ : Viral Video: ನಾನು ಕೊಳವೆಬಾವಿಯಲ್ಲಿ ಇಳಿಯುತ್ತೇನೆ; 14 ವರ್ಷದ ಬಾಲಕ ಮಗುವನ್ನೆತ್ತಿಕೊಂಡು ಹೊರಬಂದ

ಕಥೆನೇ ಮುಗಿತು ಬಿಡಿ. ದಯವಿಟ್ಟು ಇದನ್ನು ಯಾರೂ ತಿನ್ನಬೇಡಿ. ನಾನಂತೂ ಮನೆತನಕ ಉಚಿತವಾಗಿ ಕಳಿಸಿಕೊಟ್ಟರೂ ತಿನ್ನಲಾರೆ. ಇಂಥ ಪ್ರಯೋಗಗಳನ್ನು ಇವರೆಲ್ಲ ಯಾವಾಗ ನಿಲ್ಲಿಸುತ್ತಾರೋ… ಅಂತೆಲ್ಲ ಕೋಪದಿಂದ ಪ್ರತಿಕ್ರಿಯಿಸಿದ್ಧಾರೆ ನೆಟ್ಟಿಗರು. ವಾರದ ಹಿಂದೆ ಪೋಸ್ಟ್ ಮಾಡಲಾದ ಈ ರೀಲ್​ ಅನ್ನು ಈತನಕ 10,000ಕ್ಕಿಂತಲೂ ಹೆಚ್ಚು  ಜನರು ನೋಡಿದ್ದಾರೆ. ಹೀಗೆ ಲೈಕ್ಸ್​, ಶೇರ್​​, ಕಮೆಂಟ್​ಗೆಂದೇ ಇಂಥ ಹುಚ್ಚು ಸಾಹಸಕ್ಕೆ ಬೀಳುತ್ತಿದ್ದಾರೋ ಏನೋ ಜನ. ಏನಂತೀರಿ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!