Viral Video: ‘ನಾನು ಕೊಳವೆಬಾವಿಯಲ್ಲಿ ಇಳಿಯುತ್ತೇನೆ’ 14 ವರ್ಷದ ಬಾಲಕ ಮಗುವನ್ನೆತ್ತಿಕೊಂಡು ಹೊರಬಂದ

Humanity : ಇದನ್ನು ನೋಡಿದರೆ ನಿಮ್ಮ ಮೈ ನವಿರೇಳುತ್ತದೆ, ಆತಂಕಕ್ಕೆ ತಳ್ಳುತ್ತದೆ, ಕೊನೆಗೆ ನಿಮ್ಮೆದೆಯನ್ನು ಮೃದುಗೊಳಿಸುತ್ತದೆ, ಮನುಷ್ಯತ್ವದಲ್ಲಿ ಮರಳಿ ನಂಬಿಕೆ ಬರುವಂತೆ ಮಾಡುವ ಈ ಘಟನೆ ನಡೆದದ್ದು ಪೂರ್ವ ಯೂರೋಪಿನ ರೊಮೇನಿಯಾದಲ್ಲಿ.

Viral Video: 'ನಾನು ಕೊಳವೆಬಾವಿಯಲ್ಲಿ ಇಳಿಯುತ್ತೇನೆ' 14 ವರ್ಷದ ಬಾಲಕ ಮಗುವನ್ನೆತ್ತಿಕೊಂಡು ಹೊರಬಂದ
ಮಗುವನ್ನು ಕೊಳವೆಬಾವಿಯಿಂದ ಎತ್ತಿಕೊಂಡು ಬಂದ 14 ವರ್ಷದ ಬಾಲಕ
Follow us
ಶ್ರೀದೇವಿ ಕಳಸದ
|

Updated on:Jul 01, 2023 | 2:09 PM

Baby falls into borewell : ಈ ಘಟನೆ ನಡೆದಿದ್ದು 2017ರಲ್ಲಿ. ಮೂರು ವರ್ಷದ ಹಸುಳೆಯೊಂದು ಸುಮಾರು 50 ಅಡಿ ಆಳದ ಕೊಳವೆಬಾವಿಯೊಳಗೆ ಬಿದ್ದುಬಿಟ್ಟಿದೆ. ಸುತ್ತಲೂ ಜನ ನೆರೆದಿದ್ದಾರೆ. ತಲೆ ಮೇಲೆ ಕೈಹೊತ್ತ ತಂದೆಯ ಆಘಾತ ಅಸಹಾಯತೆಗಳು ಅಲ್ಲಿನ ಇಡೀ ವಾತಾವರಣದಲ್ಲಿ ಕೈಚಾಚಿದರೆ ಮುಟ್ಟಬಹುದಾದಷ್ಟು ಸ್ಪಷ್ಟವಾಗಿವೆ. ರಕ್ಷಣಾ ದಳದವರು ಬಂದು ಹತ್ತು ಗಂಟೆಗಳ ಕಾಲ ಸತತ ಪ್ರಯತ್ನ ಪಟ್ಟರೂ ಆ ಕೂಸನ್ನು ಹೊರತೆಗೆಯಲಾಗುತ್ತಿಲ್ಲ. ಕೊಳವೆಯುದ್ದಕ್ಕೂ ಹಗ್ಗ ಇಳಿಸಿದರೆ ಅದನ್ನು ಹಿಡಿದುಕೊಂಡು ಮೇಲೆ ಬರಬಹುದು ಎಂದು ಅಷ್ಟು ಸಣ್ಣ ಮಗುವಿಗೆ (Baby) ತಿಳಿಯುವುದಾದರೂ ಹೇಗೆ? ಮತ್ತಿನ್ನು ಕೊಳವೆಯ ಬಾಯಿ ತೀರ ಚಿಕ್ಕದು, ದೊಡ್ಡವರು ಇಳಿಯುವಂತಿಲ್ಲ. ಮುಂದೇನಾಗುತ್ತದೆ? ಮತ್ತೆ ವೈರಲ್ ಆದ ಈ ವಿಡಿಯೋ ನೋಡಿ.

ಆಗ ಇದನ್ನೆಲ್ಲ ನೋಡುತ್ತಿದ್ದ 14 ವರ್ಷದ ತೆಳ್ಳಗಿನ ಬಾಲಕನೊಬ್ಬ ತನ್ನ ದೇಹ ಕೊಳವೆಯಲ್ಲಿ ನುಸುಳಬಹುದು ನಾನು ಸಹಾಯ ಮಾಡುತ್ತೇನೆ ಎಂದು ಮುಂದೆ ಬಂದ. ಅವನ ತಲೆಗೆ ಟಾರ್ಚ್ ಕಟ್ಟಿ, ಮೈಸುತ್ತ ಹಗ್ಗ ಬಿಗಿದು ಅವನನ್ನು ತಲೆಕೆಳಗು ಮಾಡಿ ಇಳಿಸಿದರು. ನಂತರ ಆತ ಮೇಲೆ ಬರುತ್ತಿದ್ದಂತೆ ಮೊದಲಿಗೆ ಹುಡುಗನ ಕಾಲುಗಳು ಕಾಣುತ್ತವೆ, ಅರೆಕ್ಷಣಕ್ಕೆ ಅವನ ತಲೆ ಕೈ ಕಂಡು ಅವನ ಕೈಯ್ಯಲ್ಲಿ ಆ ಪುಟ್ಟ ಮಗು ಬದುಕಿದ್ದು ಅಳುತ್ತಿರುವುದನ್ನು ಕಂಡು ನಿಟ್ಟುಸಿರು ಬಿಡುತ್ತೀರಿ.

ಇದನ್ನೂ ಓದಿ : Viral Video:’ನಿನ್ನ ಮಗೂನ್ನೂ ಎತ್ಕೋ!’ ನಾಯಿಯನ್ನು ಒದ್ದವಳ ಮೇಲೆ ಕೋಪಗೊಂಡ ನೆಟ್ಟಿಗರು

ನಮ್ಮಲ್ಲೂ ಮಕ್ಕಳು ಕೊಳವೆ ಬಾವಿಗಳಿಗೆ ಬಿದ್ದು ಅನೇಕ ಸಲ ಮೇಲೆತ್ತಲಾಗದೇ ಅಸುನೀಗಿ ಒಮ್ಮೊಮ್ಮೆ ಪವಾಡಸದೃಶವಾಗಿ ಬದುಕುಳಿದ ಉದಾಹರಣೆಗಳು ಎಷ್ಟೋ ಇವೆ. ಇದು ನಡೆದದ್ದು ದೂರದ ಯಾವುದೋ ದೇಶದಲ್ಲಾದರೂ ದುರಂತ ಮತ್ತು ಮಾನವ ಸಾಹಸದ ಗೆಲುವುಗಳು ನಮ್ಮನ್ನೆಲ್ಲ ತಟ್ಟಿಯೇ ತಟ್ಟುತ್ತವಲ್ಲವೇ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:06 pm, Sat, 1 July 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ