AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ವಿಶ್ರಾಂತಿಯಲ್ಲಿದ್ದ ಪ್ರಯಾಣಿಕರ ಮುಖದ ಮೇಲೆ ನೀರು ಸುರಿಯುತ್ತಿರುವ ಪೊಲೀಸ್; ಆಕ್ರೋಶಗೊಂಡ ನೆಟ್ಟಿಗರು

Police: ಬಹುಶಃ ಗೋಮೂತ್ರವನ್ನು ಸುರಿಯುತ್ತಿರಬಹುದು. ಇಂಡಿಯಾದಲ್ಲಿ ಬಡವರಾಗಿ ಹುಟ್ಟುವುದೇ ಪಾಪ. ವಸಾಹತುಶಾಹಿಯ ಅಮಲೇರಿದವರು ಮಾತ್ರ ಹೀಗೆ ವರ್ತಿಸಲು ಸಾಧ್ಯ ಎಂದು ಟ್ವೀಟಿಗರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

Viral Video: ವಿಶ್ರಾಂತಿಯಲ್ಲಿದ್ದ ಪ್ರಯಾಣಿಕರ ಮುಖದ ಮೇಲೆ ನೀರು ಸುರಿಯುತ್ತಿರುವ ಪೊಲೀಸ್; ಆಕ್ರೋಶಗೊಂಡ ನೆಟ್ಟಿಗರು
ರೈಲು ನಿಲ್ದಾಣದಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ಪ್ರಯಾಣಿಕರಿಗೆ ನೀರು ಸುರಿದು ಎಬ್ಬಿಸುತ್ತಿರುವ ಪೊಲೀಸ್
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ|

Updated on:Jul 01, 2023 | 11:46 AM

Share

Railway Police: ರೈಲಿಗಾಗಿ ಕಾಯುತ್ತ ಪ್ಲ್ಯಾಟ್​ಫಾರ್ಮ್​ ಮೇಲೆಯೇ ನಿದ್ದೆ ಹೋಗಿದ್ದ ಪ್ರಯಾಣಿಕರನ್ನು ಪೊಲೀಸರೊಬ್ಬರು ಬಾಟಲಿಯಿಂದ ಅವರ ಮುಖದ ಮೇಲೆ ಸುರಿಯುತ್ತ ಎಬ್ಬಿಸುತ್ತಿರುವ ದೃಶ್ಯ ಇದೀಗ ವೈರಲ್ ಆಗುತ್ತಿದೆ. ಜೂ. 30ರಂದು ಸ್ವೀಡನ್​  ಉಪ್ಸಲಾ ವಿಶ್ವವಿದ್ಯಾಲಯದಲ್ಲಿ (Uppsala University Sweden) ಪ್ರಾಧ್ಯಾಪಾಕರಾಗಿರುವ ಮತ್ತು ಗಲ್ಫ್​ ನ್ಯೂಸ್​  (Gulf News) ಅಂಕಣಕಾರರೂ ಆಗಿರುವ ಅಶೋಕ್​ ಸ್ವೈನ್​ (Ashok Swain) ಈ ವಿಡಿಯೋ ಟ್ವೀಟ್ ಮಾಡಿ, ದೇಶದ ಹೃದಯ ಮತ್ತು ಬುದ್ಧಿಗೆ ಏನಾಗಿದೆ ಎಂದು ಪ್ರಶ್ನಿಸಿದ್ದಾರೆ. ಈ ವಿಡಿಯೋ ಅನ್ನು ಇದೀಗ ಸುಮಾರು 1 ಲಕ್ಷ ಜನರು ವೀಕ್ಷಿಸಿದ್ದು, 5,000ಕ್ಕಿಂತಲೂ ಹೆಚ್ಚು ಜನ ರೀಟ್ವೀಟ್ ಮಾಡಿ ಆಕ್ರೋಶ ಮತ್ತು ಅಸಮಾಧಾನ ವ್ಯಕ್ತಪಡಿಸಿದ್ಧಾರೆ. ಈ ವಿಡಿಯೋ ಎಲ್ಲಿ ಚಿತ್ರೀಕರಣಗೊಂಡಿದ್ದು ಎನ್ನುವ ಮಾಹಿತಿ ಇಲ್ಲ.

ಒಬ್ಬ ಐಐಟಿಯನ್ ಮತ್ತು ಮಾಜಿ ಐಎಎಸ್ ಅಧಿಕಾರಿಯನ್ನು ರೈಲ್ವೇ ಮಂತ್ರಿಯಾಗಿ ಪಡೆದ ನಾವುಗಳು ಅದೃಷ್ಟವಂತರು. ಅವರ (Ashwini Vaishnaw) ಶೈಕ್ಷಣಿಕ ಅರ್ಹತೆಯನ್ನು ಗಮನದಲ್ಲಿಟ್ಟುಕೊಂಡು ಇಂತಹ ಸಣ್ಣ ಘಟನೆಗಳನ್ನು ನಿರ್ಲಕ್ಷಿಸಬೇಕು ಎಂದು ಒಬ್ಬರು ಬೇಸರದಿಂದ ವ್ಯಂಗ್ಯವಾಡಿದ್ದಾರೆ. ಪೊಲೀಸರು ಬಡವರೊಂದಿಗೆ ಅತ್ಯಂತ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಇಷ್ಟು ಕೀಳಾಗಿ ಕಂಡ ಈ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲೇಬೇಕು ಎಂದು ಮತ್ತೊಬ್ಬರು ಒತ್ತಾಯಿಸಿದ್ಧಾರೆ.

ಇದನ್ನೂ ಓದಿ : Viral Video: ಫೇರೋ ನಾ ನಜರಿಯಾ; ”ಇವರಂತೆ ಈತನಕ ಈ ಹಾಡಿಗೆ ಯಾರೂ ನರ್ತಿಸಿರಲಿಲ್ಲ”

ವಿಮಾನ ನಿಲ್ದಾಣದಲ್ಲಿ ಮೇಲ್ವರ್ಗ ಮತ್ತು ಗಣ್ಯವ್ಯಕ್ತಿಗಳೊಂದಿಗೂ ಪೊಲೀಸರು ಹೀಗೆಯೇ ವರ್ತಿಸುತ್ತಾರೆಯೇ ಅಥವಾ ಈ ಹಿಂದೆ ವರ್ತಿಸಿದ ಉದಾಹರಣೆಗಳಿವೆಯೇ? ಅಲ್ಲದೆ ನಮ್ಮ ದೇಶಕ್ಕೆ ಐಷಾರಾಮಿ ಮತ್ತು ಅತೀವೇಗದ ರೈಲುಗಳು ಅಗತ್ಯವಿದೆಯೇ, ಇಂಥವರ ಕೈಗೆ ಅವು ಎಟಕುತ್ತವೆಯೇ? ಹೀಗಾಗಿ ಸಾಮಾನ್ಯ ದರ್ಜೆಯ ರೈಲುಗಳಿಗಾಗಿ ಕಾಯುತ್ತ ಅಸಹಾಯಕತನದಿಂದ ಅವರು ನಿದ್ದೆಗೆ ಜಾರಿದ್ದಾರೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಸರ್ಕಾರವು ಮೊದಲು ಜನಸಾಮಾನ್ಯರ ಸಮಸ್ಯೆಗಳನ್ನು ಬಗೆಹರಿಸಬೇಕು. ರೈಲ್ವೇ ಪೊಲೀಸರ ಇಂಥ ಕೆಟ್ಟ ನಡತೆ ಮತ್ತು ಅನ್ಯಾಯವನ್ನು ಬಗ್ಗುಬಡಿಯಬೇಕು ಎಂದಿದ್ದಾರೆ ಅನೇಕರು.

ಇದನ್ನೂ ಓದಿ : Viral Video: ಅಮೆರಿಕದ ಶಾಲೆಗಳಿಗಾಗಿ ಬುಲೆಟ್​ ಪ್ರೂಫ್​ ಕೊಠಡಿ; ನೆಟ್ಟಿಗರ ವಿಷಾದ

ನಾಗರಿಕರನ್ನು ಸಮಾನವಾಗಿ ಮತ್ತು ಘನತೆಯಿಂದ ನಡೆಸಿಕೊಳ್ಳುವ ಬಗ್ಗೆ ನಾವು ಯಾಕೆ ಪ್ರಶ್ನಿಸಬಾರದು? ಸರ್ಕಾರಿ ಸಂಬಳ ಪಡೆದ ಮಾತ್ರಕ್ಕೆ ಮನಬಂದಂತೆ ಸಾರ್ವಜನಿಕರೊಂದಿಗೆ ವರ್ತಿಸಬಹುದೆ? ಜನಸಾಮಾನ್ಯರ ವಿಶ್ರಾಂತಿಗಾಗಿ ರೈಲ್ವೆ ಇಲಾಖೆಯು ವಿಶ್ರಾಂತಿ ಕೊಠಡಿಗಳನ್ನು ಒದಗಿಸಬೇಕು ಎಂದು ಹೇಳಿದ್ದಾರೆ ಅನೇಕರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯ ತಿಳಿಸಿ

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:42 am, Sat, 1 July 23

Follow Us
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ

ಶ್ರೀದೇವಿ ಕಳಸದ : ಮುಖ್ಯ ಉಪಸಂಪಾದಕಿ. ವಿಜಯ ಕರ್ನಾಟಕ, ಸುವರ್ಣ ನ್ಯೂಸ್, ಪ್ರಜಾವಾಣಿ ಮತ್ತು ವಿವಿಧ ಮಾಧ್ಯಮ ಸಂಸ್ಥೆಗಳು ಸೇರಿದಂತೆ ಒಟ್ಟು 16 ವರ್ಷಗಳ ಅನುಭವ. ಸಂಗೀತ, ಸಾಹಿತ್ಯ ಮತ್ತು ಲಲಿತ ಕಲೆಗಳಲ್ಲಿ ವಿಶೇಷ ಆಸಕ್ತಿ.

ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!