Viral Video: ಫೇರೋ ನಾ ನಜರಿಯಾ; ‘ಇವರಂತೆ ಈತನಕ ಈ ಹಾಡಿಗೆ ಯಾರೂ ನರ್ತಿಸಿರಲಿಲ್ಲ’

Phero Na Najariya : ನರ್ತಕಿ ಪ್ರಾಂಜಲಿ ಶರ್ಮಾ ಇದೇ ಹಾಡಿಗೆ ಭಾವಾಭಿನಯ ಮಾಡಿದ್ದರು. ಇದೀಗ ದೀಪಿಕಾ ಸಿಂಘ್​ ನರ್ತಿಸಿದ್ದಾರೆ. ಕ್ವಾಲಾ ಚಿತ್ರದ ಈ ಗೀತೆಗೆ ಮಾಂತ್ರಿಕ ಶಕ್ತಿ ಇದ್ದು, ಬೆಚ್ಚಗೆ ತನ್ನ ತೆಕ್ಕೆಯೊಳಗೆಳೆದುಕೊಂಡು ಬಿಡುತ್ತದೆ.

Viral Video: ಫೇರೋ ನಾ ನಜರಿಯಾ; 'ಇವರಂತೆ ಈತನಕ ಈ ಹಾಡಿಗೆ ಯಾರೂ ನರ್ತಿಸಿರಲಿಲ್ಲ'
ದೀಪಿಕಾ ಸಿಂಘ್
Follow us
ಶ್ರೀದೇವಿ ಕಳಸದ
|

Updated on:Jul 01, 2023 | 10:31 AM

Cinema : 1940ರ ದಶಕದ ಕಾಲಕ್ಕೆ ಹೊಂದುವಂತೆ ‘ಕ್ವಾಲಾ’ (Qala) ಸಿನೆಮಾದ ಕಥೆಯನ್ನು ಹೆಣೆಯಲಾಗಿದೆ. ತಾನು ಗಾಯಕಿಯಾಗಬೇಕೆನ್ನುವ ಮಹತ್ವಾಕಾಂಕ್ಷೆಯುಳ್ಳ ಗಾಯಕಿಯ ಜೀವನಗಾಥೆಯನ್ನು ಇದು ನಿರೂಪಿಸುತ್ತದೆ. ಗಟ್ಟಿ ಕಥಾಹಂದರ ಮತ್ತು ಭಾವಪೂರ್ಣ ಸಂಗೀತದ ಮೂಲಕ ಇದು ಜನರ ಮನದಾಳಕ್ಕೆ ಇಳಿಯುತ್ತದೆ. ಈ ಸಿನೆಮಾದ ‘ಫೇರೋ ನಾ ನಜರಿಯಾ’ (Phero na Najariya) ಹಾಡು ಸಂಗೀತಪ್ರಿಯರ ಮನಸೂರೆಗೊಂಡಿದೆ. ಅನೇಕರು ಈ ಹಾಡಿಗೆ ಭಾವಾಭಿನಯ, ನೃತ್ಯವನ್ನು ಮಾಡಿ ರೀಲ್​ಗಳನ್ನು ಮಾಡಿದ್ದಾರೆ. ಆದರೆ ಈ ಹಾಡಿಗೆ ನರ್ತಿಸಿದ ದೀಪಿಕಾ ಸಿಂಘ್ (Deepika Singh)​ ನರ್ತನವನ್ನು ನೆಟ್ಟಿಗರು ಬಹುವಾಗಿ ಪ್ರಶಂಸಿಸುತ್ತಿದ್ದಾರೆ. ನೋಡಿ ಈ ಕೆಳಗಿನ ವಿಡಿಯೋ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Deepika Singh (@deepikasingh150)

ಈತನಕ ನಾನು ಈ ಹಾಡಿನ ಅನೇಕ ರೀಲ್​​ಗಳನ್ನು ನೋಡಿದ್ದೇನೆ. ಆದರೆ ಇದು ಅವೆಲ್ಲವಕ್ಕಿಂತ ಅತ್ಯಂತ ಸುಂದರವಾಗಿದೆ. ಪರಿಪೂರ್ಣತೆ ಮತ್ತು ಶುದ್ಧತೆಯಿಂದ ಕೂಡಿವೆ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಆಹ್​ ಒಡಿಶಿ ನೃತ್ಯದಲ್ಲಿ ಇದನ್ನು ಸಂಯೋಜಿಸಿದ್ದು ಅತ್ಯಂತ ಮನೋಹರವಾಗಿದೆ ಎಂದು ಮತ್ತೊಬ್ಬರು ಹೇಳಿದ್ಧಾರೆ. ಅದ್ಭುತ! ನಾನು ಪಾಕಿಸ್ತಾನದಲ್ಲಿ ಕುಳಿತು ಇದನ್ನು ನೋಡುತ್ತಿದ್ದೇನೆ. ಹೀಗೆ ಸೀರೆಯುಟ್ಟು ಮತ್ತಷ್ಟು ವಿಡಿಯೋಗಳನ್ನು ಮಾಡಿ ಎನ್ನುತ್ತಿದ್ದಾರೆ ಒಬ್ಬರು. ಸರಳವಾದದ್ದು ಉತ್ಕೃಷ್ಟವಾಗಿರುತ್ತದೆ, ಇದಕ್ಕೆ ನಿಮ್ಮ ಈ ನೃತ್ಯವನ್ನು ಉದಾಹರಿಸಬಹುದು ಎಂದು ಮಗದೊಬ್ಬರು ಹೇಳಿದ್ದಾರೆ. ಫೇರೋ ನಾ ನಜರ್​ ಸೇ ನಜರಿಯಾ ಮೂಲ ಹಾಡನ್ನು ಈ ಕೆಳಗಿನ ಲಿಂಕ್​ನಲ್ಲಿ ನೋಡಿ, ಕೇಳಿ… ಅರ್ಧಗಂಟೆಯ ನೀವಿರುವ ಜಗತ್ತನ್ನು ಖಂಡಿತ ಮರೆಯುತ್ತೀರಿ!

ಈ ಸಿನೆಮಾದ ನಿರ್ದೇಶಕರು ಅನ್ವಿತಾ ದತ್​ ಗುಪ್ತನ್ (Anvita Dutt Guptan)​. ಈ ಹಾಡಿಗೆ ಸಂಗೀತ ನೀಡಿದವರು ಅಮಿತ್ ತ್ರಿವೇದಿ (Amit Trivedi). ಈ ಹಾಡಿನ ಸಾಹಿತ್ಯ ಕೌಸರ್​ ಮುನೀರ್ (Kausar Munir) ಮತ್ತು ಇದನ್ನು ಹಾಡಿವರು ಸಿರೀಶಾ ಭಾಗವತಲು (Sireesha Bhagavatula). ಬಹುಶಃ ವಾರಾಂತ್ಯವನ್ನು ನೀವು ಇದೇ ಹಾಡಿನ ಗುಂಗಲ್ಲೇ ಕಳೆಯುವಿರೇನೋ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:30 am, Sat, 1 July 23

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ