Viral Video: ‘ಜಪಾನಿನ ಸುಶಿ’; ಅನ್ನ ಬೇಳೆಯನ್ನು ದಯವಿಟ್ಟು ಅವಮಾನಿಸಬೇಡಿ ಎನ್ನುತ್ತಿರುವ ನೆಟ್ಟಿಗರು

Sushi : ಎಂಥಾ ಸೃಜನಶೀಲತೆ ನಿಮ್ಮದು! ಎಂದು ಕೆಲವೇ ಜನ ಹೇಳಿದ್ದಾರೆ. ಉಳಿದವರೆಲ್ಲ ಸರೀ ಬೈದಿದ್ದಾರೆ ಈ ಪ್ರಯೋಗಕ್ಕೆ. ಒಬ್ಬರಂತೂ ಅಳುತ್ತಲೇ ಇದ್ದೇನೆ ಎಂದಿದ್ದಾರೆ. ಉಳಿದವರಂತೂ ಬೇಳೆಯಂತೆ ಕೊತಕೊತ ಕುದಿಯುತ್ತಿದ್ದಾರೆ.

Viral Video: 'ಜಪಾನಿನ ಸುಶಿ'; ಅನ್ನ ಬೇಳೆಯನ್ನು ದಯವಿಟ್ಟು ಅವಮಾನಿಸಬೇಡಿ ಎನ್ನುತ್ತಿರುವ ನೆಟ್ಟಿಗರು
ಜಪಾನೀ ಖಾದ್ಯ ಮತ್ತು ದಾಲ್​
Follow us
ಶ್ರೀದೇವಿ ಕಳಸದ
|

Updated on:Jul 03, 2023 | 11:47 AM

Japan : ಉತ್ತರ ಕರ್ನಾಟಕದ ಕಡೆ ಹೋದರೆ ಇದು ಅನ್ನ ಬೇಳೆ. ಉತ್ತರ ಭಾರತದ ಕಡೆ ಹೋದರೆ ಇದು ದಾಲ್​ ಚಾವಲ್​ (Dal Chawal) ಬೆಂಗಳೂರಿನಲ್ಲಿ ರೈಸ್​ ದಾಲ್​ (Rice Dal)! ಉಳಿದ ಯಾವ ಪದಾರ್ಥವೂ ಇಲ್ಲದಿದ್ದರೆ ನಡೆಯುತ್ತದೆ. ಊಟಕ್ಕೆ ಈ ಸರಳ ಮತ್ತು ಪೌಷ್ಠಿಕವಾದ ಖಾದ್ಯ ಮಾತ್ರ ಇರಲೇಬೇಕು. ಇದೀಗ ಇದು ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದೆ. ಅನ್ನದಿಂದ ಮಾಡುವ ಸುಶಿ ಎಂಬ ಜಪಾನೀ ಖಾದ್ಯದ ಬಗ್ಗೆ ನಿಮಗೆ ಗೊತ್ತಿರಬಹುದು. ಅನ್ನದ ರೋಲ್​ನಲ್ಲಿ ಮೀನುಗಳನ್ನು ಹಾಕುತ್ತಾರೆ ಇಲ್ಲವೇ ತರಕಾರಿಗಳನ್ನೂ ಹಾಕುತ್ತಾರೆ. ಆದರೆ ಇದೀಗ ವೈರಲ್ ಆಗಿರುವ ಈ ರೋಲ್​ಜೊತೆ ಬೇಳೆ ಪದಾರ್ಥವನ್ನೂ ಬಡಿಸಿದ್ದಾರೆ ಅನುಶ್ರೀ ಎಂಬ ಇನ್​ಸ್ಟಾಗ್ರಾಂ ಖಾತೆದಾರರು. ನೆಟ್ಟಿಗರಂತೂ ಸಿಟ್ಟಿಗೆದ್ದಿದ್ದಾರೆ, ಇದು ನಮ್ಮ ಅನ್ನ ಮತ್ತು ಬೇಳೆಗೆ ಮಾಡುವ ಅವಮಾನ ಎಂದು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Anushree (@anushreebhutada)

ಓಹ್ ದೇವರೇ! ಅನ್ನ ಮತ್ತು ಬೇಳೆಯಿಂದ ನಾನು ಸುಶಿ ತಯಾರಿಸಿದೆ ಎಂದು ಅನುಶ್ರೀ ವಿಡಿಯೋಗೆ ಒಕ್ಕಣೆ ಬರೆದಿದ್ದಾರೆ. ಇದಕ್ಕೆ ಉಪಯೋಗಿಸಿದ ಸಾಮಗ್ರಿಗಳ ಪಟ್ಟಿಯನ್ನೂ ನೀಡಿದ್ದಾರೆ; ಅಕ್ಕಿ, ದಾಳಿಂಬೆ ಮತ್ತು ಬೆಳ್ಳುಳ್ಳಿ ಚಟ್ನಿ, ಈರುಳ್ಳಿ ಮತ್ತು ಬೇಳೆ. ಆದರೆ ನೆಟ್ಟಿಗರು, “ದಯವಿಟ್ಟು ಅಡುಗೆಯನ್ನು ಈ ರೀತಿ ಅವಮಾನಿಸಬೇಡಿ” ಎಂದಿದ್ದಾರೆ. “ನಾನಂತೂ ಕೂತು ಅಳುತ್ತಿದ್ದೇನೆ, ದಯವಿಟ್ಟು ಹೀಗೆಲ್ಲ ಪ್ರಯೋಗ ಮಾಡಬೇಡಿ” ಎಂದು ಮತ್ತೊಬ್ಬರು.

ಇದನ್ನೂ ಓದಿ : Viral Video: ವಿಶೇಷ ಮಕ್ಕಳ ಕ್ಷೌರದಂಗಡಿ; ಮನದುಂಬಿ ಪ್ರತಿಕ್ರಿಯಿಸುತ್ತಿರುವ ಬಿಲ್ಲಿಯ ಗ್ರಾಹಕರು

ಬೇಡ ಬೇಡ ಬೇಡವೇ ಬೇಡ ಎಂದು ಅನೇಕರು ಹೇಳಿದ್ದಾರೆ. ಆಹಾ ಎಂಥಾ ವಿಶಿಷ್ಟ ಪರಿಕಲ್ಪನೆ, ನಿಮ್ಮ ಸೃಜನಶೀಲತೆಯನ್ನು ಪ್ರೀತಿಸುತ್ತಿದ್ದೇನೆ ಎಂದು ಕೆಲವರು ಮಾತ್ರ ಹೇಳಿದ್ದಾರೆ. ಈತಕ ಸುಮಾರು 2 ಮಿಲಿಯನ್ ಜನರು ಈ ವಿಡಿಯೋ ನೋಡಿದ್ದಾರೆ. ಈ ಪ್ರಯೋಗದ ಬಗ್ಗೆ ನಿಮ್ಮ ಅನಿಸಿಕೆ ಏನು? ಇದು ಜಪಾನಿನ ಸುಶಿಯೋ ಭಾರತದ ಅನ್ನ ಬೇಳೆಯೋ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:45 am, Mon, 3 July 23

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್