Viral Video: ಎಎಸ್ಎಂಆರ್ ಕಲೆ: ಗುಜರಿ ಅಂಗಡಿಗೆ ಹಾಕಿದ ಟೈಪ್​ರೈಟರ್ ಹುಡುಕುವ ಆಲೋಚನೆ ಬಂದೀತು!

Typewriter Art : ಸ್ಪಾಸ್ಟಿಕ್ ಸೆರೆಬ್ರಲ್ ಪಾಲ್ಸಿಯಿಂದಾಗಿ ಸಾಂಪ್ರದಾಯಿಕ ಚಿತ್ರಕಲೆಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಗದ ಪೌಲ್​ ಸ್ಮಿತ್ ಎಂಬ ಕಲಾವಿದರನ್ನು ಇದು ನೆನಪಿಸುವಂತಿದೆ. ಒಮ್ಮೆ ಒಳಹೊಕ್ಕು ನೋಡಿ ಈ ಇನ್​ಸ್ಟಾ ಪ್ರೊಫೈಲನ್ನು!

Viral Video: ಎಎಸ್ಎಂಆರ್ ಕಲೆ: ಗುಜರಿ ಅಂಗಡಿಗೆ ಹಾಕಿದ ಟೈಪ್​ರೈಟರ್ ಹುಡುಕುವ ಆಲೋಚನೆ ಬಂದೀತು!
ಟೈಪರೈಟರ್ ಕಲಾವಿದ ಜೇಮ್ಸ್​ ಕುಕ್​ ತನ್ನ ಕಲಾಕೃತಿಯೊಂದಿಗೆ.
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jul 01, 2023 | 6:29 PM

Art : ನೀವು Autonomous Sensory Meridian Response -ASMR Art ಬಗ್ಗೆ ಕೇಳಿದ್ದೀರಾ? ASMR ಎಂದರೆ ಒಂದು ಬಗೆಯ ಜುಮ್ಮೆನ್ನಿಸುವ ಸಂವೇದನೆ. ಅದು ನೆತ್ತಿಯಿಂದ ಶುರುವಾಗಿ ಕತ್ತಿನ ಹಿಂಭಾಗದಿಂದ ಬೆನ್ನೆಲುಬಿನವರೆಗೆ ವಿಸ್ತರಿಸುವ ಒಂದು ಅಕಾರಣ ಅಥವಾ ಯಾವುದೇ ಸ್ಪಷ್ಟ ಕಾರಣವಿರದೇ ಬರುವ ಒಂದು ಆಹ್ಲಾದಕರ ಭಾವ. ಇದನ್ನು ಕನ್ನಡದಲ್ಲಿ “ಸ್ವಾಯತ್ತ ಸಂವೇದನೆಯ ಉಚ್ಛ್ರಾಯದ ಪ್ರತಿಕ್ರಿಯೆ” ಎನ್ನಬಹುದು. ಇಂಥ ಭಾವನೆಗಳನ್ನು ಉದ್ದೀಪಿಸುವ ಒಂದು ಕಲಾ ಪ್ರಕಾರವೇ ಇದೆ. ಅದೇ ASMR ಕಲೆ. ಯಾವುದೋ ತೀವ್ರವಾದ ಧ್ಯಾನಸ್ಥ ಸ್ಥಿತಿಯಲ್ಲಿ ಎಡೆಬಿಡದ ಪ್ರಯತ್ನದಿಂದ ಅಥವಾ ಒಂದು ರೀತಿಯ ಟ್ರಾನ್ಸ್ ಉತ್ತುಂಗಕ್ಕೆ ಹೋದಾಗ ಸೃಷ್ಟಿಗೊಳ್ಳುವ ಈ ಕಲಾಕೃತಿಗಳು ನೋಡುಗರನ್ನೂ ಕ್ಷಣಕಾಲವಾದರೂ ಆ ದಿವ್ಯ ಸ್ಥಳಕ್ಕೆ ಕರೆದೊಯ್ಯಬಲ್ಲುದು ಎನ್ನುತ್ತದೆ. ಈ ಕಲಾವಿದರು ತಮ್ಮ ಸೃಷ್ಟಿಕಾರ್ಯದಲ್ಲಿ ನಿರತರಾದಾಗಲೇ ಅದನ್ನು ನೋಡುತ್ತಿದ್ದರೆ ನಾವೂ ಅದರಾಳಕ್ಕೆ ಇಳಿದಂಥ ಭಾವನೆ ಬರುತ್ತದೆ. ಇದಕ್ಕೆ ಒಂದು ಉದಾಹರಣೆಯಾಗಿ ಸಮುದ್ರದ ಅಲೆಗಳನ್ನು ಚಿತ್ರಿಸುತ್ತಿರುವ ಕಲಾವಿದರ ಈ ವಿಡಿಯೋವನ್ನು ನೋಡಬಹುದು.

View this post on Instagram
ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

A post shared by James Cook Artwork (@jamescookartwork)

ಇದನ್ನೂ ಓದಿ : Viral Video: 73 ವರ್ಷದ ವೈದ್ಯರಿಗೆ ಮೊದಲ ಸಲ ಹಾಡಲು ವೇದಿಕೆ ಸಿಕ್ಕಾಗ

ಹಳೆಯ Typewriter ಸಹಾಯದಿಂದ ಜೇಮ್ಸ್​ ಕುಕ್​ (James Cook) ಎಂಬ ಕಲಾವಿದರು ಈ ಕಲಾಕೃತಿಯನ್ನು ನಿರ್ಮಿಸುವಲ್ಲಿ ತಲ್ಲೀನರಾಗಿದ್ಧಾರೆ. ಅವರ ಕೌಶಲ, ತಾದಾತ್ಮ್ಯ, ಕಲಾವಂತಿಕೆ ಮತ್ತು ಕೊನೆಯಲ್ಲಿ ತೋರುವ ಅಗಾಧ ದರ್ಶನದಿಂದಾಗಿ ನಮ್ಮಲ್ಲಿ ಒಂದು ರೀತಿಯ ಆನಂದ ಹಾಗೂ ಶಾಂತಿಯನ್ನು ಮೂಡಿಸುತ್ತದೆ. ಈ ವಿಡಿಯೋ ಅನ್ನು ಈಗಾಗಲೇ 10 ಲಕ್ಷ ಜನ ಮೆಚ್ಚಿದ್ದಾರೆ.  ಸ್ಪಾಸ್ಟಿಕ್ ಸೆರೆಬ್ರಲ್ ಪಾಲ್ಸಿಯಿಂದಾಗಿ (static cerebral palsy) ಸಾಂಪ್ರದಾಯಿಕ ಕಲೆಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಗದ ಪೌಲ್​ ಸ್ಮಿತ್ (Paul Smith) ಎಂಬ ಕಲಾವಿದರನ್ನು ಇದು ನೆನಪಿಸುತ್ತಿದೆ. ಅವರು ಟೈಪ್​ರೈಟರ್​ ಮೂಲಕ ಕಲಾಸೃಷ್ಟಿಯ ಮಾರ್ಗವನ್ನು ಕಂಡುಕೊಂಡವರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 6:22 pm, Sat, 1 July 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್