AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕಾರ್​ ಡ್ರೈವರ್​​ಗಳು ಕಾರಿನಲ್ಲಿ ಟೂತ್​ಪೇಸ್ಟ್​ ಯಾಕೆ ಇಟ್ಟುಕೊಂಡಿರುತ್ತಾರೆ ಗೊತ್ತೆ?

Toothpaste : ಲಕ್ಷಗಟ್ಟಲೆ ಜನ ಈ ವಿಡಿಯೋ ನೋಡಿದ್ಧಾರೆ. ಹೌದು, ಈ ವಿಡಿಯೋದಲ್ಲಿ ಹೇಳಿದ ಹಾಗೆ ನಾನು ಮಾಡಿ ನೋಡಿದೆ, ನಿಜಕ್ಕೂ ಇದು ಪ್ರಯೋಜಕಾರಿ ಎಂದು ಹಲವಾರು ಜನ ಪ್ರತಿಕ್ರಿಯಿಸುತ್ತಿದ್ದಾರೆ.

Viral Video: ಕಾರ್​ ಡ್ರೈವರ್​​ಗಳು ಕಾರಿನಲ್ಲಿ ಟೂತ್​ಪೇಸ್ಟ್​ ಯಾಕೆ ಇಟ್ಟುಕೊಂಡಿರುತ್ತಾರೆ ಗೊತ್ತೆ?
ಕಾರಿನ ಸ್ಕ್ರ್ಯಾಚ್​​ಗೆ ಟೂತ್​ಪೇಸ್ಟ್​ ಹಚ್ಚುತ್ತಿರುವುದು
TV9 Web
| Updated By: ಶ್ರೀದೇವಿ ಕಳಸದ|

Updated on:Jul 03, 2023 | 3:10 PM

Share

Car Driver : ಅನುಭವಿ ಮತ್ತು ವೃತ್ತಿಪರ ಕಾರ್​ ಡ್ರೈವರ್​ಗಳು  ಸದಾ ಪ್ರಯಾಣದಲ್ಲಿರುತ್ತಾರೆ. ಅವರಳ ಬಳಿ ಟೂತ್​ಪೇಸ್ಟ್​ ಇರುತ್ತದೆ. ಯಾಕೆ? ಅವರಿಗೆ ಹಲ್ಲುಜ್ಜಲು ಟೂತ್​ಪೇಸ್ಟ್​ (Toothpaste) ಬೇಕು ಎಂಬ ಉತ್ತರ ಯಾರಿಗಾದರೂ ಹೊಳೆಯುವಂಥದ್ದು. ಆದರೆ ಅದು ತಪ್ಪು. ಹೇಗೆ ತಪ್ಪು ಎಂದು ನೀವು ಹುಬ್ಬೇರಿಸಬಹುದು. ಟೂತ್​ಪೇಸ್ಟ್ ಅನ್ನು ಹಲ್ಲಿಗೆ ಉಜ್ಜದೇ ಇನ್ನು ಕಾರಿನ ಮೂತಿಗೆ ಉಜ್ಜೋದಕ್ಕಾಗುತ್ತದೆಯೇ? ಎಂದು ಹುಸಿಕೋಪ ಮತ್ತು ತುಸು ಕೊಂಕಿನಿಂದ ನೀವು ಕೇಳಬಹುದು. ಆದರೆ ಇದೇ ನಿಜವಾದ ಉತ್ತರ! ಅದು ಹೇಗೆ ಎನ್ನುತ್ತೀರಾ? ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ಕೆಳಗಿನ ವಿಡಿಯೋ ನೋಡಿ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by @uccu.r

ನಿಮ್ಮ ತಪ್ಪಿನಿಂದಲೋ ಅಥವಾ ಬೇರೆಯವರ ತಪ್ಪಿನಿಂದಲೋ ನಿಮ್ಮ ಕಾರ್​ ಸ್ಕ್ರ್ಯಾಚ್​ಗೆ ಒಳಗಾಗುತ್ತದೆ ಎಂದುಕೊಳ್ಳಿ. ಅಯ್ಯೋ ಇದಕ್ಕಿನ್ನು ಸಾವಿರಾರು ರೂಪಾಯಿ ಖರ್ಚು ಮಾಡಬೇಕು, ಅಲ್ಲದೇ ಆ ಪ್ಯಾಚ್ ಬೇರೆ​ ಹಾಗೆಯೇ ಉಳಿದುಕೊಂಡುಬಿಡುತ್ತದೆ ಎಂದು ಚಿಂತಿಸಬೇಕಿಲ್ಲ. ಹಾಗಿದ್ದರೆ ಏನು ಮಾಡಬೇಕು ಎಂದು ಮೇಲಿನ ವಿಡಿಯೋದಲ್ಲಿ ನೋಡಿದಿರಿ. ಹಾಗೆಯೇ ತುಂಬಾ ದಿನಗಳ ಮೇಲೆ ಕಾರಿನ ಗಾಜನ್ನು ಒರೆಸಬೇಕೆಂದರೆ ವೈಪರ್​​ನ ಒಳಮೈತುಂಬಾ ಪೇಸ್ಟ್​ ಹಚ್ಚಿಬಿಡುವುದು. ಹಾಗೆ ಇಲಿಗಳು ಎಂಜಿನ್​ ವಯರ್​ ಕತ್ತರಿಸುತ್ತಿರುತ್ತವೆ, ಅದಕ್ಕೂ ಪೇಸ್ಟ್ ಮದ್ದು!

ಇದನ್ನೂ ಓದಿ : Viral Video: ಮಟಮಟ ಮಧ್ಯಾಹ್ನ ಮಟನ್​ ಮ್ಯಾಗೀ, ಬೆಲೆ ಕೇವಲ ರೂ. 600!

ಈ ವಿಡಿಯೋ ಎಷ್ಟು ಉಪಯುಕ್ತವಾಗಿದೆಯಲ್ಲ ಎಂದು ಅನ್ನಿಸಿದಾಗೆಲ್ಲ ವಿಷಯದ ಬಗ್ಗೆ ಖಚಿತಪಡಿಸಿಕೊಳ್ಳಲು ಕಮೆಂಟ್​ ಸೆಕ್ಷನ್​ಗೆ ಹೋಗುತ್ತೇನೆ ಎಂದಿದ್ದಾರೆ ಒಬ್ಬರು. ಹೌದು ಹೌದು ನಾವೂ ಹಾಗೇ ಎಂದಿದ್ದಾರೆ ಹಲವಾರು ಜನ. ನಾ ಕೂಡ ಹೀಗೆ ಟೂತ್​ಪೇಸ್ಟ್​ ಬಳಸುತ್ತೇನೆ ಕಾರಿಗೆ ಎಂದಿದ್ದಾರೆ ಕೆಲವರು. ಯಾವುದೇ ಬಗೆಯ ಟೂತ್​ಪೇಸ್ಟ್​ ಪರವಾಗಿಲ್ವಾ ಎಂದು ಕೇಳಿದ್ದಾರೆ ಕೆಲವರು. ನನ್ನ ಕಾರಿನ ವಯರುಗಳನ್ನು ಇಲಿಗಳು ಕಡೆಯದಂತೆ ದಾಲ್ಚಿನ್ನಿ ದ್ರಾವಣ ಸಿಂಪಡಿಸುತ್ತಿದ್ದೆ, ಇನ್ನು ಪೇಸ್ಟ್​ ಹಚ್ಚಿ ನೋಡುವೆ ಎಂದಿದ್ದಾರೆ ಮತ್ತೊಬ್ಬರು. ಮಂಜಿನಿಂದ ಮಬ್ಬಾದ ಗಾಜುಗಳನ್ನು ಇದು ಬೇಗನೆ ಸ್ವಚ್ಛಗೊಳಿಸುತ್ತದೆ ಎಂದಿದ್ಧಾರೆ ಇನ್ನೂ ಒಬ್ಬರು. ಹಲ್ಲುಜ್ಜುವುದನ್ನು ಬಿಟ್ಟು ಟೂತ್​ಪೇಸ್ಟ್​ನಿಂದ ಏನೇನೆಲ್ಲ ಪ್ರಯೋಜನ ಇದೆ ಎಂಬ ಮಾಹಿತಿಯ ಮಹಾಪೂರವೇ ಈ ಪೋಸ್ಟಿಗೆ ಹರಿದು ಬಂದಿದೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:06 pm, Mon, 3 July 23

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!