Viral: ಅಮೆರಿಕದ ‘ಫ್ರೆಂಡ್ಸ್’ ಮೋನಿಕಾ ಮತ್ತು ಚಾಂಡ್ಲರ್ ಭಾರತಕ್ಕೆ ಏಕೆ ಬಂದಿದ್ದಾರೆ?

Friends : ರಾಚೆಲ್​, ಫೋಯೆಬ್​, ರೋಸ್, ಗಿನಾ, ಅಲೆಕ್ಸ್​ ಕೂಡ ಬಂದಿದ್ದಾರೆ. ಬರಲಿ ಅದಕ್ಕೇನಿಲ್ಲ, ಆದರೆ ಭಾರತೀಯ ಉಡುಗೆಯಲ್ಲಿ ಇವರುಗಳೆಲ್ಲ ಯಾಕೆ ಹೀಗೆ ಕಂಗೊಳಿಸುತ್ತಿರುವುದು? ನೋಡಿ ನಿಮಗೇನಾದರೂ ಹೊಳೆಯುತ್ತದೆಯೇ?

Viral: ಅಮೆರಿಕದ 'ಫ್ರೆಂಡ್ಸ್' ಮೋನಿಕಾ ಮತ್ತು ಚಾಂಡ್ಲರ್ ಭಾರತಕ್ಕೆ ಏಕೆ ಬಂದಿದ್ದಾರೆ?
ಫ್ರೆಂಡ್ಸ್​ ಖ್ಯಾತಿಯ ಚಾಂಡ್ಲರ್ ಮತ್ತು ಮೋನಿಕಾ
Follow us
ಶ್ರೀದೇವಿ ಕಳಸದ
|

Updated on: Jul 04, 2023 | 2:13 PM

Artificial Intelligence : ದಿನಬೆಳಗಾದರೆ ಈ ಎಐ ಕಲಾವಿದರ ಕೈಗೆ ಯಾರೆಲ್ಲ ಈವತ್ತು ಸಿಕ್ಕಿಹಾಕಿಕೊಳ್ಳುತ್ತಾರೆ ಎಂದು ಕಾಯುವುದೇ ಒಂದು ಕುತೂಹಲಕರ ಸಂಗತಿಯಾಗಿದೆ. ನಿನ್ನೆಯಷ್ಟೇ ಝೊಮ್ಯಾಟೋ ವಿಶ್ವಪ್ರಸಿದ್ಧ ವ್ಯಕ್ತಿಗಳನ್ನು ತನ್ನ ಬಾಣಸಿಗರನ್ನಾಗಿ ನೇಮಿಸಿಕೊಂಡಿತ್ತು. ಇದೀಗ ವೈರಲ್ ಆಗುತ್ತಿರುವ ಅಮೆರಿಕನ್​ ವೆಬ್​ ಸೀರೀಸ್​ ‘ಫ್ರೆಂಡ್ಸ್’​ (Friends, Web Series) ಖ್ಯಾತಿಯ ತಾರಾಗಣವೆಲ್ಲಾ ಇಲ್ಲಿ ಬಂದಿದೆ. ಮೋನಿಕಾ ಮತ್ತು ಚಾಂಡ್ಲರ್​, ರೋಸ್​ ಮತ್ತು ರಾಚೆಲ್​, ಫೋಯೆಬ್ ಮತ್ತು ಮೈಕ್​ ಇವರನ್ನು ಭಾರತದ ಸಾಂಪ್ರದಾಯಿಕ ಉಡುಗೆ ತೊಡುಗೆ ಮತ್ತು ಅಲಂಕಾರದಲ್ಲಿ ಕಂಗೊಳಿಸುವಂತೆ ಮಾಡಿದ್ದಾರೆ ಎಐ ಕಲಾವಿದರು.

ಈ ಟ್ವೀಟ್ ನೋಡಿದ ನೆಟ್ಟಿಗರು ಎಐ ಕಲಾವಿದರ ಕೈಚಳಕವನ್ನು ಕೊಂಡಾಡುತ್ತಿದ್ದಾರೆ. ಇವರು ಪರದೇಶಿಗರು ಎಂದು ಅನ್ನಿಸುವುದೇ ಇಲ್ಲ. ಅಂಥ ಕಳೆಯನ್ನು ಕಲೆಯ ಮೂಲಕ ಹೊಮ್ಮಿಸಿದ್ದೀರಿ ಎಂದಿದ್ದಾರೆ ಒಬ್ಬರು. ಮೋನಿಕಾ ಯಾವ ವಸ್ತ್ರವಿನ್ಯಾಸದಲ್ಲಿಯೂ ಅಂದವಾಗಿಯೇ ಕಾಣುತ್ತಾಳೆ ಎಂದಿದ್ದಾರೆ ಇನ್ನೊಬ್ಬರು. ಈ ಜೋಡಿಯನ್ನು ಈ ಉಡುಪಿನಲ್ಲಿ ನಾನು ಕಲ್ಪಿಸಿಕೊಂಡಿರಲೇ ಇಲ್ಲ, ಸೃಜನಶೀಲತೆ ಎಂದರೆ ಇದೇ ಅಲ್ಲವೆ? ಎಂದಿದ್ದಾರೆ ಇನ್ನೂ ಒಬ್ಬರು.

ರೋಸ್ ಮತ್ತು ರಾಚೆಲ್! ಅತ್ಯುದ್ಭುತವಾಗಿ ಕಾಣಿಸುತ್ತಿದ್ದಾರೆ ಎಂದು ಕೆಲವರು ಹೇಳಿದ್ದಾರೆ. ಕೆಲವೊಬ್ಬರು ಯಾವ ಉಡುಗೆಯಲ್ಲಿಯೂ ಛಂದವಾಗಿಯೇ ಕಾಣಿಸುತ್ತಾರೆ, ಇಲ್ಲಿರುವ ಎಲ್ಲರೂ ಆಕರ್ಷಕವಾಗಿ ಕಾಣುತ್ತಿದ್ದಾರೆ. ಕಲಾವಿದರಿಗೆ ಧನ್ಯವಾದ ಎಂದು ಒಬ್ಬರು ಹೇಳಿದ್ದಾರೆ. ಅಭಿನವ ಕುಮಾರ್​ ಎನ್ನುವವರು ಈ ಫೋಟೋ ಟ್ವೀಟ್ ಮಾಡಿದ್ದಾರೆ. ಈಗಾಗಲೇ ಸುಮಾರು 8 ಲಕ್ಷಕ್ಕಿಂತಲೂ ಹೆಚ್ಚು ಜನರು ನೋಡಿದ್ದಾರೆ.

ಈ ಎಐ ಕಲೆ ಹೀಗೇ ಮುಂದುವರೆದರೆ ಫೋಟೋ ಸ್ಟುಡಿಯೋಗಳು ಪೂರ್ತಿ ಬಂದ್ ಆಗುವುದರಲ್ಲಿ ಸಂಶಯವಿಲ್ಲ ಎಂದಿದ್ಧಾರೆ ಒಬ್ಬರು. ಅರೆ ಇಲ್ಲಿ ಜಾಯ್​ ಕಾಣುತ್ತಿಲ್ಲವಲ್ಲ? ಎಂದು ಆತನನ್ನು ಹುಡುಕಿದ್ದಾರೆ ಒಬ್ಬರು. ಫ್ರೆಂಡ್ಸ್​ ಸೀರೀಸ್​ ಭಾರತೀಯ ಶೈಲಿಯಲ್ಲಿ ಪ್ರಸ್ತುತವಾದರೆ ಖಂಡಿತ ನಗೆಯ ಕಡಲಿನಲ್ಲಿ ನೀವೆಲ್ಲ ತೇಲುತ್ತೀರಿ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​​​ಗಾಗಿ ಕ್ಲಿಕ್ ಮಾಡಿ

Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್
ಬಿಎಂಟಿಸಿ ಟಿಕೆಟ್ ದರ ಹೆಚ್ಚಿರುವ ಬೆನ್ನಲ್ಲೇ ಮೆಟ್ರೋ ಪ್ರಯಾಣ ದರ ಏರಿಕೆ!
ಬಿಎಂಟಿಸಿ ಟಿಕೆಟ್ ದರ ಹೆಚ್ಚಿರುವ ಬೆನ್ನಲ್ಲೇ ಮೆಟ್ರೋ ಪ್ರಯಾಣ ದರ ಏರಿಕೆ!
ಜನಪ್ರತಿನಿಧಿಗಳು ಎಲೆಕ್ಟ್ರಾನಿಕ್ ಮಾಧ್ಯಮಗಳ ನ್ಯೂಸ್ ವೀಕ್ಷಿಸುವುದಿಲ್ಲವೇ?
ಜನಪ್ರತಿನಿಧಿಗಳು ಎಲೆಕ್ಟ್ರಾನಿಕ್ ಮಾಧ್ಯಮಗಳ ನ್ಯೂಸ್ ವೀಕ್ಷಿಸುವುದಿಲ್ಲವೇ?