Viral Video: ತಾಳುವಿಕೆಗಿಂತನ್ಯ ತಪವು ಇಲ್ಲ; ಆಟೋಗಾಗಿ ಸರದಿಯಲ್ಲಿ ನಿಂತಿರುವ ಮುಂಬೈಕರ್ಸ್

Auto Queue : ಮುಂಬೈ ಸ್ಪಿರಿಟ್​ ಎಂಬ ಟ್ಯಾಗ್​​ಲೈನಿನಡಿ ಈ ವಿಡಿಯೋ ವೈರಲ್ ಆಗುತ್ತಿದೆ. ಇಲ್ಲಿರಲು ಬಯಸುವವರಿಗೆ ಮಹಾನಗರಿ ತಾಳ್ಮೆಯನ್ನು ಹೇಗೆ ಕಲಿಸುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ಈ ಒಂದು ವಿಡಿಯೋ ಸಾಕು.

Viral Video: ತಾಳುವಿಕೆಗಿಂತನ್ಯ ತಪವು ಇಲ್ಲ; ಆಟೋಗಾಗಿ ಸರದಿಯಲ್ಲಿ ನಿಂತಿರುವ ಮುಂಬೈಕರ್ಸ್
ಮುಂಬೈನ ದೊಂಬಿವಿಲಿಯಲ್ಲಿ ಆಟೋಗಾಗಿ ಸರದಿಯಲ್ಲಿ ನಿಂತಿರುವ ಜನರು
Follow us
ಶ್ರೀದೇವಿ ಕಳಸದ
|

Updated on:Jul 04, 2023 | 10:49 AM

Mumbai: ಒಂದು ನಿಮಿಷ, ಹತ್ತು ಸೆಕೆಂಡಿನ ಈ ವಿಡಿಯೋದಲ್ಲಿ ಪ್ಲ್ಯಾಟ್​ಫಾರ್ಮ್​​, ಮೆಟ್ಟಿಲುಗಳು, ನಿಲ್ದಾಣದ ಆವರಣ ಮತ್ತದನ್ನು ದಾಟಿಯೂ ಜನ ಹೀಗೆ ಸರದಿಯಲ್ಲಿ ನಿಂತಿದ್ದಾರೆಂದರೆ ಯೋಚಿಸಿ. ಇವರಿಗೆಲ್ಲ ಅದೆಷ್ಟು ತಾಳ್ಮೆಯನ್ನು ಮುಂಬೈ ಎಂಬ ಮಹಾನಗರಿ ಧಾರೆ ಎರೆದಿರಬಹುದು ಎಂದು. ರೈಲು ಪ್ರಯಾಣ (Train Journey) ಮುಗಿಸಿ ತಮ್ಮ ಮನೆಗಳಿಗೆ ಹೋಗಲು ಆಟೋಗಾಗಿ ಕಾಯುತ್ತ ನಿಂತಿದ್ದಾರೆ. ಇದೀಗ ಈ ವಿಡಿಯೋ ಅನ್ನು ಸಾಮಾಜಿಕ ಜಾಲತಾಣಿಗಳು ಅಚ್ಚರಿಯಿಂದ ನೋಡುತ್ತ ಪ್ರತಿಕ್ರಿಯಿಸುತ್ತಿದ್ದಾರೆ. ಮುಂಬೈನ ದೊಂಬಿವಿಲಿಯಲ್ಲಿ ನಿತ್ಯದ ಸಂಜೆಗಳು ಹೀಗೇ ಇರುತ್ತವೆ ಎನ್ನುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. #MumbaiSpirit ನಡಿ ಇದೀಗ ವೈರಲ್ ಆಗುತ್ತಿದೆ.

ಈ ವಿಡಿಯೋ ಅನ್ನು ಜೂ. 29 ರಂದು ಪೋಸ್ಟ್ ಮಾಡಲಾಗಿದೆ. ಇದನ್ನು ವೀಕ್ಷಿಸಿದವರ ಸಂಖ್ಯೆ 1 ಮಿಲಿಯನ್​ ದಾಟಿದೆ. ಮುಂಬೈಕರ್​​ಗಳ ನಿಜವಾದ ಆತ್ಮ ಅಡಗಿರುವುದು ಇಲ್ಲಿಯೇ ಎಂದು ಹೇಳುತ್ತಿದ್ಧಾರೆ ಅನೇಕರು. ಈ ಸರದಿಯಲ್ಲಿರುವ ಜನರನ್ನು ಎಣಿಸಿ ನೋಡಿದೆ, 235 ಜನರು ಇಲ್ಲಿ ನಿಂತಿದ್ಧಾರೆ ಎಂದು ಒಬ್ಬರು ಹೇಳಿದರು. ಇವರೆಲ್ಲರ ಬಳಿ ಮೊಬೈಲ್​ ಇರದಿದ್ದರೆ ಏನು ಮಾಡುತ್ತಿದ್ದರು? ಎಂದು ಕೇಳಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral Video: ”ಜಪಾನಿನ ಸುಶಿ” ಅನ್ನ ಬೇಳೆಯನ್ನು ದಯವಿಟ್ಟು ಅವಮಾನಿಸಬೇಡಿ ಎನ್ನುತ್ತಿರುವ ನೆಟ್ಟಿಗರು 

ಅಯ್ಯೋ ಇವರೆಲ್ಲರೂ ಇಷ್ಟು ಹೊತ್ತು ನಿಂತುಕೊಂಡು ಎಷ್ಟೊಂದು ಸಮಯ ಕಳೆಯುತ್ತಿದ್ದಾರಲ್ಲ, ಬದಲಿಗೆ ನಡೆದುಕೊಂಡೇ ಹೋಗಬಹುದೇನೋ ಎಂದು ಮಗದೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇದನ್ನು ನೋಡಿ ನನಗೆ ದುಃಖವೆನ್ನಿಸುತ್ತಿದೆ ಎಂದು ಕೆಲವರು ಹೇಳಿದ್ದಾರೆ. ಇದು ಮುಂಬೈ ಸ್ಪಿರಿಟ್​ ಅಲ್ಲ. ದುಃಖಕರವಾದ ಜೀವನ. ಒಂದು ವರ್ಷ ಈ ಮಹಾನಗರದಲ್ಲಿದ್ದೆ ಎಂದಿದ್ದಾರೆ ಒಬ್ಬರು. ಸ್ಪಿರಿಟ್ ಎನ್ನುವುದನ್ನು ಮುಂಬೈ ನಿಮಗರಿವಿಲ್ಲದೇ ಕಲಿಸುತ್ತದೆ, ಇಲ್ಲವಾದಲ್ಲಿ ಅಲ್ಲಿ ಬದುಕುವುದು ಬಲು ದುಸ್ತರ ಎಂದಿದ್ದಾರೆ ಕೆಲವರು.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:49 am, Tue, 4 July 23

‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್