Viral: ಮಹಿಳೆಯ ಐಫೋನ್​ ಪತ್ತೆಗೆ ನೆರವಾದ ಆಟೋ ಚಾಲಕ ಮತ್ತು ಸ್ವಿಗ್ಗಿ ಏಜೆಂಟ್

iPhone : ನಂಬಿಕೆ, ವಿಶ್ವಾಸ ಎನ್ನುವುದು ಈಗಲೂ ಜಗತ್ತಿನಲ್ಲಿ ಉಳಿದುಕೊಂಡಿದೆಯೆಂದರೆ ಅದು ಇಂಥ ಶ್ರಮಜೀವಿಗಳಿಂದ ಎನ್ನುತ್ತಿದ್ದಾರೆ ನೆಟ್ಟಿಗರು. ಆಟೋ ಚಾಲಕ ನಿಖಿಲ್ ಮತ್ತು ಸ್ವಿಗ್ಗಿ ಡೆಲಿವರಿ ಏಜೆಂಟ್​ ರಾಹುಲ್​ನನ್ನು ಶ್ಲಾಘಿಸುತ್ತಿದ್ದಾರೆ.

Viral: ಮಹಿಳೆಯ ಐಫೋನ್​ ಪತ್ತೆಗೆ ನೆರವಾದ ಆಟೋ ಚಾಲಕ ಮತ್ತು ಸ್ವಿಗ್ಗಿ ಏಜೆಂಟ್
ಸೌಜನ್ಯ : ಅಂತರ್ಜಾಲ
Follow us
ಶ್ರೀದೇವಿ ಕಳಸದ
|

Updated on:Jul 04, 2023 | 4:38 PM

Mumbai : ಭೂತ, ವಾಸ್ತವ, ಭವಿಷ್ಯವನ್ನೇ ಅಡಗಿಸಿಕೊಂಡಿರುವ ಮೊಬೈಲ್​ ಪರಮಾತ್ಮ ಎಲ್ಲ ಸಂಬಂಧಗಳನ್ನೂ ಮೀರಿರುವ ಆತ್ಮಬಂಧು. ಅರೆಗಳಿಗೆ ಅದು ನಮ್ಮ ಕಣ್ಣಿನಿಂದ ತಪ್ಪಿಸಿಕೊಂಡರೆ ಪರಿಸ್ಥಿತಿಯ ಬಗ್ಗೆ ವಿವರಿಸುವುದೇ ಬೇಡ. ಏಕೆಂದರೆ ಮೊಬೈಲ್​ ಬಳಸುತ್ತಿರುವ ಪ್ರತಿಯೊಬ್ಬರೂ ಈ ಸಂಕಟದ ಕ್ಷಣಗಳಿಗೆ ಸಾಕ್ಷಿಯಾಗಿರುತ್ತಾರೆ. ಇದೀಗ ಹೇಳಹೊರಟಿರುವುದೂ ಕಳೆದು ಹೋಗಿದ್ದ ಮೊಬೈಲೊಂದರ ಕಥೆಯನ್ನೇ. ಮಹಿಳೆಯೊಬ್ಬರು ಮುಂಬೈನಲ್ಲಿ ತನ್ನ ಐಫೋನ್ (iPhone) ಕಳೆದುಕೊಂಡಿದ್ದಾರೆ. ಮುಂದೇನಾಯಿತು ಅಂತ ಗೊತ್ತಾಯಿತು ಬಿಡಿ, ಅದು ಮೊದಲೇ ಮಾಯಾನಗರಿ ಎಂದುಕೊಳ್ಳುತ್ತಿದ್ದೀರೇ? ಖಂಡಿತ ನಿಮ್ಮ ಊಹೆ ತಪ್ಪು. ಮುಂಬೈನ ಅಪರಿಚಿತರು ಆಕೆಯ ಫೋನ್​ ಹುಡುಕಲು ಹೇಗೆ ಸಹಾಯ ಮಾಡಿದರೆಂಬುದನ್ನು ಆಕೆ ತನ್ನ ಟ್ವೀಟ್​ ಥ್ರೆಡ್​ನಲ್ಲಿ ಬರೆದುಕೊಂಡಿದ್ದಾರೆ.

ಮುಂಬೈನ ವರ್ಸೋವಾ ಮೆಟ್ರೋ ನಿಲ್ದಾಣ ಸಮೀಪಿಸುತ್ತಿದ್ದಂತೆ (Versova Metro Station, Mumbai) ತಾನು  ಐಫೋನ್ ಕಳೆದುಕೊಂಡಿದ್ದೇನೆ ಎನ್ನುವುದು ಆಕೆಯ ಅರಿವಿಗೆ ಬರುತ್ತಿದ್ದಂತೆ ತಾನು ಪ್ರಯಾಣಿಸಿದ ಶೇರಿಂಗ್​ ಆಟೋ ಹುಡುಕಲು ರಿಕ್ಷಾ ಸ್ಟ್ಯಾಂಡಿನತ್ತ ಧಾವಿಸಿದರು. ಅದೃಷ್ಟಕ್ಕೆ ಆಟೋ ಚಾಲಕ ನಿಖಿಲ್ ಆಕೆಯನ್ನು ಗುರುತು ಹಿಡಿದು ಪ್ರತಿಕ್ರಿಯಿಸಿದ. ಇಬ್ಬರೂ ಸೇರಿ ಐಫೋನ್ ಹುಡುಕಲು ಶುರುಮಾಡಿದರು. ಆರಂಭದಲ್ಲಿ ಎಷ್ಟು ಸಲ ಕರೆ ಮಾಡಿದರೂ ಕರೆ ಹೋಗುತ್ತಿರಲಿಲ್ಲ. ನಂತರ ಆಕೆಯ ಬ್ಯಾಗ್ ಹಿಡಿದು ಮೆಟ್ರೋ ನಿಲ್ದಾಣ, ಮೆಟ್ರೋ ಮೆಟ್ಟಿಲುಗಳ ಮೇಲೆಲ್ಲ ಹುಡುಕಿದ್ದಾಯಿತು. ಎಲ್ಲೂ ಫೋನ್​ ಸಿಗಲಿಲ್ಲ. ಆದರೆ ಸ್ವಲ್ಪ ಹೊತ್ತಿನ ನಂತರ ಕರೆ ಮಾಡಿದಾಗ ​ರಿಂಗ್ ಆಯಿತಾದರೂ ಆ ಕಡೆಯಿಂದ ಯಾರೂ ಉತ್ತರಿಸಲಿಲ್ಲ. ಅಷ್ಟೊತ್ತಿಗಾಗಲೆ ಆಕೆಗೆ ತನ್ನ ಐಫೋನ್​ ಇನ್ನು ಕೈಬಿಟ್ಟ ಹಾಗೆ ಎಂಬ ಭಾವ ದಟ್ಟವಾಗತೊಡಗಿತು.

ಇದನ್ನೂ ಓದಿ : Viral Video: ”ಕೇದಾರನಾಥನೇ, ನಮ್ಮ ಪ್ರೀತಿಗೆ ನೀನೇ ಸಾಕ್ಷಿ”; ದಾಳಿಯಿಟ್ಟ ಸಂಸ್ಕೃತಿ ರಕ್ಷಕರು

FIR ದಾಖಲಿಸುವುದೊಂದೇ ದಾರಿ ಎಂದು ಆಟೋ ಏರಿ ಮನೆಯತ್ತ ಹೊರಟಳು. ಸ್ವಲ್ಪ ಸಮಯದ ನಂತರ ಯಾರೋ ಒಬ್ಬರು ಫೋನ್ ಫೋನ್ ಎಂದು ಕೂಗುತ್ತ ಆಟೋವನ್ನು ಹಿಂಬಾಲಿಸುತ್ತಿರುವುದು ಅರಿವಿಗೆ ಬಂದಿತು. ಆತ ರಾಹುಲ್​ ಕುಮಾರ್ ಎಂಬ ಸ್ವಿಗ್ಗಿ ಡೆಲಿವರಿ ಎಕ್ಸಿಕ್ಯೂಟಿವ್ ಆಗಿದ್ದ. ನಂತರ ಆಝಾದ್ ನಗರ ಮೆಟ್ರೋ ನಿಲ್ದಾಣದಲ್ಲಿ ಭೇಟಿಯಾಗೋಣವೆಂಬ ನಿರ್ಧಾರಕ್ಕೆ ಅವರು ಬಂದರು. ಮಳೆಯಲ್ಲಿಯೇ ರೇನ್​ ಕೋಟ್​ ಧರಿಸಿ ಸೈಕಲ್​ ತುಳಿದುಕೊಂಡು ಹೇಳಿದ ಜಾಗಕ್ಕೆ ತಲುಪಿದ ರಾಹುಲ್​. ಮೆಟ್ರೋ ಸ್ಟೇಷನ್​ನಲ್ಲಿ ನಿಮ್ಮ ಮೊಬೈಲ್​ ಸಿಕ್ಕಿತು ಎಂದು ಹೇಳಿ ಅದನ್ನು ಆಕೆಗೆ ಒಪ್ಪಿಸಿದ.

ಇದನ್ನೂ ಓದಿ : Viral:ನಿಮ್ಮ ಪ್ರೇಮಿಯ ಜೊತೆ ಹೀಗಿರಲು ನಿಮಗಿರುವ ಅಡ್ಡಿಯೇನು?

ಜು. 2 ರಂದು ಈ ಟ್ವೀಟ್​ ಹಂಚಿಕೊಳ್ಳಲಾಗಿದೆ. ಎಲ್ಲರೂ ಆಟೋಚಾಲಕ ಮತ್ತು ರಾಹುಲ್​ನನ್ನು ಶ್ಲಾಘಿಸುತ್ತಿದ್ಧಾರೆ. ಜಗತ್ತಿನಲ್ಲಿ ಇನ್ನೂ ನಂಬಿಕೆ ಉಳಿದುಕೊಂಡಿದೆ ಎಂದರೆ ಅದು ಇಂಥ ಶ್ರಮಜೀವಿಗಳಿಂದ ಎಂದು ನೆಟ್ಟಿಗರು ಮನಸಾರೆ ಅವರಿಬ್ಬರನ್ನೂ ಅಭಿನಂದಿಸುತ್ತಿದ್ದಾರೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 4:34 pm, Tue, 4 July 23

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್