Viral Video: 37,000 ಅಡಿ ಎತ್ತರದಲ್ಲಿ ವಿಮಾನದಲ್ಲೇ ಮದುವೆಯಾದ ಜೋಡಿ; ವೈರಲ್ ವಿಡಿಯೋ ಇಲ್ಲಿದೆ
Wedding Video: ಅಮೆರಿಕಾದ ಸಾಲ್ಡಾ ಮತ್ತು ಪಾಮ್ ಪ್ಯಾಟರ್ಸನ್ ಡಲ್ಲಾಸ್‌ನಿಂದ ಲಾಸ್ ವೇಗಾಸ್‌ಗೆ ವಿಮಾನದಲ್ಲಿ ಪ್ರಯಾಣಿಸುತ್ತಿರುವಾಗಲೇ ವಿವಾಹವಾಗಿದ್ದಾರೆ.
ನವದೆಹಲಿ: ದುಡ್ಡೊಂದಿದ್ದರೆ ಯಾವುದೂ ಅಸಾಧ್ಯವಲ್ಲ. ಮದುವೆ ಜೀವನದ ಅತ್ಯಂತ ಮಹತ್ವದ ಘಟ್ಟಗಳಲ್ಲಿ ಒಂದಾಗಿರುವುದರಿಂದ ಅದ್ದೂರಿಯಾಗಿ ಮದುವೆಯಾಗಬೇಕೆಂಬ ಆಸೆ ಪ್ರತಿಯೊಬ್ಬರಿಗೂ ಇರುತ್ತದೆ. ಬಡ, ಮಧ್ಯಮ ವರ್ಗದವರು ಮದುವೆ ಮಾಡೋದು ಹೇಗಪ್ಪ ಎಂದು ತಲೆಕೆಡಿಸಿಕೊಂಡರೆ, ದುಡ್ಡಿದ್ದವರು ತಮ್ಮ ಮದುವೆಯನ್ನು ಯಾವ ರೀತಿ ವಿಭಿನ್ನವಾಗಿ ಆಗುವುದು ಎಂದು ತಲೆಕೆಡಿಸಿಕೊಳ್ಳುತ್ತಾರೆ. ಇದೀಗ ಅಮೆರಿಕಾದ ದಂಪತಿಗಳು ಚರ್ಚ್ನಲ್ಲಿ ತಮ್ಮ ಪ್ರತಿಜ್ಞೆಗಳನ್ನು ರದ್ದುಗೊಳಿಸಿದ ನಂತರ 37,000 ಅಡಿ ಎತ್ತರದಲ್ಲಿ ಆಕಾಶದಲ್ಲಿ ಹಾರುತ್ತಿದ್ದ ವಿಮಾನದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಅಮೆರಿಕಾದ ಸಾಲ್ಡಾ ಮತ್ತು ಪಾಮ್ ಪ್ಯಾಟರ್ಸನ್ ಡಲ್ಲಾಸ್‌ನಿಂದ ಲಾಸ್ ವೇಗಾಸ್‌ಗೆ ವಿಮಾನದಲ್ಲಿ ಪ್ರಯಾಣಿಸುತ್ತಿರುವಾಗಲೇ ವಿವಾಹವಾಗಿದ್ದಾರೆ. ಆದರೆ ಹೀಗೆ ವಿಮಾನದಲ್ಲಿ ಮದುವೆಯಾಗಬೇಕು ಎಂದು ಅವರೇನೂ ಮೊದಲೇ ಪ್ಲಾನ್ ಮಾಡಿಕೊಂಡಿರಲಿಲ್ಲ. ಆ ಜೋಡಿ ಲಾಸ್ ವೇಗಾಸ್‌ನಲ್ಲಿ ಚರ್ಚ್ನಲ್ಲಿಯೇ ಸರಳವಾಗಿ ವಿವಾಹವಾಗಲು ಬಯಸಿದ್ದರು. ಅವರು ತಮ್ಮ ಡೆಸ್ಟಿನೇಶನ್ ವೆಡ್ಡಿಂಗ್‌ಗೆ ಹೋಗುತ್ತಿದ್ದಾಗ, ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿ ಲೇಓವರ್ ಮಾಡುವಾಗ ಇಬ್ಬರೂ ತೊಂದರೆಗೆ ಸಿಲುಕಿದರು.
Another Passenger passed around an old notebook that the whole cabin signed with their seat numbers and well-wishes, given to the bride and groom as a makeshift guestbook. pic.twitter.com/rDNmOo7VxI
— Southwest Airlines (@SouthwestAir) April 30, 2022
ದಂಪತಿಗಳು ಲಾಸ್ ವೇಗಾಸ್‌ನಲ್ಲಿ ರಾತ್ರಿ 9 ಗಂಟೆಗೆ ವಿವಾಹ ಚಾಪೆಲ್ ಅನ್ನು ಬುಕ್ ಮಾಡಿದ್ದರು. ಆದರೆ, ಮದುವೆಯ ದಿನ ಅವರು ತೆರಳಬೇಕಾಗಿದ್ದ ವಿಮಾನ ವಿಳಂಬವಾಯಿತು. ಕೊನೆಗೆ ಅವರು ತೆರಳಬೇಕಿದ್ದ ವಿಮಾನವನ್ನು ಅಂತಿಮವಾಗಿ ರದ್ದುಗೊಳಿಸಲಾಯಿತು. ಹೀಗಾಗಿ, ವೇಗಾಸ್‌ಗೆ ಪ್ರಯಾಣಿಸಲು ಯೋಜಿಸುತ್ತಿದ್ದ ಸಾಲ್ಡಾ ಜೋಡಿ ಟರ್ಮಿನಲ್‌ನಲ್ಲಿ ಸಿಲುಕಿಕೊಂಡರು. ಕೊನೆಗೆ ಅದೇ ಟರ್ಮಿನಲ್ನಲ್ಲಿದ್ದ ಮಂತ್ರಿಗಳ ಬಳಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡ ಅವರಿಗೆ ಆ ಮಂತ್ರಿ ವಿಮಾನದಲ್ಲೇ ಮದುವೆಯಾಗಿ ಎಂಬ ಸಲಹೆ ಕೊಟ್ಟರು.
Remember Chris, the ordained minister? Turns out he also works in broadcasting and was carrying on his A/V equipment! Needless to say, this special moment was captured for Pam and Jeremy to cherish forever. ? pic.twitter.com/hv6aGBskSm
— Southwest Airlines (@SouthwestAir) April 30, 2022
ಅದರಂತೆ ಆ ದಂಪತಿಗಳು ವೆಗಾಸ್‌ಗೆ ವಿಮಾನವನ್ನು ಬುಕ್ ಮಾಡಿದರು. ತಮ್ಮ ಮದುವೆಯ ಡ್ರೆಸ್ ಧರಿಸಿ, ವಿಮಾನದಲ್ಲಿ ಸಾಗಿದರು. ವಿಮಾನ ಸಿಬ್ಬಂದಿಯ ಸದಸ್ಯರು ಪೇಪರ್ ರೋಲ್‌ಗಳಿಂದ ಒಳಾಂಗಣವನ್ನು ಅಲಂಕರಿಸಿದರು ಮತ್ತು ಮೂಡ್ ಲೈಟಿಂಗ್ ಕೂಡ ಹಾಕಿದರು. ಸಾಲ್ಡಾ ವಿಮಾನದ ಎರಡೂ ಬದಿಯ ಸೀಟಉಗಳ ಮಧ್ಯೆ ನಡೆಯುತ್ತಿದ್ದಂತೆ ಓರ್ವ ಗಗನಸಖಿ ವಧುವಿನ ದಾಸಿಯಾಗಿ ನಿಂತಿದ್ದಳು.
ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ವಿಮಾನದಲ್ಲಿದ್ದ ಪ್ರಯಾಣಿಕರ ಸಮ್ಮುಖದಲ್ಲಿ ಅವರಿಬ್ಬರೂ 37,000 ಅಡಿ ಎತ್ತರದಲ್ಲಿ ವಿಮಾನದಲ್ಲೇ ಮದುವೆಯಅದರು. ವಿಮಾನದಲ್ಲಿದ್ದ ಇತರ ಪ್ರಯಾಣಿಕರು ಅವರ ಸಂಭ್ರಮಾಚರಣೆಯಲ್ಲಿ ಸೇರಿಕೊಂಡರು.