Viral News: ಒಂದೇ ಮಂಟಪದಲ್ಲಿ ಮೂವರಿಗೆ ತಾಳಿ ಕಟ್ಟಿದ ವ್ಯಕ್ತಿ; ಅಪ್ಪ-ಅಮ್ಮಂದಿರ ಮದುವೆ ಕಣ್ತುಂಬಿಕೊಂಡ 6 ಮಕ್ಕಳು!

ಒಂದೇ ಮನೆಯಲ್ಲಿ ಮೂವರು ಮಹಿಳೆಯರೊಂದಿಗೆ ವಾಸವಾಗಿದ್ದ ಮೌರ್ಯ ಅವರಿಗೆ 6 ಮಕ್ಕಳೂ ಜನಿಸಿದ್ದರು. ಇದೀಗ ಮಕ್ಕಳ ಸಮ್ಮುಖದಲ್ಲಿ ಬುಡಕಟ್ಟು ಸಂಪ್ರದಾಯದಂತೆ ಒಂದೇ ಮಂಟಪದಲ್ಲಿ ಅವರು ಮೂವರು ಮಹಿಳೆಯರನ್ನು ಮದುವೆಯಾಗಿದ್ದಾರೆ.

Viral News: ಒಂದೇ ಮಂಟಪದಲ್ಲಿ ಮೂವರಿಗೆ ತಾಳಿ ಕಟ್ಟಿದ ವ್ಯಕ್ತಿ; ಅಪ್ಪ-ಅಮ್ಮಂದಿರ ಮದುವೆ ಕಣ್ತುಂಬಿಕೊಂಡ 6 ಮಕ್ಕಳು!
ಬುಡಕಟ್ಟು ಸಂಪ್ರದಾಯದಂತೆ ಮೂವರನ್ನು ಮದುವೆಯಾದ ವ್ಯಕ್ತಿ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: May 03, 2022 | 4:31 PM

ಇಂದೋರ್: ಕೆಲವೊಂದು ಜನಾಂಗದ ಸಂಪ್ರದಾಯಗಳು ವಿಚಿತ್ರವಾಗಿರುತ್ತವೆ. ಈ ಸಂಪ್ರದಾಯಗಳನ್ನು ಆಚರಿಸುವಾಗ ಸಂಪ್ರದಾಯವನ್ನು ಪಾಲಿಸಬೇಕಾ? ಅಥವಾ ಕಾನೂನನ್ನು ಪಾಲಿಸಬೇಕಾ? ಎಂಬ ಚರ್ಚೆ, ವಿವಾದಗಳು ಏಳುವುದು ಸಾಮಾನ್ಯ. ಮಧ್ಯಪ್ರದೇಶದ (Madhya Pradesh) ಅಲಿರಾಜ್‌ಪುರ ಜಿಲ್ಲೆಯಲ್ಲಿ 42 ವರ್ಷದ ವ್ಯಕ್ತಿಯೊಬ್ಬರು ಬುಡಕಟ್ಟು ಸಂಪ್ರದಾಯಗಳ (Tribal Culture) ಪ್ರಕಾರ ಒಂದೇ ಸಮಾರಂಭದಲ್ಲಿ ತನ್ನ ಮೂವರು ಲಿವ್-ಇನ್ ಪಾರ್ಟನರ್​ಗಳನ್ನು ವಿವಾಹವಾಗಿದ್ದಾರೆ.

ಈ ಮೂವರು ಮಹಿಳೆಯರೊಂದಿಗೆ ಲಿವ್ ಇನ್ ರಿಲೇಶನ್​ಶಿಪ್​ನಲ್ಲಿದ್ದ ಆ ವ್ಯಕ್ತಿ ಆರು ಮಕ್ಕಳಿಗೆ ತಂದೆಯಾಗಿದ್ದರು. ತಮ್ಮ ತಂದೆ-ತಾಯಿಯ ಮದುವೆಯಲ್ಲಿ ಆ 6 ಮಂದಿ ಮಕ್ಕಳು ಕೂಡ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಮೋರಿ ಫಾಲಿಯಾ ಗ್ರಾಮದಲ್ಲಿ ನಡೆದ ಈ ಸಮಾರಂಭದ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ನೆಟಿಜನ್‌ಗಳು ಹಂಚಿಕೊಳ್ಳುವ ಮೂಲಕ ಈ ಮದುವೆ ಇನ್ನಷ್ಟು ಚರ್ಚೆಗೆ ಗ್ರಾಸವಾಗಿದೆ. (Source)

ಭೋಪಾಲ್‌ನಿಂದ ಸುಮಾರು 400 ಕಿಲೋಮೀಟರ್ ದೂರದಲ್ಲಿರುವ ನಾನ್‌ಪುರ್ ಗ್ರಾಮದ ಮಾಜಿ ಸರಪಂಚ್ ಮೌರ್ಯ ಅವರು 2003ರಲ್ಲಿ ತಮ್ಮ ಮೊದಲ ಸಂಗಾತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅವರ ಇತರ ಇಬ್ಬರು ಪಾರ್ಟನರ್​ಗಳು ಸಹ ಕಳೆದ 15 ವರ್ಷಗಳಿಂದ ಅವರೊಂದಿಗೆ ವಾಸಿಸುತ್ತಿದ್ದರು. ಒಂದೇ ಮನೆಯಲ್ಲಿ ಮೂವರು ಮಹಿಳೆಯರೊಂದಿಗೆ ವಾಸವಾಗಿದ್ದ ಮೌರ್ಯ ಅವರಿಗೆ 6 ಮಕ್ಕಳೂ ಜನಿಸಿದ್ದರು.

ಮೌರ್ಯ ಅವರು ನಾಣಬಾಯಿ, ಮೇಳ ಮತ್ತು ಸಕ್ರಿ ಅವರನ್ನು ಒಂದೇ ಮಂಟಪದಲ್ಲಿ ವಿವಾಹವಾದರು. ಬುಡಕಟ್ಟು ಪದ್ಧತಿಯಂತೆ ಮೂರು ದಿನಗಳ ಕಾಲ ಬುಡಕಟ್ಟು ಜನಾಂಗದವರ ಡೋಲು ಬಾರಿಸುವುದು ಸೇರಿದಂತೆ ಮದುವೆ ವಿಜೃಂಭಣೆಯಿಂದ ನಡೆಯಿತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್