Sign In

By signing in or creating an account, you agree with Associated Broadcasting Company's Terms & Conditions and Privacy Policy.

7 ತಿಂಗಳ ಹಿಂದೆ ಯುವತಿಯೊಂದಿಗೆ ಓಡಿಹೋಗಿದ್ದ ವಿವಾಹಿತನಿಗೆ 55,000 ರೂ. ದಂಡ; ಕಾರಣವೇನು ಗೊತ್ತಾ?

ಪೊಲೀಸರು ಈ ಪ್ರಕರಣದ ತನಿಖೆಗೆ 42,000 ರೂ. ಖರ್ಚು ಮಾಡಿದ್ದರು. ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಹೆಚ್ಚುವರಿಯಾಗಿ 75,000 ರೂ. ಖರ್ಚು ಮಾಡಲಾಗಿತ್ತು. ವಿವಾಹಿತ ಪುರುಷನೊಂದಿಗೆ ಓಡಿಹೋಗಿದ್ದ ಯುವತಿಯನ್ನು ವಾಪಾಸ್ ಕರೆತರಲು ಒಟ್ಟು 1,117,500 ರೂ. ವ್ಯಯಿಸಲಾಗಿತ್ತು.

7 ತಿಂಗಳ ಹಿಂದೆ ಯುವತಿಯೊಂದಿಗೆ ಓಡಿಹೋಗಿದ್ದ ವಿವಾಹಿತನಿಗೆ 55,000 ರೂ. ದಂಡ; ಕಾರಣವೇನು ಗೊತ್ತಾ?
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Apr 20, 2022 | 12:57 PM

ಅಹಮದಾಬಾದ್: ಅಹಮದಾಬಾದ್‌ನಲ್ಲಿ ವಿವಾಹಿತ ವ್ಯಕ್ತಿಯೊಬ್ಬರು ಏಳು ತಿಂಗಳ ಹಿಂದೆ 20 ವರ್ಷದ ಯುವತಿಯ ಜೊತೆ ಓಡಿಹೋಗಿದ್ದರು. ಅವರನ್ನು ಕೊನೆಗೂ ಪತ್ತೆಹಚ್ಚಲಾಗಿದೆ. ಆದರೆ, ಅವರಿಬ್ಬರನ್ನು ಪತ್ತೆಹಚ್ಚಲು ಗುಜರಾತ್ ಸರ್ಕಾರ (Gujarat Government) ಖರ್ಚು ಮಾಡಿದ ಅರ್ಧದಷ್ಟು ಮೊತ್ತವನ್ನು ನೀಡುವಂತೆ ಗುಜರಾತ್ ಹೈಕೋರ್ಟ್ ಆ ವ್ಯಕ್ತಿಗೆ ಆದೇಶಿಸಿದೆ. ರಾಘಭಾಯಿ ಪರ್ಮಾರ್ ಎಂಬ ವಿವಾಹಿತನ ಜೊತೆ ಓಡಿಹೋದ ಯುವತಿಯನ್ನು ಪತ್ತೆಹಚ್ಚಲು ಪೊಲೀಸರು ಹಲವು ತಿಂಗಳುಗಳ ಕಾಲ ಹುಡುಕಾಟ ನಡೆಸಿದ್ದರು. 2021ರ ಮೇ ತಿಂಗಳಲ್ಲಿ ರಾಜ್‌ಕೋಟ್ ನಗರದ 20 ವರ್ಷದ ಯುವತಿಯೊಂದಿಗೆ ಪರ್ಮಾರ್ ನಾಪತ್ತೆಯಾಗಿದ್ದರು.

ಹೇಳದೆ ಕೇಳದೆ ಮನೆಯಿಂದ ಓಡಿಹೋದ ಮಗಳನ್ನು ಪತ್ತೆಹಚ್ಚಲು ಸಾಧ್ಯವಾಗದೆ ಆ ಯುವತಿಯ ತಂದೆ ಪೊಲೀಸರ ಮೊರೆ ಹೋಗಿದ್ದರು. ಆದರೂ ಆಕೆ ಪತ್ತೆಯಾಗಿರಲಿಲ್ಲ. ಹೀಗಾಗಿ, ಅವರು ಸಹಾಯಕ್ಕಾಗಿ ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಏಳು ತಿಂಗಳ ಕಾಲ ಪೊಲೀಸರ ಹುಡುಕಾಟ ನಡೆದಿದ್ದು, ಅಂತಿಮವಾಗಿ ಯುವತಿಯನ್ನು ಪತ್ತೆ ಹಚ್ಚಿ ಆಕೆಯನ್ನು ಪೋಷಕರಿಗೆ ಒಪ್ಪಿಸಲಾಗಿತ್ತು. ತನಿಖೆಯ ಸಂದರ್ಭದಲ್ಲಿ, ಪರ್ಮಾರ್ ಈಗಾಗಲೇ ಬೇರೊಬ್ಬಳೊಂದಿಗೆ ಈಗಾಗಲೇ ಮದುವೆಯಾಗಿದ್ದಾರೆ ಎಂದು ಹೈಕೋರ್ಟ್‌ಗೆ ಗೊತ್ತಾಗಿತ್ತು. ಏಳು ತಿಂಗಳ ತನಿಖೆಗಾಗಿ ಪೊಲೀಸ್ ಅಧಿಕಾರಿಗಳು 17,170 ಗಂಟೆಗಳ ಹೂಡಿಕೆ ಮಾಡಿದ್ದಾರೆ ಎಂದು ರಾಜ್‌ಕೋಟ್ ಪೊಲೀಸರು ಗುಜರಾತ್ ಹೈಕೋರ್ಟ್‌ಗೆ ಮಾಹಿತಿ ನೀಡಿದರು. ಇದಾದ ನಂತರ 19 ದಿನಗಳ ಕಾಲ ವಿಚಾರಣೆ ನಡೆಸಲಾಯಿತು. ಪೊಲೀಸರು ಈ ಪ್ರಕರಣದ ತನಿಖೆಗೆ 42,000 ರೂ. ಖರ್ಚು ಮಾಡಿದ್ದರು. ಅಲ್ಲದೆ, ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಹೆಚ್ಚುವರಿಯಾಗಿ 75,000 ರೂ. ಖರ್ಚು ಮಾಡಲಾಗಿತ್ತು. ವಿವಾಹಿತ ಪುರುಷನೊಂದಿಗೆ ಓಡಿಹೋಗಿದ್ದ ಆ ಯುವತಿಯನ್ನು ವಾಪಾಸ್ ಕರೆತರಲು ಒಟ್ಟು 1,117,500 ರೂ. ವ್ಯಯಿಸಲಾಗಿತ್ತು.

ಆ ಯುವತಿಯನ್ನು ಸುರಕ್ಷಿತವಾಗಿ ಆಕೆಯ ಕುಟುಂಬಕ್ಕೆ ಹಿಂತಿರುಗಿಸಿದ ನಂತರ, ಆಕೆಯನ್ನು ಪತ್ತೆಹಚ್ಚಲು ಖರ್ಚು ಮಾಡಿದ ಮೊತ್ತವನ್ನು ಪರ್ಮಾರ್‌ನಿಂದ ವಸೂಲಿ ಮಾಡಲು ಹೈಕೋರ್ಟ್ ನಿರ್ಧರಿಸಿದೆ. ಬೇರೆ ಮಹಿಳೆಯೊಂದಿಗೆ ಮದುವೆಯಾಗಿದ್ದರೂ ಇನ್ನೋರ್ವ ಯುವತಿಯೊಂದಿಗೆ ಓಡಿಹೋಗಿದ್ದಕ್ಕಾಗಿ ಈ ಶುಲ್ಕ ವಿಧಿಸಿದೆ. ಅಷ್ಟೇ ಅಲ್ಲ. ಮಗಳನ್ನು ಪತ್ತೆ ಹಚ್ಚಲು ವೈಯಕ್ತಿಕವಾಗಿ 8.06 ಲಕ್ಷ ರೂ. ಖರ್ಚು ಮಾಡಿರುವುದಾಗಿ ಯುವತಿಯ ತಂದೆ ನ್ಯಾಯಾಲಯಕ್ಕೆ ತಿಳಿಸಿದ್ದರು. ಹೀಗಾಗಿ, ನ್ಯಾಯಾಲಯವನ್ನು ಸಂಪರ್ಕಿಸುವ ಮೂಲಕ ತಂದೆಗೆ ಉಂಟಾದ ನಷ್ಟವನ್ನು ಪಡೆಯಲು ಹೈಕೋರ್ಟ್ ಅನುಮತಿ ನೀಡಿತ್ತು.

“ಅರ್ಜಿದಾರರು ಪಾವತಿಸಬೇಕಾದ ಸಂಪೂರ್ಣ ಮೊತ್ತವನ್ನು ನಾವು ನಿರ್ದೇಶಿಸಬಹುದಾಗಿದ್ದರೂ, ಪೊಲೀಸರು ಖರ್ಚು ಮಾಡಿದ ಮೊತ್ತದ ಶೇ. 50ರಷ್ಟನ್ನು ನೀಡುವಂತೆ ಸೂಚಿಸುವುದು ಸೂಕ್ತವೆಂದು ನಾವು ಪರಿಗಣಿಸಿದ್ದೇವೆ. ಹೀಗಾಗಿ, ಆ ವಿವಾಹಿತ ವ್ಯಕ್ತಿ 55,000 ರೂ. ಹಣವನ್ನು ನೀಡಬೇಕು” ಎಂದು ನ್ಯಾಯಾಲಯ ಆದೇಶ ನೀಡಿದೆ.

ಇದನ್ನೂ ಓದಿ: ರಾಮನವಮಿ-ಹನುಮಜಯಂತಿ ವೇಳೆ ಕೋಮು ಸಂಘರ್ಷ; ಸುಪ್ರೀಂಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ ವಕೀಲ

Crime News: ಅತ್ಯಾಚಾರ ಕೊಲೆಗಿಂತಲೂ ಘೋರವಾದುದು; ಪೋಕ್ಸೋ ನ್ಯಾಯಾಲಯದಿಂದ ಅತ್ಯಾಚಾರಿಗೆ 10 ವರ್ಷ ಜೈಲು ಶಿಕ್ಷೆ