AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಟೇಕ್​ಆಫ್​ನಲ್ಲಿ ವಿಮಾನದ ಬಾಗಿಲು ತೆರೆಯಲು ಪ್ರಯತ್ನಿಸಿದ ಲಂಡನ್ ಭೂಪ

Flight Door : ಇದ್ದಕ್ಕಿದ್ದಂತೆ ಎದ್ದು ಬಂದು ತನ್ನ ಸನ್​ ಗ್ಲಾಸ್​ ತೆಗೆದು ಬಾಗಿಲು ತೆರೆಯಿರಿ ಎಂದು ಕೂಗುತ್ತ ಮತ್ತು ಏನನ್ನೋ ಸನ್ನೇ ಮಾಡುತ್ತ ಇಡೀ ವಿಮಾನವನ್ನು ಅಲ್ಲೋಲ ಕಲ್ಲೋಲ ಮಾಡತೊಡಗಿದ ಈ ವ್ಯಕ್ತಿ. ಮುಂದೇನಾಯಿತು ನೋಡಿ.

Viral Video: ಟೇಕ್​ಆಫ್​ನಲ್ಲಿ ವಿಮಾನದ ಬಾಗಿಲು ತೆರೆಯಲು ಪ್ರಯತ್ನಿಸಿದ ಲಂಡನ್ ಭೂಪ
ಲಂಡನ್​ನ ವ್ಯಕ್ತಿ ವಿಮಾನದ ಬಾಗಿಲು ತೆರೆಯಲು ಪ್ರಯತ್ನಿಸುವುದನ್ನು ತಡೆದ ಪ್ರಯಾಣಿಕ.
ಶ್ರೀದೇವಿ ಕಳಸದ
|

Updated on:Jul 05, 2023 | 10:28 AM

Share

Flight Take off : ವಿಮಾನವು ಅಮೆರಿಕದಿಂದ ಲಂಡನ್​​ಗೆ ಹಾರಲೆಂದು ರನ್​​ವೇನಲ್ಲಿ (Run Way) ಚಲಿಸುತ್ತಿರುವಾಗ ಲಂಡನ್​​ನ (UK)​ 27 ವರ್ಷದ ವ್ಯಕ್ತಿ ವಿಮಾನದ ಬಾಗಿಲನ್ನು ತೆರೆಯಲು ಪ್ರಯತ್ನಿಸಿದ ಆತಂಕಕಾರಿ ಘಟನೆ ನಡೆದಿದೆ. ಆಗ ಪ್ರಯಾಣಿಕರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಕೆಲ ಪ್ರಯಾಣಿಕರು ಈ ವ್ಯಕ್ತಿಯನ್ನು ಬಾಗಿಲು ತೆರೆಯದಂತೆ ತಡೆದಿದ್ದಾರೆ. ಆನಂತರ ಈ ವ್ಯಕ್ತಿಯನ್ನು ಬಂಧಿಸಲಾಗಿದೆ. ಈ ಘಟನೆ ಕುರಿತಾದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ  ವೈರಲ್ ಆಗುತ್ತಿದೆ.

ಈ ವಿಮಾನದಲ್ಲಿದ್ದ ಬಹುಪಾಲು ಪ್ರಯಾಣಿಕರು ಅಮೆರಿಕದ ಪಾಗ್​ ದ್ವೀಪದಲ್ಲಿ ನಡೆದ ಹೈಡ್​ ಔಟ್​ ಕ್ರೊಯೇಷಿಯಾದ ಸಂಗೀತ ಉತ್ಸವದಿಂದ ಲಂಡನ್​ಗೆ ಮರಳುತ್ತಿದ್ದರು. ವಿಮಾನವು ರನ್​ವೇನಲ್ಲಿ ಚಲಿಸುತ್ತಿದ್ದಂತೆ ಈ ವ್ಯಕ್ತಿ ಇದ್ದಕ್ಕಿದ್ದಂತೆ ಸೀಟು ಬಿಟ್ಟು ಬಂದು ಬಾಗಿಲು ತೆರೆಯಿರಿ ಎಂದು ಕೂಗಲಾರಂಭಿಸಿದ. ಜೊತೆಗೆ ಏನೋ ಸನ್ನೆ ಮಾಡತೊಡಗಿದ. ಅಲ್ಲಿದ್ದ ಪ್ರಯಾಣಿಕರು ಅವನನ್ನು ತಡೆಯಲು ಹರಸಾಹಸಪಟ್ಟರು. ಅವನ ಆರ್ಭಟ ಜೋರಾಗುತ್ತಿದ್ದಂತೆ ಇಬ್ಬರು ಗಂಡಸರು ಅವನನ್ನು ಕೆಳಕ್ಕೆ ಬೀಳಿಸಿ ಗಟ್ಟಿಯಾಗಿ ಹಿಡಿದು ಬಾಗಿಲು ತೆರೆಯುವುದನ್ನು ತಪ್ಪಿಸಿದರು.

ಇದನ್ನೂ ಓದಿ : Viral: ”ಚಿಕ್ಕವಳಿದ್ದಾಗ ಬಾರ್ಬಿಯನ್ನು ಕಳೆದುಕೊಂಡೆ”; ಹೆಂಡತಿ ಗಂಡನಿಗೆ ಹೇಳಿದಾಗ… 

ನಂತರ ಈತನನ್ನು ವಿಮಾನದಿಂದ ಕೆಳಗಿಳಿಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಉಳಿದ ಪ್ರಯಾಣಿಕರು ಅದೇ  ವಿಮಾನದಲ್ಲಿ ತಮ್ಮ ದೇಶ ತಲುಪಿದರು. ”ಅಧಿಕಾರಿಯೊಬ್ಬರ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಸದ್ಯ ಈತ ಬಂಧನದಲ್ಲಿದ್ದಾನೆ. ಅಲ್ಲದೆ ಈ ವ್ಯಕ್ತಿಯಿಂದ ಉಂಟಾದ ಅನಾನುಕೂಲತೆಗೆ ಪ್ರಯಾಣಿಕರಲ್ಲಿ ಕ್ಷಮೆ ಕೇಳುತ್ತೇವೆ” ಎಂದು ವಿಮಾನಸಂಸ್ಥೆಯು (Ryanair Airlines) ತಿಳಿಸಿದೆ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:25 am, Wed, 5 July 23

ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್