Viral Video: ಉಸ್ತಾದ್​ ಸ್ಪೈಡರ್​​ಖಾನ್​; ಖಂಡಿತ ಇದು ಜಗತ್ತಿನ ಶಾಂತಿಗಾಗಿ ಅಲ್ಲ!

Tabla Artist : ಸ್ಪೈಡರ್​ಮ್ಯಾನ್​ ಆದ್ರೂ ಎಷ್ಟಂತ ಫೈಟ್ ಮಾಡ್ತಾನೆ ದುಷ್ಟರೊಂದಿಗೆ. ಅವನಿಗೂ ಸ್ವಲ್ಪ ಶಾಂತಿ ಸಮಾಧಾನ ಬೇಕಲ್ವಾ? ಫೈಟ್​ಗೀಟ್​ ಎಲ್ಲಾ ಬಿಟ್ಟು ತಬಲಾ ನುಡಿಸೋದೇ ಒಳ್ಳೆಯದು ಎಂದುಕೊಂಡು ರಿಯಾಝ್​ಗೆ ಕುಳಿತಿದ್ಧಾನೆ!

Viral Video: ಉಸ್ತಾದ್​ ಸ್ಪೈಡರ್​​ಖಾನ್​; ಖಂಡಿತ ಇದು ಜಗತ್ತಿನ ಶಾಂತಿಗಾಗಿ ಅಲ್ಲ!
''ಉಸ್ತಾದ್​ ಸ್ಪೈಡರ್​ ಖಾನ್​!''
Follow us
ಶ್ರೀದೇವಿ ಕಳಸದ
|

Updated on:Jul 05, 2023 | 11:48 AM

Spider Man : ಈಗಷ್ಟೇ ಅಮೆರಿಕದ ಪಾರ್ಕ್​​ನಲ್ಲಿ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಮೂಗು ಒಡೆದುಕೊಂಡ  ಸ್ಪೈಡರ್​ಮ್ಯಾನ್​ ಅದೆಷ್ಟು ಬೇಗ ಸುಧಾರಿಸಿಕೊಂಡು ತಬಲಾ ನುಡಿಸುತ್ತ ಕುಳಿತಿದ್ಧಾನೆ! ಎಂದು ಅವಾಕ್ಕಾಗಬೇಡಿ. ಈ ಸ್ಪೈಡರ್ ಮ್ಯಾನ್​ಗೂ ಆ ಸ್ಪೈಡರ್​ಮ್ಯಾನ್​ಗೂ ಸಂಬಂಧವೇ ಇಲ್ಲ. ಆದರೆ ಇವನನ್ನು ನೋಡಿದ ನೆಟ್ಟಿಗರು, ಸ್ಪೈಡರ್​ಮ್ಯಾನ್​ಗೆ ತಬಲಾ ಸಿಕ್ಕಾಗ! ಸ್ಪೈಡರ್​ಮ್ಯಾನ್​ ಮನೆಯಲ್ಲಿ ಯಾರೂ ಇಲ್ಲದೇ ಇದ್ದಾಗ ಏನು ಮಾಡುತ್ತಾನೆ ನೋಡಿ. ತಬಲಾ ಕಲಿತು ಕಲಾಕಾರನಾಗಬೇಕೆನ್ನುತ್ತಿರುವ ಸ್ಪೈಡರ್ ಮ್ಯಾನ್. ಅಂಬಾನಿ ಮನೆಯಲ್ಲಿ ಪೀಟರ್ ಪಾರ್ಕರ್. ಉಸ್ತಾದ್​ ಪೀಟರ್​ ಹುಸೇನ್​ ತಬಲಾವಾದನದಲ್ಲಿ. ಸ್ಪೈಡರ್​ ಮ್ಯಾನ್​ ಸಮ್​ ಅನ್ನು ಮುಕ್ತಾಯಗೊಳಿಸಿ… ಅಂತೆಲ್ಲ ಪ್ರತಿಕ್ರಿಯಿಸುತ್ತಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Kiran Pal (@amanpaltabla)

ಈ ಸ್ಪೈಡರ್​ಮ್ಯಾನ್​ ವೃತ್ತಿಪರ ಕಲಾವಿದರು. ತಮ್ಮ ಇನ್​ಸ್ಟಾಗ್ರಾಂ ಅನುಯಾಯಿಗಳನ್ನು ರಂಜಿಸಲು ಆಗಾಗ ಹೀಗೆ ಸ್ಪೈಡರ್​ಮ್ಯಾನ್​ನನ್ನು ಆವಾಹಿಸಿಕೊಳ್ಳುತ್ತಾರೆ. ಕ್ರಿಸ್​ಮಸ್​ ಸಂದರ್ಭದಲ್ಲಿ ಸಾಂತಾನನ್ನು ಆವಾಹಿಸಿಕೊಂಡಿದ್ದರು. ಇದೀಗ ಮತ್ತೆ ಸ್ಪೈಡರ್​ಮ್ಯಾನ್​. ಈ ವಿಡಿಯೋದಲ್ಲಿ ಇವರು ತೀನ್​ತಾಲದಲ್ಲಿ ತಿರಕಿಟ್ ಕಾಯ್ದಾ ನುಡಿಸಿದ್ದಾರೆ. ಈ ಸ್ಪೈಡರ್​ಮ್ಯಾನ್​​ನ ನಿಜರೂಪ ಹೇಗಿದೆ ಎಂದು ತಿಳಿದುಕೊಳ್ಳಲು ಈ ಕೆಳಗಿನ ವಿಡಿಯೋ ನೋಡಿ. ಇವರು ತಬಲಾ ಕಲಾವಿದರಾದ ​ಕಿರಣ್ ಪಾಲ್​ (Kiral Pal).

View this post on Instagram

A post shared by Kiran Pal (@amanpaltabla)

ಇವರಿಗೆ ತಬಲಾ ಕಲಾವಿದರು ಆಗಲು ಮನಸ್ಸಿತ್ತು ಮತ್ತೆ ಪ್ರಯತ್ನಿಸುತ್ತಿದ್ದರು ಕೂಡ, ಕುಟುಂಬದವರು ಒತ್ತಡ ತಾಳಲಾರದೆ ಸ್ಪೈಡರ್ ಮ್ಯಾನ್ ಆಗಿಬಿಟ್ಟರು ಎಂದು ಒಬ್ಬರು ಹೇಳಿದ್ದಾರೆ. ಸ್ಪೈಡರ್ ಮ್ಯಾನ್​ ದುಷ್ಕರ್ಮಿಗಳನ್ನು ಬೆನ್ನಟ್ಟಿದಾಗ ಈ ತಬಲಾವಾದನ ಬ್ಯಾಕ್​ಗ್ರೌಂಡ್​ ಮ್ಯೂಸಿಕ್​ನಲ್ಲಿ ಕೇಳಿಬಂದರೆ ಹೇಗಿರುತ್ತದೆಂದು ಊಹಿಸಿಕೊಳ್ಳಿ ಎಂದಿದ್ಧಾರೆ ಮತ್ತೊಬ್ಬರು. ಸ್ಪೈಡರ್​​ ಮ್ಯಾನ್​ ರಿಟೈರ್ ಆದಮೇಲಿನ ದೃಶ್ಯವಿದು ಎಂದು ಮಗದೊಬ್ಬರು ಹೇಳಿದದ್ದಾರೆ. ಸ್ಪೈಡರ್​ಮ್ಯಾನ್​ ತಬಲಾ ಕೌನ್ಸೆಲಿಂಗ್​ನಲ್ಲಿದ್ದಾರೆ ಎಂದು ಇನ್ನೂ ಒಬ್ಬರು ಹೇಳಿದ್ದಾರೆ. ಮಜಾ ಇದೆಯಲ್ಲ?

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:41 am, Wed, 5 July 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ