Optical Illusion: ಈ ಮಗು ಯಾವ ಬಲೂನನ್ನು ಹಿಡಿದುಕೊಂಡಿದೆ?
Balloon : ಹಳದಿ ಬಣ್ಣದ ಬಲೂನನ್ನು ಈ ಮಗು ಹಿಡಿದುಕೊಂಡಿದೆ ಎಂದು ಹೆಚ್ಚಿನ ಜನರು ಹೇಳುತ್ತಿದ್ದಾರೆ. ನಿಮ್ಮ ಪ್ರಯಾರ ಮಗು ಯಾವ ಬಣ್ಣದ ಬಲೂನನ್ನು ಹಿಡಿದುಕೊಂಡಿದೆ ಹೇಳಬಹುದೆ? ಸಮಯದ ಮಿತಿ ಏನೂ ಇಲ್ಲ.

Brain Teaser : ಮೋಡ ಮುಸುಕಿದ ಈ ವಾತಾವರಣದಲ್ಲಿ ಗಾಣದೆತ್ತಿನ ಹಾಗೆ ಕೆಲಸ ಮಾಡಲು ಮನಸ್ಸು ಮೊಂಡಾಟ ಹಿಡಿಯಬಹುದು. ಮಾಡುವ ಕೆಲಸ ಬಿಟ್ಟು ದೂರದ ಬೆಟ್ಟವನ್ನೇರಬೇಕು ಎನ್ನಿಸಬಹುದು. ಅದಕ್ಕೆಲ್ಲ ಆಸ್ಪದವಿಲ್ಲವೆಂದರೆ ಕುಳಿತಲ್ಲಿಯೇ ಒಂದು ಕಪ್ ಬಿಸಿಬಿಸಿ ಕಾಫಿ ಕುಡಿಯಬೇಕು ಎನ್ನಿಸಬಹುದು. ಆದರೆ ಇದ್ಯಾವುದೂ ಈಗ ಸಾಧ್ಯವಿಲ್ಲ ಅಂತಾದಾಗ ಮತ್ತು ಕೆಲಸವು ಕೈ ಕಟ್ಟಿಹಾಕಿದಾಗ ಏಕತಾನತೆ ಮುರಿಯಲು ಒಂದು ಐಡಿಯಾ ಇಲ್ಲಿದೆ. ನೋಡಿ ಈ ಆಪ್ಟಿಕಲ್ ಇಲ್ಲ್ಯೂಷನ್.
View this post on Instagram
ಈ ಬಾಲಕ ಯಾವ ಬಣ್ಣದ ಬಲೂನನ್ನು ಹಿಡಿದುಕೊಂಡಿದ್ದಾನೆ ಎನ್ನುವ ಸುಳಿವು ನಿಮಗೆ ಸಿಗಬಲ್ಲುದೆ? ನೆಟ್ಟಿಗರು ಕೆಲವರು ಸರಿಯಾಗಿ ಉತ್ತರಿಸಿದ್ದಾರೆ ಇನ್ನೂ ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ ಕೆಲವರು ತಪ್ಪು ಉತ್ತರಗಳನ್ನು ಹೇಳಿದ್ದಾರೆ. ನೀವು ಸರಿಯಾಗಿ ಅವಲೋಕಿಸುತ್ತಿದ್ದರೆ ಉತ್ತರವು ನಿಮ್ಮನ್ನೇ ಹುಡುಕಿಕೊಂಡು ಬರುತ್ತದೆ ಎಂದು ತಾತ್ವಿಕವಾದ ಉತ್ತರವನ್ನು ನೀಡಿದ್ದಾರೆ ಒಬ್ಬರು. ಈ ಯಾವ ಬಲೂನುಗಳನ್ನು ಇವನು ಹಿಡಿದುಕೊಂಡಿಲ್ಲ, ಇವನು ತಂತಿಯನ್ನು ಹಿಡಿದುಕೊಂಡಿದ್ದಾನೆ ಎಂದಿದ್ದಾರೆ ಒಬ್ಬರು.
ಇದನ್ನೂ ಓದಿ : Viral Video: ಬೆಳ್ಬೆಳಗ್ಗೆ ಬಿಳೀ ಮೊಟ್ಟೆ ಬದಲಾಗಿ ಗುಲ್ಗುಲಾಬಿ ಮೊಟ್ಟೆ ತಿನ್ನಿ
ಏನೂ ಸುಳಿವು ಕೊಡದೆ ಸರಿಯಾದ ಉತ್ತರವನ್ನು ಹೇಗೆ ಕಂಡುಹಿಡಿಯುವುದು? ಎಂದು ಪ್ರಶ್ನಿಸಿದ್ದಾರೆ ಕೆಲವರು. ಎಡಮೂಲೆಯಲ್ಲಿರುವ ಹಳದೀ ಬಲೂನ್ ಸರಿಯಾದ ಉತ್ತರ, ಇದನ್ನು Poggendorff illusion ಎಂದು ಕರೆಯುತ್ತಾರೆ ಎಂದಿದ್ದಾರೆ ಒಬ್ಬರು. ಬಹಳಷ್ಟು ಜನ ಹಳದಿ ಎಂದು ಭೌತಶಾಸ್ತ್ರವನ್ನು ಉದಾಹರಿಸಿ ಹೇಳಿದ್ದಾರೆ. ಇನ್ನೂ ಕೆಲವರು ಹಸಿರು, ಕೆಂಪು, ನೀಲಿ.
ಇದನ್ನೂ ಓದಿ : Viral: ಹಿಂದೂ ದೇವತೆಗಳನ್ನು ಜಪಾನಿಗರು ಪೂಜಿಸುತ್ತಿದ್ದಾರೋ, ಜಪಾನಿಗರ ದೇವತೆಗಳನ್ನು ಹಿಂದೂಗಳು ಪೂಜಿಸುತ್ತಿದ್ದಾರೋ?
ಹೀಗೆ ನಿಮ್ಮನ್ನು ಯೋಚಿಸಲು ಮತ್ತು ಏಕಾಗ್ರತೆಯಿಂದ ನೋಡಲು ಈಡುಮಾಡುವ ಈ ಭ್ರಮಾತ್ಮಕ ಚಿತ್ರಗಳು ಕೆಲಸದ ನಡುವೆ ನಿಮ್ಮ ಮನಸಿಗೆ, ಬುದ್ಧಿಗೆ ವಿಶ್ರಾಂತಿಯನ್ನು ಕೊಡುತ್ತವೆ. ಕೆಲಸ ಮಾಡಲು ಮತ್ತಷ್ಟು ಚೈತನ್ಯ ತುಂಬುತ್ತವೆ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ