AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಭಾರತದ ಕಬಡ್ಡಿಗೆ ಪ್ರತಿಸ್ಪರ್ಧಿಯಾಗಿ ನಿಂತ ಪಾಕಿಸ್ತಾನದ ”ತಪ್ಪಡ್ ಕಬಡ್ಡಿ”

ಕಬಡ್ಡಿಯನ್ನು ಪಾಕಿಸ್ತಾನದಲ್ಲಿ ಭಾರತಕ್ಕಿಂತ ವಿಭಿನ್ನವಾಗಿದೆ ಆಡುತ್ತಾರೆ. ಇದೀಗ ಈ ಆಟದ ವೀಡಿಯೊ ಎಲ್ಲ ಕಡೆ ವೈರಲ್​​ ಆಗಿದೆ, ಇಲ್ಲಿದೆ ನೋಡಿ.

Video: ಭಾರತದ ಕಬಡ್ಡಿಗೆ ಪ್ರತಿಸ್ಪರ್ಧಿಯಾಗಿ ನಿಂತ ಪಾಕಿಸ್ತಾನದ ''ತಪ್ಪಡ್ ಕಬಡ್ಡಿ''
ವೈರಲ್​​ ವೀಡಿಯೊ
ಅಕ್ಷಯ್​ ಪಲ್ಲಮಜಲು​​
|

Updated on: Jul 05, 2023 | 3:18 PM

Share

ಇಸ್ಲಾಮಾಬಾದ್: ಕಬಡ್ಡಿ ಭಾರತದ ಪ್ರಮುಖ ಆಟಗಳಲ್ಲಿ ಒಂದು, ಇದನ್ನು ಸಂಪ್ರದಾಯಕ ಆಟ ಎಂದು ಕರೆಯುತ್ತಾರೆ. ಇದಕ್ಕಾಗಿ ಒಂದು ಅಸೋಸಿಯೇಷನ್ ಕೂಡ ಇದೆ. ಕಬಡ್ಡಿ ಅಂತರಾಷ್ಟ್ರೀಯ ಆಟಗಳಲ್ಲಿ ಒಂದಾಗಿದೆ. ಈ ಕಬಡ್ಡಿಯನ್ನು ಪಾಕಿಸ್ತಾನದಲ್ಲಿ ಭಾರತಕ್ಕಿಂತ ವಿಭಿನ್ನವಾಗಿದೆ ಆಡುತ್ತಾರೆ. ಇದೀಗ ಈ ಆಟದ ವೀಡಿಯೊ ಎಲ್ಲ ಕಡೆ ವೈರಲ್​​ ಆಗಿದೆ, ಇಂತಹ ಆಟ ಆಡಿದ್ದರೆ ಸಾವು ಖಂಡಿತ ಎಂದು ಅನೇಕ ಕಮೆಂಟ್​​ ಕೂಡ ಮಾಡಿದ್ದಾರೆ.

ಭಾರತದ ಕಬಡ್ಡಿ ಆಟ ಪಾಕಿಸ್ತಾನದಲ್ಲಿ ಮಾರ್ಪಡುಗೊಂಡು ‘ತಪ್ಪಡ್’ ಅಥವಾ ಸ್ಲ್ಯಾಪ್ ಕಬಡ್ಡಿ ಎಂದು ಕರೆಯಲಾಗುತ್ತದೆ. ಕಬಡ್ಡಿಯಲ್ಲಿ ಏಳು ಆಟಗಾರರು ಇರುತ್ತಾರೆ. ಆದರೆ ಇದರಲ್ಲಿ ಇಬ್ಬರು ಸ್ಪರ್ಧಿಗಳು ಇರುತ್ತಾರೆ. ಭಾರತೀಯ ಕಬ್ಬಡಿಯಲ್ಲಿರುವ ಹಾಗೆ ಇಲ್ಲಿ ಎರಡು ಟೀಮ್​​ ಇರುತ್ತಾದೆ. ಕಬ್ಬಡಿಯಲ್ಲಿ ಒಬ್ಬರನ್ನು ಮುಟ್ಟಿದರ ಅಥವಾ ಟಚ್​​ ಮಾಡಿದರೆ, ಔಟ್​​ ಎಂದು ಪರಿಗಣಿಸಲಾಗುತ್ತದೆ, ಜತೆಗೆ ಯಾರು ಹೆಚ್ಚು ಅಂಕ ಗಳಿಸುತ್ತಾರೆ ಅವರು ವಿಜಯಶಾಲಿ ಎಂದು ಘೋಷಣೆಯಾಗುತ್ತಾರೆ. ಆದರೆ ಪಾಕಿಸ್ತಾನದ ಸ್ಲ್ಯಾಪ್ ಕಬಡ್ಡಿಯಲ್ಲಿ ಒಬ್ಬರಿಗೊಬ್ಬರು ಹೊಡೆದುಕೊಳ್ಳುವುದು ಈ ಆಟದ ಪ್ರಮುಖ ಅಸ್ತ್ರ, ಅಂದರೆ ಒಬ್ಬ ಸ್ಪರ್ಧಿ ತನ್ನ ಪ್ರತಿಸ್ಪರ್ಧಿಯ ಎದೆಗೆ ಹೊಡೆಯುವುದು, ಒಂದು ವೇಳೆ ಈ ಆಟದಿಂದ ಹಿಂದೆ ಸರಿದರೆ ಅವರು ಔಟ್​​​ ಮತ್ತು ಯಾರು ನಿರಂತರವಾಗಿ ತನ್ನ ಪ್ರತಿಸ್ಪರ್ಧಿಗೆ ಹೊಡೆಯುತ್ತಾರೆ ಅವರು ವಿಜಯಶಾಲಿ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಪಬ್​​ಜಿ ಮೂಲಕ ನೋಯ್ಡಾ ವ್ಯಕ್ತಿ ಜತೆ ಸ್ನೇಹ; ನಾಲ್ವರು ಮಕ್ಕಳೊಂದಿಗೆ ಭಾರತಕ್ಕೆ ಬಂದು ಸಿಕ್ಕಿಬಿದ್ದ ಪಾಕಿಸ್ತಾನದ ಮಹಿಳೆ

ಈ ಪಂದ್ಯಕ್ಕೆ ಬೆಟ್ಟಿಂಗ್​​ ಕಟ್ಟುವ ಮೂಲಕ ಆಟಗಾರರು ಹಣ ಪಡೆಯುತ್ತಾರೆ. ಇದಕ್ಕೆ ಬಹುಮಾನ ಕೂಡ ನೀಡಲಾಗುತ್ತದೆ. ಇದೀಗ ಈ ವೀಡಿಯೊ ಎಲ್ಲ ಕಡೆ ವೈರಲ್​​ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ವಿರುದ್ಧ ಉಂಟಾಗಿದೆ.

ಮತ್ತಷ್ಟು ವಿದೇಶಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು