AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕಾಡಾನೆಗಳ ಹಿಂಡಿನೊಂದಿಗೆ ಸೆಲ್ಫಿ ತೆಗೆಯಲು ಹೋದ ಯುವಕರು, ಮುಂದೇನಾಯಿತು?; ವಿಡಿಯೋ ವೈರಲ್​​

ಲಖಿಂಪುರದ ದುಧ್ವಾ ರಾಷ್ಟ್ರೀಯ ಉದ್ಯಾನವನದಲ್ಲಿ ಈ ಘಟನೆ ನಡೆದಿದೆ. ಡಾ.ಅಹ್ತೇಷಾಮ್ ಸಿದ್ದಿಕ್​ ಎಂಬ ಟ್ವಿಟರ್​​​ ಬಳಕೆದಾರರು ಜುಲೈ 4ರಂದು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

Viral Video: ಕಾಡಾನೆಗಳ ಹಿಂಡಿನೊಂದಿಗೆ ಸೆಲ್ಫಿ ತೆಗೆಯಲು ಹೋದ ಯುವಕರು, ಮುಂದೇನಾಯಿತು?; ವಿಡಿಯೋ ವೈರಲ್​​
ಕಾಡಾನೆಗಳ ಹಿಂಡಿನೊಂದಿಗೆ ಸೆಲ್ಫಿ ತೆಗೆಯಲು ಹೋದ ಯುವಕರುImage Credit source: twitter
ಅಕ್ಷತಾ ವರ್ಕಾಡಿ
|

Updated on: Jul 06, 2023 | 4:01 PM

Share

ಉತ್ತರ ಪ್ರದೇಶ: ದುಧ್ವಾ ರಾಷ್ಟ್ರೀಯ ಉದ್ಯಾನವನದಲ್ಲಿ ಕಾಡಾನೆಗಳ ಹಿಂಡಿನ ಮುಂದೆ ಯುವಕರ ಗುಂಪೊಂದು ಸೆಲ್ಫಿ ತೆಗೆಯಲು ಹೋಗಿದ್ದಾರೆ. ಆದರೆ ಈ ವೇಳೆ ಆನೆಗಳು ಏಕಾಏಕಿ ಕೋಪಗೊಂಡು ಯುವಕರ ಮೇಲೆ ದಾಳಿ ಮಾಡಲು ಮುಂದಾಗಿದೆ. ತಕ್ಷಣ ಭಯಭೀತರಾದ ಯವಕರು ಅಲ್ಲಿಂದ ಓಡಾಲಾರಂಭಿಸಿದ್ದಾರೆ. ಪ್ರಾಣ ಉಳಿಸಿಕೊಂಡು ಓಡಿ ಬರುತ್ತಿರುವುದು ವಿಡಿಯೋದಲ್ಲಿ ಸೆರೆಹಿಡಿಯಲಾಗಿದೆ. ಈ ವಿಡಿಯೋವನ್ನು ಸೋಶಿಯಲ್​ ಮೀಡಿಯಾಗಳಲ್ಲಿ ಹಂಚಿಕೊಳ್ಳಲಾಗಿದ್ದು, ಇದೀಗಾ ಎಲ್ಲೆಡೆ ಭಾರೀ ವೈರಲ್​​​ ಆಗಿದೆ.

ಪ್ರಾಣ ಉಳಿಸಿಕೊಳ್ಳಲು ಓಡಿಕೊಂಡು ಬರುತ್ತಿರುವ ವೈರಲ್​ ವಿಡಿಯೋ:

ಇದನ್ನೂ ಓದಿ: ಹಚ್ಚೆಯ ಹುಚ್ಚು; ‘ಶೌಚಾಲಯ ಸ್ವಚ್ಛಗೊಳಿಸುವ ಕೆಲಸವೂ ಸಿಗುತ್ತಿಲ್ಲ’ ಲಂಡನ್​ ಮಹಿಳೆಯ ಅಳಲು

ಲಖಿಂಪುರದ ದುಧ್ವಾ ರಾಷ್ಟ್ರೀಯ ಉದ್ಯಾನವನದಲ್ಲಿ ಮಂಗಳವಾರ ಈ ಘಟನೆ ನಡೆದಿದೆ. ಡಾ.ಅಹ್ತೇಷಾಮ್ ಸಿದ್ದಿಕ್​ ಎಂಬ ಟ್ವಿಟರ್​​​ ಬಳಕೆದಾರರು ಜುಲೈ 4ರಂದು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ದುಧ್ವಾ ಹುಲಿ ಸಂರಕ್ಷಿತ ಪ್ರದೇಶದ ಪಾಲಿಯಾ ಗೌರಿಫಾಂತ ಮಾರ್ಗದಲ್ಲಿ ಸುಮಾರು 50 ಆನೆಗಳ ಹಿಂಡು ರಸ್ತೆಯಲ್ಲಿ ನಿಂತಿದ್ದವು. ಇಲ್ಲಿ ಅದೇ ವೇಳೆಗೆ ಮೂವರು ಯುವಕರು ಆನೆಗಳ ಸಮೀಪಕ್ಕೆ ಸೆಲ್ಫಿ ತೆಗೆಯಲು ಬಂದಿದ್ದಾರೆ. ಯುವಕರು ಆನೆಗಳ ಹಿಂಡಿನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಆರಂಭಿಸಿದ ವೇಳೆ ಆನೆಗಳು ಆಕ್ರೋಶಗೊಂಡು ಯುವಕರನ್ನು ಓಡಿಸಿಕೊಂಡು ಬಂದಿದೆ. ಆನೆಗಳು ಬರುತ್ತಿರುವುದನ್ನು ಕಂಡು ಮೂವರು ಯುವಕರು ಭಯಗೊಂಡು ಓಡಲು ಪ್ರಾರಂಭಿಸಿದ್ದಾರೆ. ಓಡುವಾಗ ಯುವಕನೊಬ್ಬ ರಸ್ತೆಗೆ ಬಿದ್ದಿದ್ದಾನೆ. ದೂರದಲ್ಲಿ ನಿಂತಿದ್ದ ದಾರಿಹೋಕರು ಗಲಾಟೆ ಮಾಡಲಾರಂಭಿಸಿದಾಗ ಆನೆಗಳು ತಿರುಗಿ ಕಾಡಿಗೆ ಓಡಿ ಹೋಗಿದೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ