ಮಂಗಳೂರು: ಕಡಬದಲ್ಲಿ ಮತ್ತೆ ಕಾಣಿಸಿಕೊಂಡ ಕಾಡಾನೆಗಳು, ರಬ್ಬರ್ ತೋಟಕ್ಕೆ ಲಗ್ಗೆ ಇಟ್ಟ ಗಜಪಡೆ

ಮಂಗಳೂರು: ಕಡಬದಲ್ಲಿ ಮತ್ತೆ ಕಾಣಿಸಿಕೊಂಡ ಕಾಡಾನೆಗಳು, ರಬ್ಬರ್ ತೋಟಕ್ಕೆ ಲಗ್ಗೆ ಇಟ್ಟ ಗಜಪಡೆ

Rakesh Nayak Manchi
|

Updated on:Jun 24, 2023 | 6:06 PM

Mangaluru: ಕಡಬ ತಾಲೂಕಿನಲ್ಲಿ ಕಾಡಾನೆಗಳು ಮತ್ತೆ ಕಾಣಿಸಿಕೊಂಡಿದ್ದು, ರಬ್ಬರ್ ತೋಟದಲ್ಲಿ ಆನೆಗಳ ಹಿಂಡು ನೋಡಿ ಜನರು ಆತಂಕಕ್ಕೊಳಗಾಗಿದ್ದಾರೆ.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ (Kadaba) ಕಾಡಾನೆಗಳು (Wild Elephants) ಮತ್ತೆ ಕಾಣಿಸಿಕೊಂಡಿವೆ. ಐತೂರು ಭಾಗದ ಕೊಡೆಂಕೇರಿ, ಅಜನಾ ಎಂಬಲ್ಲಿ ಎರಡು ದೊಡ್ಡ ಆನೆಗಳೊಂದಿಗೆ ಒಂದು ಮರಿಯಾನೆ ಕಂಡುಬಂದಿದೆ. ರಬ್ಬರ್ ತೋಟಕ್ಕೆ ಲಗ್ಗೆಯಿಟ್ಟ ಕಾಡಾನೆಗಳನ್ನು ನೋಡಿದ ಜನರು ಆತಂಕಕ್ಕೊಳಗಾಗಿ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದಾರೆ. ಕಳೆದ ಮೂರು ದಿನಗಳಿಂದ ಕಾಡಾನೆಗಳು ತಾಲೂಕಿನಲ್ಲಿ ಬೀಡುಬಿಟ್ಟಿವೆ.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Published on: Jun 24, 2023 06:05 PM