Mangaluru News: ಸರ್ಕಾರಿ ಶಾಲೆಗಳ ಬಡ ಮಕ್ಕಳಿಗೆ ಉಚಿತವಾಗಿ ಛತ್ರಿ ವಿತರಿಸುತ್ತಿದ್ದಾರೆ ಕರಾವಳಿಯ ಈ ಸ್ನೇಹಿತರು
ಕ್ಷೇತ್ರ ನಿರೀಕ್ಷಕ ಸುಕೇಶ್ ಪೂಜಾರಿ ಮತ್ತು ಸಾಫ್ಟ್‌ವೇರ್ ಇಂಜಿನಿಯರ್‌ಗಳಾದ ಆಶ್ರಿತ್ ಶೆಟ್ಟಿ ಮತ್ತು ರೂಪೇಶ್ ನಾಯ್ಕ್ ಅವರು ಕಳೆದ ಏಳು ವರ್ಷಗಳಿಂದ ಐದು ತಾಲೂಕುಗಳು ಮತ್ತು ಮೂರು ಜಿಲ್ಲೆಗಳ ವ್ಯಾಪ್ತಿಯ ಸರ್ಕಾರಿ ಶಾಲೆಗಳ ಸೌಲಭ್ಯಗಳು ಮತ್ತು ಶೈಕ್ಷಣಿಕ ವಾತಾವರಣವನ್ನು ಸುಧಾರಿಸಲು ಸಹಾಯ ಮಾಡುತ್ತಿದ್ದಾರೆ.
ಮಂಗಳೂರು: ಕರವಾಳಿ ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ಮುಂಗಾರು (Monsoon) ಸರಿಯಾಗಿ ಆರಂಭಗೊಂಡಿದ್ದು, ಭಾರೀ ಮಳೆಯಾಗುತ್ತಿದೆ. ಮತ್ತೊಂದೆಡೆ, ಶಾಲೆಗೆ ತೆರಳುವ ಮಕ್ಕಳಿಗೂ ಮಳೆಯ (Rain) ಕಾಟ ಜೋರಾಗಿದೆ. ಇದೇ ವೇಳೆ ಮೂವರು ಸ್ನೇಹಿತರು ಸೇರಿಕೊಂಡು ಸರ್ಕಾರಿ ಶಾಲೆಗಳ ಬಡ ಮಕ್ಕಳಿಗೆ ಉಚಿತವಾಗಿ ಛತ್ರಿ (Umbrella) ಒದಗಿಸುವ ಮೂಲಕ ಮಾನವೀಯತೆ ಮೆರೆಯುತ್ತಿರುವ ಬಗ್ಗೆ ವರದಿಯಾಗಿದೆ. ಕ್ಷೇತ್ರ ನಿರೀಕ್ಷಕ ಸುಕೇಶ್ ಪೂಜಾರಿ ಮತ್ತು ಸಾಫ್ಟ್‌ವೇರ್ ಇಂಜಿನಿಯರ್‌ಗಳಾದ ಆಶ್ರಿತ್ ಶೆಟ್ಟಿ ಮತ್ತು ರೂಪೇಶ್ ನಾಯ್ಕ್ ಅವರು ಕಳೆದ ಏಳು ವರ್ಷಗಳಿಂದ ಐದು ತಾಲೂಕುಗಳು ಮತ್ತು ಮೂರು ಜಿಲ್ಲೆಗಳ ವ್ಯಾಪ್ತಿಯ ಸರ್ಕಾರಿ ಶಾಲೆಗಳ ಸೌಲಭ್ಯಗಳು ಮತ್ತು ಶೈಕ್ಷಣಿಕ ವಾತಾವರಣವನ್ನು ಸುಧಾರಿಸಲು ಸಹಾಯ ಮಾಡುತ್ತಿದ್ದಾರೆ. ಇವು 11 ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ದಾನಿಗಳ ನೆರವಿನಿಂದ ಹಣ ಸಂಗ್ರಹಿಸಿ 500 ಛತ್ರಿಗಳನ್ನು ವಿತರಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಈ ಸ್ನೇಹಿತರ ಗುಂಪು ಈ ಹಿಂದೆ ಸರ್ಕಾರಿ ಶಾಲೆಗಳ ಉನ್ನತಿಗಾಗಿ ವಿವಿಧ ಯೋಜನೆಗಳನ್ನು ಕೈಗೊಳ್ಳಲು ಹಣವನ್ನು ಸಂಗ್ರಹಿಸಿತ್ತು.
ನಾವು ಸರ್ಕಾರಿ ಶಾಲೆಗಳು ಮತ್ತು ಅವುಗಳ ಕಲ್ಯಾಣದೊಂದಿಗೆ ಸಂಪರ್ಕ ಹೊಂದಿದ್ದೇವೆ. ಬಂಟ್ವಾಳ ತಾಲೂಕಿನ ಬಿಸಿ ರೋಡ್‌ನ ಸರ್ಕಾರಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರೊಬ್ಬರು ಮಕ್ಕಳಿಗೆ ಕೊಡೆಗಳನ್ನು ನೀಡಲು ನಮಗೆ ಸಾಧ್ಯವಾಗುತ್ತದೆಯೇ ಎಂದು ಕೇಳಿದ್ದರು. ಹೀಗಾಗಿ ನಾವು ಕಾರ್ಯಪ್ರವೃತ್ತರಾಗಿದ್ದೆವು. ಆದರೆ, ನಾವು ಹಣ ಹೊಂದಿಸುವಷ್ಟರಲ್ಲಿ ದಾನಿಗಳಲ್ಲಿ ಒಬ್ಬರು ತಮ್ಮ ಅಗತ್ಯವನ್ನು ಪೂರೈಸಿದ್ದಾರೆ ಎಂದು ಶಿಕ್ಷಕರು ನಮಗೆ ತಿಳಿಸಿದರು. ಇದು ರಾಜ್ಯದಾದ್ಯಂತ ಮುಂಗಾರು ಮಳೆಯ ಈ ಸಮಯದಲ್ಲಿ ಹೆಚ್ಚಿನ ಮಳೆಯಾಗುವ ಸ್ಥಳಗಳಲ್ಲಿನ ಮಕ್ಕಳ ಬಗ್ಗೆ ನಾವು ಯೋಚಿಸುವಂತೆ ಮಾಡಿತು ಎಂದು ಆಶ್ರಿತ್ ಶೆಟ್ಟಿ ಹೇಳಿರುವುದಾಗಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ನಂತರ ನಾವು ಸರ್ಕಾರಿ ಮಕ್ಕಳಿಗೆ ನೆರವಾಗುವ ಬಗ್ಗೆ ಚರ್ಚಿಸಲು ಪ್ರಾರಂಭಿಸಿದೆವು. ಇದು ಯೋಗ್ಯವಾಗಿದೆ ವಿಚಾರ ಎಂದು ಅರಿತುಕೊಂಡೆವು. ಆರಂಭದಲ್ಲಿ ರೈನ್‌ಕೋಟ್‌ಗಳನ್ನು ವಿತರಿಸಲು ಯೋಜಿಸಿದ್ದೆವು, ಆದರೆ ನಂತರ ವಿವಿಧ ಗಾತ್ರದ ರೈನ್‌ಕೋಟ್‌ಗಳನ್ನು ಒದಗಿಸಬೇಕಾಗಿರುವುದರಿಂದ ಅದಕ್ಕಿಂತ ಛತ್ರಿಗಳನ್ನು ನೀಡುವುದು ಸೂಕ್ತ ಎಂಬ ತೀರ್ಮಾನಕ್ಕೆ ಬಂದೆವು ಎಂದು ಅವರು ಹೇಳಿರುವುದಾಗಿ ವರದಿ ತಿಳಿಸಿದೆ.
ಈ ಸ್ನೇಹಿತರ ಗುಂಪು ಸುಮಾರು 100 ದಾನಿಗಳ ಸಹಾಯದಿಂದ 1.2 ಲಕ್ಷ ರೂ.ಗಳನ್ನು ಸಂಗ್ರಹಿಸಿದೆ. ಈಗಾಗಲೇ 500 ಛತ್ರಿಗಳನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ. ಬೆಳ್ತಂಗಡಿ, ಶೃಂಗೇರಿ, ಕೊಪ್ಪ, ಹರಿಹರ ಮತ್ತು ಹಾಸನದ ಶಾಲಾ ವಿದ್ಯಾರ್ಥಿಗಳಿಗೆ ಕೊಡೆಗಳನ್ನು ವಿತರಿಸಲಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: Kasargodu: ಕನ್ನಡ ಶಾಲೆಗೆ ಮಲಯಾಳಂ ಶಿಕ್ಷಕಿ ನೇಮಕ, ಸಚಿವ ಶಿವರಾಜ್ ತಂಗಡಗಿ ಪತ್ರಕ್ಕೂ ಕ್ಯಾರೆ ಅನ್ನದ ಕೇರಳ ಸರ್ಕಾರ
ಹಾಸನದ ಶಾಲೆಯೊಂದು ವಸತಿನಿಲಯದಿಂದ ಸುಮಾರು 2 ಕಿಮೀ ದೂರದಲ್ಲಿ ಹಾಸ್ಟೆಲ್ ಹೊಂದಿದೆ. ಮಕ್ಕಳು ಶಾಲೆಗೆ ನಡೆದುಕೊಂಡು ಹೋಗಬೇಕು ಮತ್ತು ಛತ್ರಿಗಳನ್ನು ನೀಡುವುದರಿಂದ ಮಳೆಯ ಸಮಯದಲ್ಲಿ ಅವರಿಗೆ ನೆರವಾಗಲಿದೆ. ನಾವು ಆಯ್ಕೆ ಮಾಡಿದ ಎಲ್ಲಾ ಸ್ಥಳಗಳು ಹೆಚ್ಚಿನ ಮಳೆಯಾಗುವ ಪ್ರದೇಶಗಳಾಗಿವೆ. ನಮ್ಮ ಈ ಉಪಕ್ರಮದಿಂದ ವಿದ್ಯಾರ್ಥಿಗಳಿಗೆ ಸಹಾಯವಾಗಲಿದೆ ಎಂದು ಶೆಟ್ಟಿ ಒತ್ತಿ ಹೇಳಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಈ ಹಿಂದೆ ಬಳಂಜ ಮತ್ತು ಹೆಬ್ರಿಯಲ್ಲಿ ಗ್ರಂಥಾಲಯ ನಿರ್ಮಿಸಲು ಈ ಗುಂಪು ಹಣ ಸಂಗ್ರಹಿಸಿತ್ತು. ಉತ್ತಮ ಶೈಕ್ಷಣಿಕ ದಾಖಲೆಗಳನ್ನು ಹೊಂದಿರುವ ಮಕ್ಕಳು ಬಡತನದಿಂದಾಗಿ ಶಾಲೆಯಿಂದ ಹೊರಗುಳಿಯುವುದನ್ನು ತಡೆಯಲು ಕೂಡ ಗುಂಪು ಸಹಾಯ ಮಾಡುತ್ತದೆ ಎಂದು ವರದಿ ಹೇಳಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ