Optical Illusion: ಈ ಭ್ರಮಾತ್ಮಕ ಚಿತ್ರ ನಿಮಗಲ್ಲ! ಭ್ರಮೆಗೆ ಒಳಗಾಗಿದ್ದು ನಾಯಿಯೋ ಬೆಕ್ಕೋ?

Cats and Dogs : ನಿಮ್ಮ ಮನೆಯ ಬೆಕ್ಕು ನಾಯಿಗಳಿಗೂ ಇಂಥ ಭ್ರಮಾತ್ಮಕ ಚಿತ್ರ ತೋರಿಸಿ ಅವುಗಳ ಮನಸ್ಸನ್ನೂ ಸ್ವಲ್ಪ ಶಾಂತಗೊಳಿಸಿ, ಬುದ್ಧಿಯನ್ನು ಚುರುಕುಗೊಳಿಸಿ. ಈ ವಿಡಿಯೋದಲ್ಲಿ ಭ್ರಮೆಗೆ ಬಿದ್ದಿದ್ದು ನಾಯಿಯೋ ಬೆಕ್ಕೋ?

Optical Illusion: ಈ ಭ್ರಮಾತ್ಮಕ ಚಿತ್ರ ನಿಮಗಲ್ಲ! ಭ್ರಮೆಗೆ ಒಳಗಾಗಿದ್ದು ನಾಯಿಯೋ ಬೆಕ್ಕೋ?
ಸೌಜನ್ಯ : ಅಂತರ್ಜಾಲ
Follow us
ಶ್ರೀದೇವಿ ಕಳಸದ
|

Updated on:Jul 07, 2023 | 12:57 PM

Animals : ಪ್ರತೀ ದಿನ ಈ ಆಪ್ಟಿಕಲ್ ಇಲ್ಲ್ಯೂಷನ್​ ಹುಟ್ಟುಹಾಕುವ ಸವಾಲುಗಳನ್ನು ನೀವಷ್ಟೇ ಪರಿಹರಿಸಲು ಪ್ರಯತ್ನಿಸುತ್ತಿರುತ್ತೀರಿ. ಯಾಕೆ ಪ್ರಾಣಿಗಳೂ ಇದರಲ್ಲಿ ಪಾಲ್ಗೊಳ್ಳಬಾರದಾ? ಖಂಡಿತ! ನಾಯಿಗಳಿಗೆ ಮನೆ ಕಾಯ್ದು ಕಾಯ್ದು ಬೇಸರವಾಗಿರತ್ತೆ. ಬೆಕ್ಕುಗಳಿಗೆ ಮನೆಯಲ್ಲಿ ಮಲಗಿ ಮಲಗಿ ಮಬ್ಬು ಹಿಡಿದಿರುತ್ತದೆ. ಅವುಗಳಿಗೂ ಸ್ವಲ್ಪ ಮನೋರಂಜನೆ ಬೇಕಲ್ಲವೆ? ಹಾಗಾಗಿ ನಿಮ್ಮ ಬದಲಿಗೆ ನಿಮ್ಮ ಮನೆಯ ನಾಯಿಬೆಕ್ಕುಗಳಿಗೆ (Cats and Dogs) ಈ ವಿಡಿಯೋ ಸಮರ್ಪಣೆ.

ಈ ವಿಡಿಯೋ ಗಮನಿಸಿದಿರೆ? ನಾಯಿಗಳು ಭ್ರಮೆಗೆ ಬಿದ್ದು ಆ ಚಿತ್ರವನ್ನೇ ಹಾರಿ ಹೋಗಿಬಿಟ್ಟವು. ಆದರೆ ಜಾಣ ಬೆಕ್ಕು ಮೆಲ್ಲಗೆ ಆ ಚಿತ್ರವನ್ನು ಸ್ಪರ್ಶಿಸುತ್ತ, ಪಾದವನ್ನೂರುತ್ತ ಯೋಚಿಸುತ್ತ ಅದೊಂದು ಭಾವಿಯಲ್ಲ ಅದೊಂದು ಚಿತ್ರ ಅಥವಾ ಮ್ಯಾಟ್​ ಎಂದು ಖಾತ್ರಿ ಪಡಿಸಿಕೊಂಡು ವಿರಮಿಸುವುದನ್ನು ಮುಂದುವರಿಸಿದೆ. ನಿದ್ರೆ ಬಂದರೆ ಅಲ್ಲಿಯೇ ಮಲಗಲೂಬಹುದು! ಅಂತೂ ಬೆಕ್ಕನ್ನು ಭ್ರಮೆಗೆ ಕೆಡವಲಾಗುವುದಿಲ್ಲ!

ಇದನ್ನೂ ಓದಿ : Viral: ಬೀದಿನಾಯಿಗಳಿಗೆ ‘ಆಧಾರ್’; ಮುಂಬೈನ ಶ್ವಾನಪ್ರಿಯ ಯುವಕನ ಸಂಶೋಧನೆ 

ನಾಯಿಗಳಾದರೆ ಈ ಸವಾಲೂ ಬೇಡ ಇದಕ್ಕೆ ಉತ್ತರ ಕಂಡುಕೊಳ್ಳುವುದೂ ಬೇಡ ಎಂದು ಜಿಗಿದು ತಮ್ಮ ಪಾಡಿಗೆ ತಾವು ಸುತ್ತುವುದಕ್ಕೆ ಹೋದವೇನೋ. ಬೆಕ್ಕು ಮಾತ್ರ ಚಾಣಾಕ್ಷತೆಯಿಂದ, ಗಂಭಿರವಾಗಿ ತನಗೆ ಬೇಕಾದಂತೆ ತನ್ನ ಮಿತಿಯಲ್ಲಿ ಎದುರಿಗಿರುವುದನ್ನು ವಾಸ್ತವದಲ್ಲಿ ನೋಡಿತು.

ಇದನ್ನೂ ಓದಿ : Viral: ಬಾಡಿಗೆದಾರರಿಗೆ 1 ಕಿಲೋ ಕ್ಯಾಬೇಜ್​ ಉಪ್ಪಿನಕಾಯಿ ತಯಾರಿಸಿ ಸ್ವಾಗತಿಸಿದ ಬೆಂಗಳೂರಿನ ಮಹಿಳೆ 

ನೆಟ್ಟಿಗರು ಈ ಎರಡೂ ಪ್ರಾಣಿಗಳ ವರ್ತನೆ ನೋಡಿ ಬಿದ್ದುಬಿದ್ದು ನಗುತ್ತಿದ್ದಾರೆ. ಬೆಕ್ಕು ಪ್ರಿಯರು, ನೋಡಿದಿರಾ ನಾಯಿಗಿಂತ ಬೆಕ್ಕೇ ಜಾಣ! ಎಂದು ಬೀಗುತ್ತಿದ್ದಾರೆ. ನಾಯಿಪ್ರಿಯರು, ಇಂಥ ಸಣ್ಣಪುಟ್ಟ ಸವಾಲುಗಳು ನಮಗೆ ಸಾಕಾಗುವುದಿಲ್ಲ, ಅದನ್ನು ನಾವು ನಿರ್ಲಕ್ಷಿಸುತ್ತೇವೆ ಎಂದು ಕಾಲರ್ ಏರಿಸಿಕೊಳ್ಳುತ್ತಿದ್ದಾರೆ. ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು? ನೀವು ಆಗಾಗ ನಿಮ್ಮ ನಾಯಿಬೆಕ್ಕುಗಳಿಗ ಇಂಥ ಸವಾಲುಗಳನ್ನು ಕೊಟ್ಟುನೋಡಿ. ಅವುಗಳ ವರ್ತನೆಯನ್ನು ಗಮನಿಸಿ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:54 pm, Fri, 7 July 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ