Viral: ಬಾಡಿಗೆದಾರರಿಗೆ 1 ಕಿಲೋ ಕ್ಯಾಬೇಜ್ ಉಪ್ಪಿನಕಾಯಿ ತಯಾರಿಸಿ ಸ್ವಾಗತಿಸಿದ ಬೆಂಗಳೂರಿನ ಮಹಿಳೆ
Owner and Tenant : ನೀವು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರೆ ಮೊದಲ ಸಲ ನಿಮ್ಮ ಮನೆಯ ಮಾಲಿಕರು ತಮ್ಮ ಪ್ರೀತಿ ಮತ್ತು ಆತ್ಮೀಯತೆ ವ್ಯಕ್ತಪಡಿಸಲು ನಿಮಗೆ ಯಾವ ರೀತಿಯ ತಿಂಡಿಯನ್ನು ಮಾಡಿಕೊಟ್ಟಿದ್ದರು? ನೆನಪಿಸಿಕೊಳ್ಳಿ.
Bengaluru : ಬಾಡಿಗೆದಾರರು ಎಂಥವರು ಸಿಗುತ್ತಾರೋ ಎಂಬ ಆತಂಕ ಮನೆಮಾಲೀಕರಿಗೂ ಇರುತ್ತದೆ. ಮನೆಯ ಮಾಲೀಕರು (Owner) ಹೇಗಿರುತ್ತಾರೋ ಎಂಬ ಆತಂಕ ಬಾಡಿಗೆದಾರರಿಗೂ (Tenant) ಇರುತ್ತದೆ. ಕೆಲವೊಂದು ಕಡೆ ಮನೆಯವರಿಗಿಂತ ಹೆಚ್ಚಾಗಿ ಬಾಂಧವ್ಯ ಬೆಳೆಯುತ್ತದೆ. ಇನ್ನೂ ಕೆಲವೆಡೆ ಹಾವುಮುಂಗುಸಿ ಗುದ್ದಾಟ ಶುರುವಾಗುತ್ತದೆ. ಆದರೆ ಇದೀಗ ವೈರಲ್ ಆಗುತ್ತಿರುವ ಈ ಟ್ವೀಟ್ ಬಾಂಧವ್ಯಕ್ಕೆ ಸಂಬಂಧಿಸಿದ್ದು. ಬೆಂಗಳೂರಿನ ಮಹಿಳೆಯೊಬ್ಬರು ತಮ್ಮ ಬಾಡಿಗೆದಾರರಿಗೆ 1 ಕಿ. ಗ್ರಾಂ ಕಿಮ್ಚಿ (Kimchi- ಕೊರಿಯನ್ ಊಟದಲ್ಲಿ ಉಪ್ಪಿನಕಾಯಿಯಂತೆ ಬಡಿಸಲಾಗುವ ಕ್ಯಾಬೇಜ್ ಉಪ್ಪಿನಕಾಯಿ) ತಯಾರಿಸಿ ಕೊಟ್ಟು ಸ್ವಾಗತಿಸಿದ್ದಾರೆ. ಈ ವಿಷಯವನ್ನು ಅವರು ಫೋಟೋ ಸಮೇತ ಟ್ವೀಟ್ ಮಾಡಿದ್ದು ಇಲ್ಲಿದೆ.
I made a 1kg batch of kimchi and stored it in the fridge for my tenant before subletting my apartment to him.
ಇದನ್ನೂ ಓದಿ(Is there a best landlord award I can apply for) pic.twitter.com/xsjjthKkJJ
— Squibsters (@squibsters) July 5, 2023
ತಮ್ಮ ಬಾಡಿಗೆದಾರರು ಮಾತಿನ ಮಧ್ಯೆ ಸಹಜವಾಗಿ ಕಿಮ್ಚಿ ಬಗ್ಗೆ ತಮ್ಮ ಒಲವನ್ನು ವ್ಯಕ್ತಪಡಿಸಿದಾಗ ಈ ಮಹಿಳೆ ಅವರಿಗೆ ಒಂದು ಕಿ. ಗ್ರಾಂನಷ್ಟು ಕಿಮ್ಚಿ ತಯಾರಿಸಿ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಹಾಗಿದ್ದರೆ ನಾನು ಅತ್ಯುತ್ತಮ ಮನೆಮಾಲಕಳು ಪುರಸ್ಕಾರಕ್ಕೆ ಅರ್ಜಿ ಸಲ್ಲಿಸಲೇ? ಎಂದು ತಮಾಷೆ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಅನೇಕರು ಪ್ರತಿಕ್ರಿಯಿಸಿದ್ದಾರೆ. ಕೆಲವರು ರೆಸಿಪಿ ಕೇಳಿದ್ದಾರೆ ಇನ್ನೂ ಕೆಲವರು ಕಾಲೆಳೆದಿದ್ದಾರೆ
ಇದನ್ನೂ ಓದಿ : Viral Video: ಕೊರಿಯಾದ ವೇದಿಕೆಯ ಮೇಲೆ ಆರ್ಕೆಸ್ಟ್ರಾ ನಿರ್ವಹಿಸಿದ ರೋಬೋಟ್ ಕಂಡಕ್ಟರ್
ಜುಲೈ 6ರಂದು ಈ ಪೋಸ್ಟ್ ಅನ್ನು ಟ್ವೀಟ್ ಮಾಡಲಾಗಿದ್ದು ಈತನಕ ಸುಮಾರು 41,000 ಜನರಿಂದ ವೀಕ್ಷಿಸಲ್ಪಟ್ಟಿದೆ. ಸುಮಾರು 400 ಜನರು ಇಷ್ಟಪಟ್ಟಿದ್ದಾರೆ. ನಿಮ್ಮ ಈ ನಡೆ ಅತ್ಯಂತ ಆದರ್ಶಪ್ರಾಯವಾಗಿದೆ. ನಮ್ಮ ಮನೆ ಮಾಲಕರೂ ನಾಲ್ಕು ವರ್ಷಗಳಿಂದ ಮನೆ ಬಾಡಿಗೆಯನ್ನೇ ಹೆಚ್ಚಿಸಿಲ್ಲ, ನಾನು ಇಂಥವರನ್ನು ಪಡೆಯಲು ಪುಣ್ಯ ಮಾಡಿದ್ದೇನೆ ಎಂದಿದ್ದಾರೆ ಒಬ್ಬರು. ನನಗೂ ಇಂಥ ಮಾಲಿಕರನ್ನು ಹುಡುಕಿಕೊಡಿ ಎಂದು ಮತ್ತೊಬ್ಬರು ಇವರಿಗೆ ಕೇಳಿದ್ದಾರೆ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 4:56 pm, Thu, 6 July 23