Viral Video: ಮೋಜಿನ ವಿಜ್ಞಾನ; ಮೊಬೈಲ್​ ದೂರವಿಟ್ಟು ಮಕ್ಕಳನ್ನು ಹತ್ತಿರಕ್ಕೆಳೆದುಕೊಳ್ಳಿ

Science for Kids : ನನಗೂ ಇಂಥ ಅಪ್ಪ ಸಿಗಬೇಕಿತ್ತು. ಇಂಥವರ ಮನೆಯಲ್ಲಿ ನಾನು ಬೆಳೆಯಬೇಕಿತ್ತು. ಆ ಆರೇಂಜ್​ ಟ್ರಿಕ್ ಮಸ್ತ್...ಒಂದು ಮಿಲಿಯನ್​ಗಿಂತಲೂ ಹೆಚ್ಚು ಜನರು ನೋಡಿರುವ ವಿಡಿಯೋದಲ್ಲಿ ಏನಿದೆ ಅಂಥಾ ವಿಶೇಷ?

Viral Video: ಮೋಜಿನ ವಿಜ್ಞಾನ; ಮೊಬೈಲ್​ ದೂರವಿಟ್ಟು ಮಕ್ಕಳನ್ನು ಹತ್ತಿರಕ್ಕೆಳೆದುಕೊಳ್ಳಿ
ಅಪ್ಪ ಮಾಡುತ್ತಿರುವ ಈ ವಿಜ್ಞಾನ ಪ್ರಯೋಗ ಮಜಾ ಇದೆಯಲ್ಲ!?
Follow us
ಶ್ರೀದೇವಿ ಕಳಸದ
|

Updated on:Jul 07, 2023 | 1:32 PM

Experiment : ಮತ್ತೆ ಮೊಬೈಲ್​ ಹಿಡಿದುಕೊಂಡೆಯಾ? ಬಿಡು ಅದನ್ನು ಮೊದಲು. ಮೊಬೈಲ್​ ನೋಡಿಯೇ ನೀನು ಹೀಗಾಡುವುದು. ನೋಡು ಈಗಾಗಲೇ ಕಣ್ಣುಗಳು ಹಾಳಾಗಿ ಹೋಗಿವೆ. ಎಷ್ಟು ಬೈದರೂ ನಿನಗೆ ಅರ್ಥವಾಗುವುದಿಲ್ಲವಲ್ಲ ಮತ್ತದೇ ಮೊಬೈಲ್ ಮೊಬೈಲ್​. ಅದನ್ನ ದೂರ ಎಸೆದು ಬಿಡಬೇಕು! ಎಂದು ಅಬ್ಬರಿಸುತ್ತೀರೇ ಹೊರತು ಮೊಬೈಲ್​ನಿಂದ ಮಕ್ಕಳು ದೂರವಿರಬೇಕು ಎಂದರೆ ನೀವು ಅವರ ಹತ್ತಿರಕ್ಕೆ ಹೋಗಬೇಕು ಎನ್ನುವುದು ನಿಮ್ಮ ಅರಿವಿಗೆ ಬರುವುದೇ ಇಲ್ಲ. ಆದರೆ, ನಿಮ್ಮ ಕೈಯಲ್ಲಿರುವ ಮೊಬೈಲ್​ ಅನ್ನು ದಿನಕ್ಕೆ ಇಷ್ಟು ಗಂಟೆಯಾದರೂ ದೂರವಿಟ್ಟು ಆ ಸಮಯವನ್ನು ಮಕ್ಕಳಗಾಗಿ ವಿನಿಯೋಗಿಸುವುದೊಂದೇ ಪರಿಹಾರ. ಇದೀಗ ಈ ವಿಡಿಯೋ ನೋಡಿ. ಈ ಅಪ್ಪ ನಾಲ್ಕೂ ಮಕ್ಕಳೊಂದಿಗೆ ಮೋಜಿನ ವಿಜ್ಞಾನ (Fun Science) ಪ್ರಯೋಗವನ್ನು ಮಾಡುತ್ತಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by ?WELCOME TO THE ART WORLD? (@arts_terra)

ನಾನು ಇಂಥವರ ಮನೆಯಲ್ಲಿ ಹುಟ್ಟಿ ಬೆಳೆಯಬೇಕಿತ್ತು ಎಂದು ಅನೇಕರು ಹೇಳುತ್ತಿದ್ದಾರೆ. ಈ ತಂದೆ ಎಷ್ಟು ಪ್ರೀತಿಯಿಂದ ಮಕ್ಕಿಳಿಗೆ ಈ ಪ್ರಯೋಗವನ್ನು ಹೇಳಿಕೊಡುತ್ತಿದ್ದಾರೆ. ಮತ್ತೆ ಆ ಮಕ್ಕಳೂ ಕೂಡ ಎಷ್ಟೊಂದು ಮಗ್ನವಾಗಿದ್ದಾರೆ. ಎದುರಿಗೆ ಮೊಬೈಲ್​ನಲ್ಲಿ ಚಿತ್ರೀಕರಿಸಲಾಗುತ್ತಿದೆ ಎನ್ನುವ ಅರಿವಿಲ್ಲದಷ್ಟು! ಎಂದಿದ್ದಾರೆ ಒಬ್ಬರು. ಮಕ್ಕಳನ್ನು ಒಳ್ಳೆಯ ಕುತೂಹಲದೆಡೆ ತಿರುಗಿಸುವಂಥ ಇಂಥ ವಿಡಿಯೋಗಳನ್ನು ಹೆಚ್ಚೆಚ್ಚು ಮಾಡಬೇಕು. ಅವುಗಳಲ್ಲಿ ಹೀಗೆ ಪೋಷಕರೂ ತೊಡಗಿಕೊಳ್ಳಬೇಕು ಎಂದು ಮತ್ತೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ : Viral Video: ‘ಐ ಕೇಮ್​ ಫ್ರಂ ಹನೇಹಳ್ಳಿ’ ; ಈ ಅಪ್ಪಟ ಅವಿದ್ಯಾವಂತನ ಗಂಟಲೋಳ್​ ಇಳಿದ ಇಂಗ್ಲಿಷ್ 

ಆ ಚಿಕ್ಕಮಗು ಎಷ್ಟು ಮುದ್ದಾಗಿ ಕುತೂಹಲದಿಂದ ಈ ಪ್ರಯೋಗವನ್ನು ವೀಕ್ಷಿಸುತ್ತಿದೆಯಲ್ಲ ಎಂದು ಅನೇಕರು ಪ್ರೀತಿಯ ಹೂಮಳೆ ಸುರಿಸಿದ್ದಾರೆ. ನನ್ನ ಬಾಲ್ಯ ಮತ್ತು ಅಪ್ಪನನ್ನು ಈ ವಿಡಿಯೋ ನೆನಪಿಸುತ್ತಿದೆ ಎಂದು ಹೇಳಿದ್ದಾರೆ ಕೆಲವರು. ಅಪ್ಪ ಅಮ್ಮನಿಗೆ ವಾರಕ್ಕೆ ಎರಡು ರಜೆ ಕೊಡಬೇಕು. ಒಂದು ಮನೆಕೆಲಗಳನ್ನು ನಿರ್ವಹಿಸಲು ಇನ್ನೊಂದು ಮಕ್ಕಳೊಂದಿಗೆ ಕಳೆಯಲು ಎಂದು ಒಂದಿಷ್ಟು ಹೇಳಿದ್ದಾರೆ. ಈಗಲೂ ಮಕ್ಕಳನ್ನು ಇಂಥ ಸಂಗತಿಗಳ ಕಡೆಗೆ ಆಸಕ್ತಿ ಹುಟ್ಟುವಂತೆ ಖಂಡಿತ ಮಾಡಬಹುದು, ಮೊಬೈಲ್​ನಿಂದ ದೂರವಿರಿಸಬಹುದು ಎಂಬ ಭರವಸೆ ಇದನ್ನು ನೋಡಿದ ಮೇಲೆ ಅನ್ನಿಸುತ್ತಿದೆ, ನಾನೂ ನನ್ನ ಮಕ್ಕಳೊಂದಿಗೆ ಪ್ರಯತ್ನಿಸುವೆ ಎಂದಿದ್ದಾರೆ ಒಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 1:27 pm, Fri, 7 July 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ