Viral: ಬಾರ್ಬಿರೇಖಾ; ‘ಇಲ್ಲಿ ನೋಡಿ ಸರ್’ ಅಮಿತಾಬ್​ರನ್ನು ಟ್ಯಾಗ್​ ಮಾಡುತ್ತಿರುವ ನೆಟ್ಟಿಗರು

Myntra : ಮಿಂತ್ರಾ ಗ್ರಾಹಕರನ್ನು ಸೆಳೆಯಲು ಇನ್​ಸ್ಟಾಗ್ರಾಂನಲ್ಲಿ ಬಗೆಬಗೆಯ ಸರ್ಕಸ್ ಮಾಡುತ್ತಿದೆ. ಆದರೆ ನೊಂದ ಗ್ರಾಹಕರು ಈ ಪೋಸ್ಟ್​ನಡಿ ಘೆರಾವ್​ ಹೂಡಿದ್ದಾರೆ. ತನಗೂ ಇದಕ್ಕೂ ಸಂಬಂಧವಿಲ್ಲವೆಂಬಂತೆ ಬಾರ್ಬಿಯಂತೆಯೇ ನಿಂತಿದ್ದಾರೆ ರೇಖಾ.

Viral: ಬಾರ್ಬಿರೇಖಾ; 'ಇಲ್ಲಿ ನೋಡಿ ಸರ್' ಅಮಿತಾಬ್​ರನ್ನು ಟ್ಯಾಗ್​ ಮಾಡುತ್ತಿರುವ ನೆಟ್ಟಿಗರು
ಎಐ ಕಲಾವಿದರು ಸೃಷ್ಟಿಸಿದ ರೇಖಾಬಾರ್ಬಿ
Follow us
ಶ್ರೀದೇವಿ ಕಳಸದ
|

Updated on:Jul 07, 2023 | 4:47 PM

Artificial Intelligence : ಝೊಮ್ಯಾಟೋ (Zomato) ಎಲಾನ್ ಮಸ್ಕ್​ರನ್ನು ಮಸ್ಕ್​ ಚಾಯ್​ ಭಂಡಾರದಲ್ಲಿ, ಲಿಯೋನಲ್ ಮೆಸ್ಸಿಯವರನ್ನು ಮೆಸ್ಸೀಸ್​ ಆಂಧ್ರಾ ಮೆಸ್​ನಲ್ಲಿ, ಲಿಯೋನಾರ್ಡೋ ಡಿಕ್ಯಾಪ್ರಿಯೋರನ್ನು ಆಸ್ಕರ್ ಚಾಯ್ ವಾಲಾನಲ್ಲಿ ಮುಖ್ಯ ಬಾಣಸಿಗರಾಗಿ ನೇಮಿಸಿಕೊಂಡ ಬಳಿಕ ಮಿಂತ್ರಾ (Myntra) ತಾನೇನು ಕಡಿಮೆ, ಎಂದು ಬಾಲಿವುಡ್​ನ ಚಿರಯೌವ್ವನೆ ಬಾರ್ಬಿರೇಖಾ (Rekha)ಯವರನ್ನು ತನ್ನ ಶಾಪಿಂಗ್​ ಪ್ಲ್ಯಾಟ್​ಫಾರ್ಮ್​ಗೆ ಕರೆತಂದುಬಿಟ್ಟಿದೆ. ಆದರೆ ಕೆಲವರಷ್ಟೇ ಈ ಬಾರ್ಬಿರೇಖಾ ಅವರನ್ನು ನೋಡಿ ಆಹ್ ಓಹ್​ ವಾಹ್​ ಎನ್ನುತ್ತಿದ್ದಾರೆ. ಉಳಿದವರೆಲ್ಲ ಮಿಂತ್ರಾಗೆ ಹಿಡಿಶಾಪ ಹಾಕುತ್ತಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by MYNTRA (@myntra)

ಮಿಂತ್ರಾ ಎಐ ಕಲಾವಿದರಿಗೆ (AI) ರೇಖಾ ಅವರನ್ನು ಬಾರ್ಬಿಯಂತೆ ಸೃಷ್ಟಿಸಿ ಕೊಡಲು ಕೇಳಿಕೊಂಡಾಗ ಈ ಗುಲಾಬಿ ಬಾರ್ಬಿರೇಖಾ ಅರಳಿದ್ದಾರೆ. ಈ ಪೋಸ್ಟ್ ಅನ್ನು ಮಿಂತ್ರಾ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಾಗಿನಿಂದ ಸುಮಾರು 2,500 ಜನರು ನೋಡಿದ್ದಾರೆ. ನೂರಾರು ಜನರು ಈ ಫೋಟೋಗಳಿಗೆ ಪ್ರತಿಕ್ರಿಯಿಸಿದ್ದಾರೆ. ಹೌದು ಥೇಟ್​ ರೇಖಾ ಅವರಂತೆಯೇ ಕಾಣುತ್ತಿದ್ದಾರೆ. ಅಮಿತಾಬ್​ ಈ ಪೋಸ್ಟ್ ನೋಡಿದರೆ, ಅರೆ, ನಡೀರೀ ರೇಖಾ ಪಾರ್ಟಿಗೆ ಹೋಗೋಣ ಎನ್ನುವುದು ಗ್ಯಾರಂಟಿ ಎಂದು ಕೆಲವರು ಹೇಳಿದ್ದಾರೆ.

ಇದನ್ನೂ ಓದಿ : Viral Video: 35 ವರ್ಷಗಳ ನಂತರ ಹಳೆಯ ಪ್ರೇಮಿಗಳ ಪುನರ್ಮಿಲನ 

ಆದರೆ ಬಹುಪಾಲು ಜನರಿಗೆ ಈ ಬಾರ್ಬಿರೇಖಾ ಗಮನವನ್ನೇ ಸೆಳೆದಿಲ್ಲ. ಅವರೆಲ್ಲ ಮಿಂತ್ರಾ ಗ್ರಾಹಕರನ್ನು ವಂಚಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಕಂಪೆನಿಯನ್ನು ನಂಬಬೇಡಿ, ನಮ್ಮ ಹಣವನ್ನು ಇನ್ನೂ ವಾಪಾಸು ಮಾಡಿಲ್ಲ ಎಂದು ತಕರಾರನ್ನು ಎತ್ತಿದ್ದಾರೆ. ಹೌದು, ಗ್ರಾಹಕ ಸೇವಾ ವಿಭಾಗವು ತೀರಾ ಕಳಪೆಯಾಗಿ ಕಾರ್ಯ ನಿರ್ವಹಿಸುತ್ತದೆ. ಅಲ್ಲಿರುವವರು ರೊಬೊಟ್​ಗಳಂತೆ ಮಾತನಾಡುತ್ತಾರೆ, ಯಾವುದಕ್ಕೂ ಪ್ರಯೋಜನವಿಲ್ಲ. ತಿಂಗಳಾದರೂ ನಮ್ಮ ಹಣ ನಮಗೆ ವಾಪಾಸು ಬಂದಿಲ್ಲ ಎನ್ನುತ್ತಿದ್ದಾರೆ.

 ಇದನ್ನೂ ಓದಿ : Viral Video: ಬಡವನು ತನ್ನ ಛತ್ರಿಯನ್ನು ತಾನೇ ಹಿಡಿದುಕೊಂಡು ರಾಜನಂತೆ ನಡೆಯಬೇಕು

ಮಿಂತ್ರಾ ಎಂಬ ವಂಚಕನನ್ನು, ಮೋಸಗಾರನನ್ನು ಯಾರೂ ಎಂದೂ ನಂಬಬೇಡಿ ಎಂಬ ಧ್ವನಿಯೇ ಅಲ್ಲಿ ಹೆಚ್ಚು ಪ್ರತಿಧ್ವನಿಸುತ್ತಿದೆ. ಬಾರ್ಬಿರೇಖಾ ಮಾತ್ರ ಅದೇ ಮೋಹಕತೆಯೊಂದಿಗೆ, ಮತ್ತದೇ ನಗುಮುಖದೊಂದಿಗೆ ಗುಲಾಬಿ ಉಡುಗೆಯಲ್ಲಿ ಕಂಗೊಳಿಸುತ್ತಿದ್ದಾರೆ. ಏನೋ ಮಾಡಲು ಹೋಗಿ ಏನೋ ಆದಂತಿದೆ ಮಿಂತ್ರಾ ಅವಸ್ಥೆ. ಈ ವಿಷಯವಾಗಿ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 4:37 pm, Fri, 7 July 23

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ