Viral Video: ಮಲೇಷಿಯಾದಲ್ಲಿ ರಾಕಿಂಗ್ ಸ್ಟಾರ್ಗೆ ಸಿಕ್ತು ಸ್ಪೆಷಲ್ ಗಿಫ್ಟ್; ವಿಡಿಯೋ ಇಲ್ಲಿದೆ
ಮಲೇಷಿಯಾದಲ್ಲಿ ರಾಕಿಂಗ್ ಸ್ಟಾರ್ಗೆ ಅಭಿಮಾನಿಯೊಬ್ಬರಿಂದ ವಿಶೇಷ ಗಿಫ್ಟ್ ಒಂದು ಸಿಕ್ಕಿದೆ. ಆ ಸ್ಪೆಷಲ್ ಗಿಫ್ಟ್ ಇದೀಗಾ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ.
‘ಕೆಜಿಎಫ್’ ಸಿನಿಮಾ ಮೂಲಕ ಜಗತ್ತಿನ ಮೂಲೆ ಮೂಲೆಯಲ್ಲಿಯೂ ಅಭಿಮಾನಿಗಳನ್ನು ಪಡೆದುಕೊಂಡಿರುವ ರಾಕಿಂಗ್ ಸ್ಟಾರ್ ಯಶ್ ಮಲೇಷ್ಯಾಗೆ ಹಾರಿದ್ದಾರೆ. ಇದೀಗಾಗಲೇ ಮಲೇಷ್ಯಾ ಅಭಿಮಾನಿಗಳಿಂದ ರಾಕಿ ಭಾಯ್ ಭರ್ಜರಿ ಸ್ವಾಗತ ಸಿಕ್ಕಿದೆ. ಅಲ್ಲಿನ ಚಿನ್ನದ ಶೋರೂಂ ಒಂದರ ಉದ್ಘಾಟನೆಗೆ ತೆರಳಿದ್ದು, ಅಭಿಮಾನಿಯೊಬ್ಬರಿಂದ ವಿಶೇಷ ಗಿಫ್ಟ್ ಒಂದು ಸಿಕ್ಕಿದೆ. ಆ ಸ್ಪೆಷಲ್ ಗಿಫ್ಟ್ ಇದೀಗಾ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ.
ಏನದು ಸ್ಪೆಷಲ್ ಗಿಫ್ಟ್?
ಯಶ್ ತನ್ನ ಬಿಡುವಿನ ಸಮಯದಲ್ಲಿ ಫ್ಯಾಮಿಲಿ ಜೊತೆ ಹೆಚ್ಚು ಸಮಯ ಕಳೆಯುತ್ತಿರುತ್ತಾರೆ. ಜೊತೆಗೆ ತನ್ನ ಮಕ್ಕಳೊಂದಿಗಿನ ತರ್ಲೆ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗಾ ಮಲೇಷ್ಯಾದ ಕಲಾವಿದರೊಬ್ಬರ ಕೈಚಳಕದಿಂದ ಯಶ್ ಅವರ ಮುದ್ದಾದ ಕುಟುಂಬದ ಚಿತ್ರ ಅರಳಿದೆ. ಕಲಾವಿದನ ಕೈ ಚಳಕದಲ್ಲಿ ಯಶ್ ದಂಪತಿಗಳು, ಮುದ್ದಾದ ಇಬ್ಬರು ಮಕ್ಕಳು ಹಾಗೂ ಯಶ್ ಅವರ ತಂದೆ ತಾಯಿಯನ್ನು ಒಂದೇ ಫ್ರೇಮ್ನಲ್ಲಿ ಕಲಾತ್ಮಕವಾಗಿ ಚಿತ್ರಿಸಿದ್ದಾರೆ.
Bliss ❤️✨
” Malaysia Welcomes YASHBOSS “#YashBOSS • #Yash19 @TheNameIsYashpic.twitter.com/EmTVrk7IiI
— Virat?Rocky✨️ (@Virat_Rocky18) July 8, 2023
ಇದನ್ನೂ ಓದಿ: ಹಿಂದೂ ದೇವತೆಗಳನ್ನು ಜಪಾನಿಗರು ಪೂಜಿಸುತ್ತಿದ್ದಾರೋ, ಜಪಾನಿಗರ ದೇವತೆಗಳನ್ನು ಹಿಂದೂಗಳು ಪೂಜಿಸುತ್ತಿದ್ದಾರೋ?
ಮಲೇಷಿಯಾದಲ್ಲಿ ರಾಕಿಂಗ್ ಸ್ಟಾರ್ ಸಿಕ್ಕಿರುವ ಸ್ಪೆಷಲ್ ಗಿಫ್ಟ್ನ ವಿಡಿಯೋಗಳು ಇದೀಗಾ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ. @Virat_Rocky18 ಎಂಬ ಟ್ವಿಟರ್ ಬಳಕೆದಾರರು ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಸ್ವತಃ ರಾಕಿಂಗ್ ಸ್ಟಾರ್ ಕಲಾತ್ಮಕ ಚಿತ್ರ ಕಂಡು ಮೆಚ್ಚುಗೆ ವ್ಯಕ್ತ ಪಡಿಸಿರುವುದನ್ನು ಕಾಣಬಹುದು.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: