Viral: ಭಾರತದ ಈ 15 ಸಸ್ಯಾಹಾರಿ ಖಾದ್ಯಗಳು ವಿಶ್ವದ ಜನಪ್ರಿಯತೆ ಗಳಿಸಿವೆ
Top 15 : ಅನೇಕರು ತಮ್ಮಿಷ್ಟವಾದ ತಿಂಡಿ ತಿನಿಸುಗಳನ್ನು ಟ್ವೀಟ್ ಮಾಡಿ, ಇದು ಖ್ಯಾತಿ ಪಡೆದಿಲ್ಲವೆ? ಇದನ್ನು ಎಲ್ಲರೂ ಇಷ್ಟಪಡುವುದಿಲ್ಲವೆ? ಇದನ್ನು ಯಾಕೆ ನೀವು ನಿಮ್ಮ ಪಟ್ಟಿಯಲ್ಲಿ ಸೇರಿಸಿಕೊಂಡಿಲ್ಲ ಎಂದು ಕೇಳುತ್ತಿದ್ದಾರೆ.
Indian Food : ಭಾರತೀಯರ ಅಡುಗೆ ಪ್ರಾವೀಣ್ಯವನ್ನು ಇಡೀ ಜಗತ್ತು ತುಟಿ ಪಿಟಕ್ಕೆನ್ನದೆ ಒಪ್ಪಿಕೊಳ್ಳುತ್ತದೆ. ಸಸ್ಯಾಹಾರವೇ ಆಗಿರಲಿ ಮಾಂಸಾಹಾರವೇ ಆಗಿರಲಿ ಇಲ್ಲಿಯ ರುಚಿಕಟ್ಟಾದ ಬಗೆಬಗೆಯ ಖಾದ್ಯಗಳು ವಿದೇಶಿಗರ ನಾಲಗೆಗಳನ್ನು ಸಹಜವಾಗಿ ಆಳುತ್ತವೆ. ಇನ್ನು ವಿದೇಶದಲ್ಲಿರುವ ಭಾರತೀಯ ರೆಸ್ಟೋರೆಂಟ್ಗಳು (Indian Restaurant) ಸದಾ ತುಂಬಿರುತ್ತವೆ. ಇದೀಗ ವೈರಲ್ ಆಗಿರುವ ಈ ಟ್ವೀಟ್ ನೋಡಿ. ವಿಶ್ವದ ಜನಮನ ಗೆದ್ದ 15 ಭಾರತೀಯ ಸಸ್ಯಾಹಾರಿ ಖಾದ್ಯಗಳ ಪಟ್ಟಿ ಇಲ್ಲಿದೆ. ಇವುಗಳಲ್ಲಿ ನಮ್ಮ ಮಸಾಲೆ ದೋಸೆ ಮತ್ತು ಇಡ್ಲಿ ಸಾಂಬಾರ್ ಕೂಡ ಸೇರಿದೆ!
2. Masala Dosa pic.twitter.com/I2QgRgJpSf
ಇದನ್ನೂ ಓದಿ— Vertigo_Warrior (@VertigoWarrior) July 7, 2023
ಪನೀರ್ ಟಿಕ್ಕಾ, ಆಲೂ ಪರಾಠಾ, ವೆಜಿಟೇಬಲ್ ಬಿರಿಯಾನಿ, ಸಮೋಸಾ, ರಾಜ್ಮಾ ಚಾವಲ್, ದಾಲ್ ಮಖನೀ, ವಡಾ ಪಾವ್, ಶಾಹೀ ಪನೀರ್, ಪಾವ್ ಭಾಜೀ, ಆಲೂ ಟಿಕ್ಕಿ, ಮೆದು ವಡಾ, ದಾಲ್ ತಡ್ಕಾ ಮತ್ತು ಪಾನೀಪುರಿ ಈ ಖಾದ್ಯಗಳು ಯಾವುದೇ ದೇಶದ ಜನರನ್ನೂ ಸೆಳೆಯುತ್ತವೆ ಎನ್ನುತ್ತಿದೆ ಈ ಟ್ವೀಟ್. ಸುಮಾರು 2 ಲಕ್ಷ ಜನ ಈ ಟ್ವೀಟ್ ಅನ್ನು ನೋಡಿದ್ದಾರೆ. ಸುಮಾರು 4,000 ಜನರು ಇಷ್ಟಪಟ್ಟಿದ್ದಾರೆ. ಮುನ್ನೂರಕ್ಕೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ.
6. Rajma Chawal pic.twitter.com/8m3HcpDhTj
— Vertigo_Warrior (@VertigoWarrior) July 7, 2023
ಅನೇಕರು ಪ್ರತಿಕ್ರಿಯಿಸಿದ್ಧಾರೆ. ಈ ಎಲ್ಲ ಖಾದ್ಯಗಳಿಗಿಂತ ಪಾನೀಪುರಿ ನನಗೆ ಬಹಳ ಇಷ್ಟ ಎಂದು ಕೆಲ ವಿದೇಶಿಗರು ಹೇಳಿದ್ದಾರೆ. ಆಲೂಪರಾಠಾದ ರುಚಿ ಮತ್ತು ಮೃದುತ್ವ ನನ್ನ ಬಾಯಿಯಲ್ಲಿ ನೀರೂರಿಸುತ್ತದೆ ಎಂದಿದ್ದಾರೆ ಒಬ್ಬರು. ಮಳೆಗಾಲದಲ್ಲಿ ದಾಲ್ ಮಖನಿ ತಿನ್ನುವುದೆಂದರೆ ಬಿಸಿಯಾದ ಅಪ್ಪುಗೆಯನ್ನು ಅನುಭವಿಸಿದಂತೆ ಎಂದಿದ್ದಾರೆ ಮತ್ತೊಬ್ಬರು. ಮೆದು ವಡಾ ಸಾಂಬಾರ್ ಮತ್ತು ಚಟ್ನಿಯನ್ನು ಸವಿದರೆ ಅದೇ ಸ್ವರ್ಗ ಎಂದು ಮತ್ತೊಬ್ಬರು.
13. Medu Vada pic.twitter.com/GcGdrutOCW
— Vertigo_Warrior (@VertigoWarrior) July 7, 2023
ನೀವು ಚೋಲೆ ಬಠುರೆಯನ್ನು ಯಾಕೆ ಕೈಬಿಟ್ಟಿದ್ದೀರಿ ಎಂದು ಒಬ್ಬರು ಈ ಥ್ರೆಡ್ಗೆ ಟ್ವೀಟ್ ಮಾಡಿದ್ದಾರೆ. ಇಡ್ಲಿ ಸಾಂಬಾರ್ ಅನ್ನು ಎಂಥ ನಿದ್ದೆಯಿಂದ ಎಬ್ಬಿಸಿ ಕೊಟ್ಟರೂ ನಾನು ತಿನ್ನುತ್ತೇನೆ, ಆ ಮೃದುತನ ಸಾಂಬಾರಿನ ರುಚಿ ನನಗೆ ಹುಚ್ಚು ಹಿಡಿಸುತ್ತದೆ ಎಂದಿದ್ದಾರೆ ಇನ್ನೂ ಒಬ್ಬರು. ನಮ್ಮ ಲಿಟ್ಟಿ ಚೋಖಾವನ್ನು ಯಾಕೆ ಬಿಟ್ಟಿದ್ದೀರಿ, ಇದೇನು ಪಾಪ ಮಾಡಿದೆ ಎಂದು ಕೇಳಿದ್ದಾರೆ ಮತ್ತೊಬ್ಬರು. ಅನೇಕರು ತಮ್ಮ ತಮ್ಮ ಇಷ್ಟದ ಖಾದ್ಯಗಳನ್ನು ಹಾಕಿ ಇದನ್ನೂ ಸೇರಿಸಬೇಕಿತ್ತು ಎಂದಿದ್ದಾರೆ.
ಹಾಗಿದ್ದರೆ ನಿಮ್ಮ ನೆಚ್ಚಿನ ಖಾದ್ಯ ಯಾವುದು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ