AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಇಲ್ಲಿ ಕೂಸುಗಳು ಹೊರಗೆ ಒಂಟಿಯಾಗಿಯೇ ಮಲಗುತ್ತವೆ; ಕಿಡ್ನ್ಯಾಪ್​ನ​ ಭಯವಿಲ್ಲ

Babies : ಇಲ್ಲಷ್ಟೇ ಏಕೆ? ನಮ್ಮ ದೇಶಗಳಲ್ಲಿಯೂ ಮಕ್ಕಳು ಹೀಗೆಯೇ ಹೊರಗೆ ಮಲಗುತ್ತವೆ ಎಂದು ಕೆಲ ವಿದೇಶಿಗರು. ಅಯ್ಯೋ ಸಾಧ್ಯವೇ ಇಲ್ಲ ನಮ್ಮ ದೇಶದಲ್ಲಿ ಇದನ್ನು ಊಹಿಸಿಕೊಳ್ಳುವುದೂ ಅಸಾಧ್ಯ ಎಂದಿದ್ದಾರೆ ಕೆಲವರು. ನೀವೇನಂತೀರಿ?

Viral Video: ಇಲ್ಲಿ ಕೂಸುಗಳು ಹೊರಗೆ ಒಂಟಿಯಾಗಿಯೇ ಮಲಗುತ್ತವೆ; ಕಿಡ್ನ್ಯಾಪ್​ನ​ ಭಯವಿಲ್ಲ
ಡೆನ್ಮಾರ್ಕಿನಲ್ಲಿ ಪ್ರ್ಯಾಮ್​ನೊಳಗೆ ಮಲಗಿದ ಹಸುಗೂಸು
Follow us
ಶ್ರೀದೇವಿ ಕಳಸದ
|

Updated on:Jul 08, 2023 | 3:25 PM

Denmark : ಮಗುವಿಗೆ ಮೂರು ತಿಂಗಳು ಆಗುವ ತನಕವೂ ಅದು ಬಾಣಂತಿಕೋಣೆಯೊಳಗೆ ಬೆಚ್ಚಗೆ ಮಲಗಿರುತ್ತದೆ. ಅಷ್ಟೇ ಏಕೆ ಬಾಣಂತಿ ಮಗುವನ್ನು ಬಿಟ್ಟು ಅಲ್ಲಾಡುವಂತೆಯೇ ಇಲ್ಲ; ಇದು ಭಾರತದಲ್ಲಿ. ಆದರೆ ಡೆನ್ಮಾರ್ಕಿನ ಹಸುಗೂಸುಗಳು ಮನೆಯ ಅಂಗಳದಲ್ಲಿ, ಹಿತ್ತಲಿನಲ್ಲಿ, ಪಾರ್ಕಿನಲ್ಲಿ ಮರದ ಕೆಳಗೆ, ಶಾಪಿಂಗ್​ ಸೆಂಟರ್​ಗಳ ಎದುರು, ಕೆಫೆಗಳ ಬಳಿ ಒಟ್ಟು ಅದರ ಪೋಷಕರು ಎಲ್ಲೆಲ್ಲಿ ಓಡಾಡುತ್ತಾರೋ ಅಲ್ಲೆಲ್ಲಾ ಹೀಗೆ ಪ್ರ್ಯಾಮ್​ನೊಳಗೆ ಹೊರಗಡೆ ತಮ್ಮ ಪಾಡಿಗೆ ಒಂಟಿಯಾಗಿ ಮಲಗಿ ನಿದ್ರಿಸುತ್ತವೆ ಎಂದು ಸಾಕ್ಷ್ಯ ಹೇಳುತ್ತಿದೆ ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ. ಮೂಲತಃ ಇದನ್ನು ಟಿಕ್​ಟಾಕ್​ನಲ್ಲಿ ಅಪ್​ಲೋಡ್ ಮಾಡಲಾಗಿತ್ತು. ನಂತರ ಟ್ವಿಟರ್​ನಲ್ಲಿ ಇದನ್ನು ಹಂಚಿಕೊಳ್ಳಲಾಗಿದೆ.

ಈ ದೇಶದಲ್ಲಿ ಮಕ್ಕಳು ಕಿಡ್ನ್ಯಾಪ್​ ಆಗುತ್ತವೆ ಎಂಬ ಭಯವೇ ಇಲ್ಲ. ಏಕೆಂದರೆ ಪೋಷಣೆ ಮತ್ತು ಜವಾಬ್ದಾರಿಗೆ ಸಂಬಂಧಿಸಿದ್ದು, ಹಾಗಾಗಿ ಯಾರೂ ಇಂಥ ಅನಗತ್ಯ ಜವಾಬ್ದಾರಿಯನ್ನು ಹೊರಲು ಇಲ್ಲಿ ಮುಂದಾಗುವುದಿಲ್ಲ. ಇನ್ನು ಶಿಶುಗಳು ನಾಲ್ಕು ಗೋಡೆಯೊಳಗಿರುವುದಕ್ಕಿಂತ ಪ್ರಕೃತಿಯೊಂದಿಗೆ ಹೆಚ್ಚು ಬೆರೆಯಬೇಕು, ತಾಜಾ ಗಾಳಿಯನ್ನು ಉಸಿರಾಡುವುದರಿಂದ ಇವುಗಳ ಮಾನಸಿಕ ಮತ್ತು ಆರೋಗ್ಯ ಸ್ಥಿತಿ ಉತ್ತಮವಾಗಿರುತ್ತದೆ ಎಂಬ ಕಾರಣಕ್ಕೆ ಇಲ್ಲಿಯ ಶುಷ್ರೂಶಕಿಯರೇ ಇವುಗಳನ್ನು ಹೀಗೆ ಹೊರಗೆ ಮಲಗಿಸಲು ಸಲಹೆಯನ್ನು ಕೊಡುತ್ತಾರೆ.

ಇದನ್ನೂ ಓದಿ : Viral: ಥ್ರೆಡ್; ”ಇದೇನು ನಮ್ಮ ಜಿಲೇಬಿಯೋ?” ಗೊಂದಲಕ್ಕೆ ಬಿದ್ದ ನೆಟ್ಟಿಗರು

ಇನ್ನು ಸಾರ್ವಜನಿಕ ವಲಯಗಳಲ್ಲಿ ಪೋಷಕರು ಶಿಶುಗಳನ್ನು ಪ್ರ್ಯಾಮ್​ನಲ್ಲಿ ಮಲಗಿಸಿ ಹೊರಾವರಣದಲ್ಲಿ ಅವುಗಳನ್ನು ಬಿಟ್ಟು ತಮ್ಮ ಕೆಲಸಗಳಲ್ಲಿ ತೊಡಗಬಹುದು. ಅಲ್ಲಿಯ ಸಿಬ್ಬಂದಿಯು ಈ ಶಿಶುಗಳ ಮೇಲೆ ನಿಗಾ ವಹಿಸುತ್ತಾರೆ ಎಂಬ ವಿವರಣೆ ಈ ವಿಡಿಯೋದ ಹಿನ್ನೆಲೆ ಧ್ವನಿಯಿಂದ ಮೂಡಿಬರುತ್ತದೆ.

ಇದನ್ನೂ ಓದಿ : Viral Video: ದೀರ್ಘಚುಂಬನ ಸ್ಪರ್ಧೆಯನ್ನು ಗಿನ್ನೀಸ್ ವಿಶ್ವದಾಖಲೆ ಕೈಬಿಟ್ಟಿದ್ದೇಕೆ?

ಇದನ್ನು ನಂಬಲು ಕಷ್ಟವೆನ್ನಿಸುತ್ತಿದೆ, ನಮ್ಮ ದೇಶಗಳಲ್ಲಿ ಮಕ್ಕಳನ್ನೇನಾದರೂ ಹೀಗೆ ಮಲಗಿಸಿದರೆ ಅಷ್ಟೇ ಕಥೆ! ಎಂದು ನೆಟ್ಟಗರು ಅಳುಕುತ್ತಿದ್ದಾರೆ. ಇದು ಡೆನ್ಮಾರ್ಕ್​ನಲ್ಲಿಯಷ್ಟೇ ಅಲ್ಲ ಸ್ವಿಡನ್​ ಮತ್ತು ಫಿನ್​ಲ್ಯಾಂಡ್​ನಲ್ಲಿಯೂ ಹೀಗೆ ಮಾಡಲಾಗುತ್ತದೆ ಎಂದಿದ್ದಾರೆ ಇನ್ನೊಬ್ಬರು. ನಮ್ಮ ಪೊಲ್ಯಾಂಡ್​ನಲ್ಲಿಯೂ ಎಳೆಕೂಸುಗಳು ಹೀಗೆ ಸುರಕ್ಷಿತವಾಗಿರುತ್ತವೆ ಎಂದಿದ್ದಾರೆ ಇನ್ನೂ ಒಬ್ಬರು. ನಮ್ಮ ನಾಗಾಲ್ಯಾಂಡ್​ನಲ್ಲಿಯೂ ನಾವು ಹೀಗೇ ಎಂದಿದ್ದಾರೆ ಒಬ್ಬರು. ಓಹ್​ ಬಹುಶಃ ಈ ಎಲ್ಲ ದೇಶಗಳು ಮತ್ತು ರಾಜ್ಯಗಳು ಬಹಳ ಸುರಕ್ಷಿತತೆಯಿಂದ ಕೂಡಿರಬೇಕು ಹಾಗಿದ್ದರೆ ಎಂದಿದ್ದಾರೆ ಕೆಲವರು.

ನಮ್ಮ ದೇಶದಲ್ಲಿ ಈ ಚಿತ್ರಣವನನ್ನು ಊಹಿಸಿಕೊಳ್ಳಿ. ಮಾತೇ ಹೊಮ್ಮುವುದಿಲ್ಲ ಅಲ್ಲವೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:23 pm, Sat, 8 July 23