Viral Video: ತಮಿಳಿನ ‘ಟಮ್ ಟಮ್’​ ಧಾಟಿಯಲ್ಲಿ ಟೊಮ್ಯಾಟೋ ಗೀತೆ

Tomato : ತಂತಮ್ಮ ರಾಜ್ಯಗಳಲ್ಲಿ ಟೊಮ್ಯಾಟೋ ಬೆಲೆ ಎಷ್ಟು ಎಂದು ಹೇಳುತ್ತಾ, ಈ ಹಾಡಿಗೆ ಇನ್ನಷ್ಟು ಸಾಲುಗಳನ್ನು ಸೇರಿಸುತ್ತಾ ಕವಿಗಳಾಗುತ್ತಿದ್ದಾರೆ ನೆಟ್ಟಿಗರು. ಒಟ್ಟಾರೆ ಈ ಕ್ಯಾಚೀ ಟ್ರ್ಯಾಕ್​, ಈ ರೀಲನ್ನು ಟೊಮ್ಯಾಟೋದಂತೆಯೇ ರಂಗೇರಿಸಿದೆ.

Viral Video: ತಮಿಳಿನ 'ಟಮ್ ಟಮ್'​ ಧಾಟಿಯಲ್ಲಿ ಟೊಮ್ಯಾಟೋ ಗೀತೆ
ನಟ ಕುಶಾಲ್ ಪವಾರ್ ತನ್ನ ತಂಡದೊಂದಿಗೆ ಟಮಾಟರ್ ಹಾಡಿನೊಂದಿಗೆ
Follow us
ಶ್ರೀದೇವಿ ಕಳಸದ
|

Updated on:Jul 08, 2023 | 4:50 PM

Tomato : ಏನಿಲ್ಲವೆಂದರೆ ಮಹಾನಗರಗಳಲ್ಲಿ ಒಂದು ಕೇಜಿ ಟೊಮ್ಯಾಟೋ ಬೆಲೆ ರೂ. 100ರಿಂದ 200. ಈ ಪರಿ ಬೆಲೆ ಏರಿಕೆಯಿಂದಾಗಿ ಟೊಮ್ಯಾಟೋ ರಹಿತ ಖಾದ್ಯಗಳನ್ನು ತಿನ್ನುತ್ತಿರುವ ಜನರ ಮುಖವೆಲ್ಲಾ ಸಪ್ಪನೆಯ ಬೇಳೆಯಂತಾಗಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಟೊಮ್ಯಾಟೋ ಹಾಡುಗಳು, ಮೀಮ್​ಗಳು, ಜೋಕುಗಳು, ವಿಡಂಬನಾತ್ಮಕ ರೀಲ್ಸ್​ಗಳು ದಂಡಿಯಾಗಿ ಓಡಾಡುತ್ತಿವೆ. ಆ ಪೈಕಿ ತಮಿಳಿನ ‘ಎನಿಮಿ’ ಸಿನೆಮಾದ ಟಮ್ ಟಮ್​ ಹಾಡಿನ ಟ್ರ್ಯಾಕ್​ಗೆ ನಟ ಮತ್ತು ಗಾಯಕ ಕುಶಾಲ್​ ಪವಾರ್ (Khushaal Pawaar)​ ಎನ್ನುವ ಇನ್​ಸ್ಟಾಗ್ರಾಮಿಗಳು ಟೊಮ್ಯಾಟೋ ಹಾಡನ್ನು ಬರೆದು, ಹಾಡಿ ಸಂಗಡಿಗರೊಂದಿಗೆ ನರ್ತಿಸಿರುವುದು ವೈರಲ್ ಆಗುತ್ತಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Khushaal (@khushaal_pawaar)

ಈತನಕ ಈ ವಿಡಿಯೋ ಅನ್ನು ಸುಮಾರು 7,30,000 ಜನರು ಇಷ್ಟಪಟ್ಟಿದ್ದಾರೆ. ಸಾವಿರಾರು ಜನರು ಹಾಸ್ಯಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಇಂದು ನಾನು ಟೊಮ್ಯಾಟೋ ಇಲ್ಲದೆಯೇ ಟೊಮ್ಯಾಟೋ ಸೂಪ್​ ಕುಡಿದೆ ಎಂದು ಒಬ್ಬರು ಹೇಳಿದ್ದಾರೆ. ಈ ಹಾಡಿನೊಂದಿಗೆ ಇನ್ನಷ್ಟು ಸಾಹಿತ್ಯವನ್ನೂ ಸೇರಿಸಿ ಎಂದು ಇದೇ ಗತಿಗೆ ತಕ್ಕಂತೆ ನಾಲ್ಕೈದು ಹೊಸ ಸಾಲುಗಳನ್ನು ಒಬ್ಬರು ಸೇರಿಸಿದ್ದಾರೆ.

ಇದನ್ನೂ ಓದಿ : Viral: ಭಾರತದ ಈ 15 ಸಸ್ಯಾಹಾರಿ ಖಾದ್ಯಗಳು ವಿಶ್ವದ ಜನಪ್ರಿಯತೆ ಗಳಿಸಿವೆ

ಬೆಂಕಿ ಅಣ್ಣಾ! ಬೆಂಕಿ ಹಚ್ಚಬಿಟ್ಟೆ ಈ ಹಾಡಿನಿಂದ ಎಂದಿದ್ದಾರೆ ಒಬ್ಬರು. ಮನುಷ್ಯರೇ ಆಗಲಿ ಟೊಮ್ಯಾಟೋನೇ ಆಗಲಿ ಬೆಲೆ ಏರಿದಂತೆ ಅವರನ್ನು ಕೈಬಿಟ್ಟುಬಿಡಬೇಕು ಎಂದಿದ್ದಾರೆ ಮತ್ತೊಬ್ಬರು. ಮೊದಲು ಈರುಳ್ಳಿ ತುಟ್ಟಿಯಾಗಿತ್ತು ಈಗ ಟೊಮ್ಯಾಟೋ ನಂತರದ ಸರದಿ ಆಲೂಗಡ್ಡೆಯದು ಎಂದಿದ್ದಾರೆ ಮಗದೊಬ್ಬರು. ಹುಷಾರಾಗಿರಿ ನಿಮ್ಮ ಇನ್​ಸ್ಟಾ ಅಕೌಂಟ್​ ಬ್ಯಾನ್ ಆದೀತು ಎಂದು ತಮಾಷೆ ಮಾಡಿದ್ದಾರೆ ಇನ್ನೂ ಒಬ್ಬರು.

ಇದನ್ನೂ ಓದಿ : Viral Video: ದೀರ್ಘಚುಂಬನ ಸ್ಪರ್ಧೆಯನ್ನು ಗಿನ್ನೀಸ್ ವಿಶ್ವದಾಖಲೆ ಕೈಬಿಟ್ಟಿದ್ದೇಕೆ?

ನಿಮಗೂ ಈಗ ಟೊಮ್ಯಾಟೋ ಬಗ್ಗೆ ಹೊಸ ಹಾಡು ಬರೆಯಬೇಕು ಎನ್ನಿಸುತ್ತಿದೆಯೇ? ಅಥವಾ ಡ್ಯಾನ್ಸ್ ಮಾಡಿ ರೀಲ್​ ಮಾಡಬೇಕು ಎನ್ನಿಸುತ್ತಿದೆಯೇ? ಏನೇ ಮಾಡಿದರೂ ಟೊಮ್ಯಾಟೋ ಬೆಲೆ ಇಷ್ಟು ಬೇಗ ಇಳಿದೀತೆ? ಟೊಮ್ಯಾಟೋ ಇಲ್ಲದೆ ಅಡುಗೆ ರುಚಿಸುತ್ತಿದೆಯೆ? ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 4:49 pm, Sat, 8 July 23

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ