AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ‘ಲೈಕ್ಸ್​, ಶೇರ್​, ಕಮೆಂಟ್​ಗಾಗಿ ಇಷ್ಟೊಂದು ಅಪಾಯಕ್ಕೆ ಒಡ್ಡಿಕೊಳ್ಳಬೇಡ’ ನೆಟ್ಟಿಗರ ಮನವಿ

Rajasthan : ಎಲ್ಲಾ ಶ್ರೀರಾಮನ ಕೃಪೆ. ಆಡಿಕೊಳ್ಳುವವರು ಆಡಿಕೊಳ್ಳುತ್ತಿರುತ್ತಾರೆ, ನೀ ನಿನ್ನ ಸಾಹಸ ಪ್ರದರ್ಶನವನ್ನು ಮುಂದುವರಿಸು. ಜೈ ಶ್ರೀರಾಮ್!​ ಎಂದು ಸಹಸ್ರಾರು ಜನರು ರಾಜಸ್ಥಾನದ ಈ ಯುವಕನನ್ನು ಹುರಿದುಂಬಿಸುತ್ತಿದ್ದಾರೆ.

Viral Video: 'ಲೈಕ್ಸ್​, ಶೇರ್​, ಕಮೆಂಟ್​ಗಾಗಿ ಇಷ್ಟೊಂದು ಅಪಾಯಕ್ಕೆ ಒಡ್ಡಿಕೊಳ್ಳಬೇಡ' ನೆಟ್ಟಿಗರ ಮನವಿ
ರಾಜಸ್ಥಾನದ ಸಾಹಸೀ ಯುವಕ ಪ್ರವೀಣ ಪ್ರಜಾಪತ
Follow us
ಶ್ರೀದೇವಿ ಕಳಸದ
|

Updated on: Jul 10, 2023 | 3:13 PM

Balancing : ಸಣ್ಣ ಸ್ಟೂಲ್​, ಅದರ ಮೇಲೆ ಡಬ್ಬು ಹಾಕಿದ ಎರಡು ಸ್ಟೀಲ್ ಲೋಟಗಳು, ಅದರ ಮೇಲೆ ಎರಡು ಪ್ಲೇಟುಗಳು, ಅದರ ಮೇಲೆ ನೇರ ಇಟ್ಟ ಮತ್ತೆರಡು ಲೋಟಗಳು, ಅವುಗಳ ಮೇಲೆ ಪಾದವನ್ನೂರಿ ನಿಂತ ಯುವಕ, ಅವನ ತಲೆಯ ಮೇಲೆ ಒಂದು ಗಾಜಿನ ಬಾಟಲಿ (ಅಥವಾ ಎರಡು ಗಾಜಿನ ಲೋಟಗಳು?), ಅದರ ಮೇಲೆ ಒಂದು ಸಿಲಿಂಡರ್, ಸಿಲಿಂಡರ್ (Cylinder) ಮೇಲೆ ಮತ್ತೊಂದು ಸಿಲಿಂಡರ್​​! ಭೌತಶಾಸ್ತ್ರಜ್ಞರೆಲ್ಲಾ ತಲೆಕೆಡಿಸಿಕೊಂಡಿರಲು ಸಾಕು ಈ ವಿಡಿಯೋ ನೋಡಿ. ಕೆಲ ನೆಟ್ಟಿಗರು, ನಿನ್ನ ಸಾಹಸ ಮೆಚ್ಚತಕ್ಕದ್ದು, ಆದರೆ ಇದರಿಂದ ನೀನು ಶಾಶ್ವತವಾಗಿ ಅಂಗಾಂಗಗಳನ್ನು ಊನ ಮಾಡಿಕೊಳ್ಳಬಹುದು, ಅಥವಾ ಜೀವಕ್ಕೇ ಅಪಾಯ ತಂದುಕೊಳ್ಳಬಹುದು. ಬೇಡ ಇದೆಲ್ಲ ಬುದ್ಧಿವಾದ ಹೇಳುತ್ತಿದ್ದಾರೆ. ನೋಡಿ ಈ ಕೆಳಗಿನ ವಿಡಿಯೋ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Praveen Prajapat (@praveen_prajapat1)

5 ಲಕ್ಷಕ್ಕಿಂತಲೂ ಹೆಚ್ಚು ಜನರು ಈ ವಿಡಿಯೋ ಮೆಚ್ಚಿದ್ದು 10 ಮಿಲಿಯನ್​ಗಿಂತಲೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ ಸಹಸ್ರಾರು ಸಂಖ್ಯೆಯಲ್ಲಿ ಜನರು ಪ್ರತಿಕ್ರಿಯಸಿದ್ದಾರೆ. ಹೀಗೆ ನಮ್ಮನ್ನೆಲ್ಲಾ ಹುಚ್ಚರನ್ನಾಗಿಸಬೇಡ, ಇದು ಎಡಿಟೆಡ್​ ವಿಡಿಯೋ ಎಂದು ಒಬ್ಬರು ಹೇಳಿದ್ದಾರೆ. ಮನೆಯಲ್ಲಿ ಹೇಳಿಬಂದಿಲ್ಲವೆ? ಈ ಯುವಜನರೆಗೆ ಹುಚ್ಚು ಹಿಡಿದಿದೆ. ಸೋಶಿಯಲ್ ಮೀಡಿಯಾ ಐಡೆಂಟಿಟಿಗೋಸ್ಕರ ಇಂಥ ಅಪಾಯಕ್ಕೆ ಒಡ್ಡಿಕೊಳ್ಳುತ್ತಿದ್ದಾರೆ ಎಂದು ಕೆಲವರು ಹೇಳಿದ್ದಾರೆ. ಆದರೆ ಈ ಯುವಕನ ಇನ್​ಸ್ಟಾಗ್ರಾಂ ಪ್ರೊಫೈಲ್​ ಹೊಕ್ಕು ನೋಡಿದಾಗ…

ರಾಜಸ್ಥಾನ (Rajasthan) ಮೂಲದ ಈ ಸಾಹಸಿ ಯುವಕನ ಹೆಸರು ಪ್ರವೀಣ ಪಜಾಪತ್​ (Praveen Prajapat). ರಿಯಾಲಿಟಿ ಷೋಗಳಲ್ಲಿಯೂ ಇವನು ತನ್ನ ಸಾಹಸ ಪ್ರದರ್ಶನವನ್ನು ಮಾಡಿದ್ದಾನೆ. ಇವನ ಸಾಹಸಪ್ರಾವೀಣ್ಯಕ್ಕೆ ಚಿತ್ರರಂಗದ ಸೆಲೆಬ್ರಿಟಿಗಳೆಲ್ಲ ತಲೆದೂಗಿದ್ದಾರೆ. ತಲೆಯ ಮೇಲೆ ಮಡಿಕೆಗಳನ್ನು, ಸಿಲಿಂಡರ್​ಗಳನ್ನು ಪೇರಿಸಿಟ್ಟುಕೊಂಡು ಈತ ಪ್ರದರ್ಶಿಸುವ ಸಾಹಸವಿದ್ಯೆ ಯಾರನ್ನೂ ಒಂದು ಕ್ಷಣ ನಿಬ್ಬೆರಗಾಗಿಸುತ್ತದೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಶಾಸಕ ಚನ್ನಬಸಪ್ಪ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲಾಗದು: ಪರಮೇಶ್ವರ್
ಶಾಸಕ ಚನ್ನಬಸಪ್ಪ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲಾಗದು: ಪರಮೇಶ್ವರ್