Varanasi: ಇಟಲಿಗೆ ಹಾರಲು ಪಾಸ್‌ಪೋರ್ಟ್ ಪಡೆದ ಭಾರತದ ಬೀದಿ ನಾಯಿ

ಉತ್ತರ ಪ್ರದೇಶ ಮೂಲದ ಮೋತಿ ಎಂಬ ನಾಯಿ ಇತ್ತೀಚೆಗೆ ಪಾಸ್‌ಪೋರ್ಟ್ ಪಡೆದಿಕೊಂಡಿದ್ದು, ಈ ತಿಂಗಳು ಇಟಲಿಗೆ ಹೋಗಲು ಸಿದ್ಧವಾಗಿದೆ. ಇದನ್ನು ಇಟಾಲಿಯನ್ ಲೇಖಕಿ ವೆರಾ ಲಝಾರೆಟ್ಟಿ ಅವರು ಮೋತಿಯನ್ನು ದತ್ತು ಪಡೆದಿದ್ದಾರೆ.

Varanasi: ಇಟಲಿಗೆ ಹಾರಲು ಪಾಸ್‌ಪೋರ್ಟ್ ಪಡೆದ ಭಾರತದ ಬೀದಿ ನಾಯಿ
ಬೀದಿ ನಾಯಿ ಮೋತಿ ಮತ್ತು ಲೇಖಕಿ ವೆರಾ ಲಝಾರೆಟ್ಟಿ
Follow us
ಅಕ್ಷಯ್​ ಪಲ್ಲಮಜಲು​​
|

Updated on:Jul 10, 2023 | 4:26 PM

ದೆಹಲಿ: ವಿದೇಶಕ್ಕೆ ಹೋಗುವುದೇ ಒಂದು ಕನಸು, ಇನ್ನೂ ಆ ಕನಸು ನನಸಾದರು ಹೋಗಲು ಪಾಸ್​ಪೋರ್ಟ್ ಮಾಡುವುದೇ ದೊಡ್ಡ ಕೆಲಸ, ಆದರೆ ಇಲ್ಲೊಬ್ಬ ಮಹಿಳೆ ಬೀದಿ ನಾಯಿಗೆ ಪಾಸ್‌ಪೋರ್ಟ್ ಮಾಡಿ ಇಟಲಿಗೆ ಕರೆದುಕೊಂಡು ಹೋಗುವ ಪ್ಲಾನ್​​ ಹಾಕಿಕೊಂಡಿದ್ದಾರೆ, ಇದೀಗ ಈ ಸುದ್ದಿ ಎಲ್ಲರ ಮನಗೆದ್ದಿದೆ. ಉತ್ತರ ಪ್ರದೇಶ ಮೂಲದ ಮೋತಿ ಎಂಬ ನಾಯಿ ಇತ್ತೀಚೆಗೆ ಪಾಸ್‌ಪೋರ್ಟ್ ಪಡೆದಿಕೊಂಡಿದ್ದು, ಈ ತಿಂಗಳು ಇಟಲಿಗೆ ಹೋಗಲು ಸಿದ್ಧವಾಗಿದೆ. ಇದನ್ನು ಇಟಾಲಿಯನ್ ಲೇಖಕಿ ವೆರಾ ಲಝಾರೆಟ್ಟಿ ಅವರು ಮೋತಿಯನ್ನು ದತ್ತು ಪಡೆದಿದ್ದಾರೆ. ಅವರು ಕಳೆದ ಹತ್ತು ವರ್ಷಗಳಿಂದ ಸಂಶೋಧನಾ ಕಾರ್ಯಕ್ಕಾಗಿ ಭಾರತಕ್ಕೆ ಭೇಟಿ ನೀಡಿದ್ದರು. ವಾರಾಣಸಿಯಲ್ಲಿ ಈ ಬೀದಿ ನಾಯಿ ಜತೆಗೆ ಒಲವು ಬೆಳೆಸಿಕೊಂಡು ಅದನ್ನು ಸಾಕಲು ಮುಂದಾಗಿದ್ದಾರೆ. ಈ ಮೂಲಕ ತಮ್ಮ ಜೀವನದಲ್ಲಿ ಒಂದು ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಆನ್‌ಲೈನ್ ಸಂದರ್ಶನವೊಂದರಲ್ಲಿ ಮಾತನಾಡಿದಾಗ ಮೋತಿ ಈ ಹಿಂದೆ ಹಿಂಸೆಗೆ ಒಳಗಾಗಿತ್ತು. ಇಲ್ಲಿನ ಜನರು ಆ ನಾಯಿಗೆ ಹೊಡೆದು ಹಿಂಸೆ ನೀಡುತ್ತಿದ್ದರು, ಈ ಕಾರಣಕ್ಕೆ ಅವರಿಂದ ಕಾಪಾಡಿ ನಾನು ಮೋತಿಯನ್ನು ಸಾಕಲು ಮುಂದಾಗಿದ್ದೇನೆ ಎಂದು ಹೇಳಿದ್ದಾರೆ.

ಇದೀಗ ಮೋತಿಯನ್ನು ದತ್ತ ಪಡೆದು ಇಟಲಿಗೆ ಕರೆದುಕೊಂಡು ಹೋಗಲು ದೆಹಲಿಗೆ ವಿಮಾನದ ಮೂಲಕ ಹಾರಾಟ ನಡೆಸಿದ್ದಾರೆ. ಪ್ರಾಣಿಗಳನ್ನು ವಿದೇಶಕ್ಕೆ ಕರೆದುಕೊಂಡು ಹೋಗುವಾಗ ವ್ಯಾಕ್ಸಿನೇಷನ್ ಸೇರಿದಂತೆ ಇನ್ನೂ ಅನೇಕ ತಪಾಸಣೆ ಮತ್ತು ದಾಖಲೆ ಮಾಡಬೇಕಿದೆ. ಮೋತಿಯ ಹಿಂಭಾಗದಲ್ಲಿ ಮೈಕ್ರೋಚಿಪ್ ಕೂಡ ಅಳವಡಿಸಲಾಗುವುದು. ಮೈಕ್ರೊಚಿಪ್ ವಿಶೇಷ ಗುರುತಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಇನ್ನೂ ಪ್ರಾಣಿಗಳ ಬಗ್ಗೆ ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳನ್ನು ಮತ್ತು ಅದನ್ನು ಯಾವ ಉದ್ದೇಶಕ್ಕೆ ವಿದೇಶಕ್ಕೆ ಕರೆದುಕೊಂಡು ಹೋಗಲಾಗುತ್ತಿದೆ ಎಂದು ವರದಿಯನ್ನು ಕೂಡ ನೀಡಬೇಕು. ಇದಕ್ಕೆ ಅಲ್ಲಿನ ಅಧಿಕಾರಿಗಳು ಸಹಾಯ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಬೀದಿ ನಾಯಿ ಮೇಲೆ ಕಾರು ಹರಿಸಿದ ದುರುಳ; ಒದ್ದಾಡಿ ಪ್ರಾಣ ಬಿಟ್ಟ ನಾಯಿ

ವೆರಾ ಮತ್ತು ಮೋತಿ ಅವರ ಈ ಹೃದಯಸ್ಪರ್ಶಿ ಕಥೆಗೆ ಎಲ್ಲ ಕಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಪ್ರಾಣಿ ಹಿಂಸೆ ಮಾಡದೆ ಅದನ್ನು ನಮ್ಮವರಂತೆ ಸಾಕುವುದಕ್ಕೆ ಇದು ಉತ್ತಮ ಉದಹಾರಣೆ ಎಂದು ಹೇಳಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಭಾರಿ ವೈರಲ್​ ಆಗಿದೆ. ನಮ್ಮೂರಿನ ಬೀದಿ ನಾಯಿಗಳಿಗೆ ಆರೈಕೆ ಮತ್ತು ಕಾಳಜಿ ಸಿಗಬೇಕು, ಇದಕ್ಕಾಗಿ ಅನೇಕರು ಮುಂದೆ ಬರಬೇಕಿದೆ. ಈ ಕಾರಣಕ್ಕೆ ನಾನು ಕೂಡ ಇಂತಹ ನಾಯಿಗಳನ್ನು ದತ್ತ ಪಡೆಯಲು ಮುಂದಾಗಿದ್ದೇನೆ ಎಂದು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:58 pm, Mon, 10 July 23

ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ