Viral Video: ಮಹಾರಾಷ್ಟ್ರ; 45 ದಿನಗಳ ಮರಿಚಿರತೆ ಮರಳಿ ಅಮ್ಮನ ಮಡಿಲು ಸೇರಿದಾಗ
Maharashtra : ತಾಯಿಯಿಂದ ಮರಿ ಬೇರ್ಪಟ್ಟರೂ ಒಂದೇ, ಮರಿಯಿಂದ ತಾಯಿ ಬೇರ್ಪಟ್ಟರೂ ಒಂದೇ. ಎರಡೂ ಜೀವಗಳು ವಿಲವಿಲ ಒದ್ದಾಡಿ ಹೋಗುತ್ತವೆ. ಅದೃಷ್ಟ! ಇದೀಗ ಈ ಚಿರತೆಮರಿಗೆ ತನ್ನ ತಾಯಿ ವಾಪಾಸು ಸಿಕ್ಕಿದ್ದಾಳೆ.
Reunion: ಇದ್ದಕ್ಕಿದ್ದಂತೆ ಮರಿಗೆ ಅಮ್ಮ ಕಾಣದಿದ್ದರೆ, ಅಮ್ಮನಿಗೆ ಮರಿ ಕಾಣದಿದ್ದರೆ ಹೇಗಾಗಬೇಡ? ಕ್ಷಣಗಳಲ್ಲೇ ಅವುಗಳ ಉಸಿರು ಮೇಲುಕೆಳಗಾಗಿರುತ್ತದೆ ಇನ್ನು ವಾರಗಟ್ಟಲೆ ಎಂದರೆ? ಇದೀಗ ತಾಯಿಯಿಂದ ಬೇರ್ಪಟ್ಟಿದ್ದ ಗಂಡುಚಿರತೆಮರಿಯೊಂದು ಮರಳಿ ತಾಯಿಯ ಮಡಿಲು ಸೇರಿದೆ. ಈ ಘಟನೆ ಮಹಾರಾಷ್ಟ್ರದಲ್ಲಿ (Maharashtra) ನಡೆದಿದೆ. ವನ್ಯಜೀವಿ ಎಸ್‌ಒಎಸ್ (Wildlife SOS) ಮತ್ತು ಮಹಾರಾಷ್ಟ್ರ ಅರಣ್ಯ ಇಲಾಖೆಯ ಜಂಟೀಕಾರ್ಯಾಚರಣೆಯಲ್ಲಿ ಪುಣೆ ಜಿಲ್ಲೆಯ ಚಾಸ್ ಗ್ರಾಮದ ಬಳಿ 45 ದಿನಗಳ ಚಿರತೆಮರಿಯನ್ನು ತನ್ನ ತಾಯಿಯ ಬಳಿ ಸೇರುವಂತೆ ಮಾಡಲಾಗಿದೆ. ಆ ನಂತರ ಮರಿಯನ್ನು ಪಶುವೈದ್ಯಕೀಯ ತಂಡವು ಚಿಕಿತ್ಸೆ ನೀಡಿ ವಾಪಾಸು ತಾಯಿಯ ಬಳಿ ಬಿಟ್ಟಿದೆ.
ಇದನ್ನೂ ಓದಿ : Viral: ಶಂಕರ್ ಮಹಾದೇವನ್ ಬ್ರೆಥ್ಲೆಸ್ ಸಾಂಗ್; ಎಜಾಝ್ ಮತ್ತು ಪ್ರಿನ್ಸಿ ವರ್ಷನ್
ಒಂದು ವಾರದ ಹಿಂದೆ ಮಂಚಾರ್ ಅರಣ್ಯಪ್ರದೇಶದ ಬಳಿ ಇರುವ ಚಾಸ್ ಗ್ರಾಮದ ಮನೆಯೊಂದರಲ್ಲಿ ಚಿರತೆ ಮರಿ ಪತ್ತೆಯಾಗಿತ್ತು. ಈ ಪ್ರದೇಶದ ಸುತ್ತಮುತ್ತ ಆಗಾಗ ಚಿರತೆಗಳು ಓಡಾಡಿಕೊಂಡಿರುತ್ತವೆಯಾದ್ದರಿಂದ ಗ್ರಾಮಸ್ಥರು ಗಾಬರಿಗೆ ಬೀಳದೆ ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿಯನ್ನು ರವಾನಿಸಿದರು. ಅರಣ್ಯಾಧಿಕಾರಿಗಳು ತಕ್ಷಣವೇ ಕಾರ್ಯಾಚರಣೆಗೆ ಮುಂದಾದರು. ಆ ಮನೆ ಮತ್ತು ಹೊಲದ ಬಳಿ ಟ್ರ್ಯಾಪ್ ಕ್ಯಾಮೆರಾಗಳನ್ನು ಅಳವಡಿಸಿ ಮರಿಯನ್ನು ರಕ್ಷಿಸಿದರು. ಆ ನಂತರ ಜುನ್ನಾರ್‌ನಲ್ಲಿರುವ ಮಾಣಿಕ್‌ದೋ ಚಿರತೆ ರಕ್ಷಣಾ ಕೇಂದ್ರಕ್ಕೆ ಅದನ್ನು ಕರೆತಂದರು.
ಇದನ್ನೂ ಓದಿ : Viral Video: ಲಿಸಾ; ಕುತೂಹಲ ಕೆರಳಿಸಿರುವ ಒಡಿಶಾದ ಮೊದಲ ಎಐ ನ್ಯೂಸ್ ಆ್ಯಂಕರ್
ವನ್ಯಜೀವಿ ಎಸ್‌ಒಎಸ್‌ನ ಪಶುವೈದ್ಯಾಧಿಕಾರಿ ಅಖಿಲೇಶ್ ಢಗೆ, ‘ಮರಿಯು ಪ್ರಜ್ಞಾವಸ್ಥೆಯಲ್ಲಿತ್ತು ಮತ್ತು ಸ್ವಲ್ಪ ನಿರ್ಜಲೀಕರಣಗೊಂಡಿತ್ತು. ಅಗತ್ಯವಾದ ಚಿಕಿತ್ಸೆ ನೀಡಲಾಯಿತು. ನಂತರ ಆ ಸಂಜೆಯೇ, ಅದು ಪತ್ತೆಯಾದ ಸ್ಥಳಕ್ಕೆ ಅದನ್ನು ರವಾನಿಸುವ ವ್ಯವಸ್ಥೆಯನ್ನು ಮಾಡಲಾಯಿತು. ತಾಯಿ ಚಿರತೆಯು ನಿಧಾನವಾಗಿ ತನ್ನ ಬಾಯಿಯೊಳಗೆ ಮರಿಯನ್ನು ಎತ್ತಿಕೊಂಡು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿತು. ಇದನ್ನು ನಾವು ಅಳವಡಿಸಲಾಗಿದ್ದ ಕ್ಯಾಮೆರಾದ ಮೂಲಕ ನೋಡಿದೆವು’ ಎಂದಿದ್ದಾರೆ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 2:34 pm, Mon, 10 July 23