Viral Video: ಆಫ್ರೀನ್​ ಆಫ್ರೀನ್​; ಮಿಲಿಯನ್​ಗಟ್ಟಲೆ ಜನರನ್ನು ತಲುಪಿದೆ ಈ ಪುರುಷಜೋಡಿ

Afreen Afreen : ರಾಹತ್​ ಫತೇ ಅಲಿ ಖಾನ್​ ಮತ್ತು ಮೊಮಿನಾ ಹಾಡಿರುವ ಈ ಹಾಡನ್ನು 2016ರಲ್ಲಿ ಕೋಕ್​ ಸ್ಟುಡಿಯೋದ ಸೀಝನ್​ 9- ಸೌಂಡ್ ಆಫ್​ ದಿ ನೇಷನ್​ನಲ್ಲಿ ನೀವು ಕೇಳಿದ ನೆನಪಿರಬಹುದು. ಇದೇ ಹಾಡಿಗೆ ಇವರಿಬ್ಬರೂ ಹೆಜ್ಜೆ ಹಾಕಿದ್ದಾರೆ.

Viral Video: ಆಫ್ರೀನ್​ ಆಫ್ರೀನ್​; ಮಿಲಿಯನ್​ಗಟ್ಟಲೆ ಜನರನ್ನು ತಲುಪಿದೆ ಈ ಪುರುಷಜೋಡಿ
ಆಫ್ರೀನ್ ಆಫ್ರೀನ್​ ಹಾಡಿಗೆ ಹೆಜ್ಜೆ ಹಾಕುತ್ತಿರುವ ಯುವಕರು.
Follow us
ಶ್ರೀದೇವಿ ಕಳಸದ
|

Updated on:Jul 11, 2023 | 5:26 PM

Dance : ನೃತ್ಯ ಹೆಣ್ಣುಮಕ್ಕಳಿಗಷ್ಟೇ ಸೀಮಿತ ಎಂದು ಅನೇಕರು ಭಾವಿಸಿದಂತಿದೆ. ಆದರೆ ನೃತ್ಯ ಎನ್ನುವುದು ಒಂದು ಕಲೆ. ಇದಕ್ಕೆ ಲಿಂಗದ ಹಂಗಿಲ್ಲ. ಪ್ರತಿಭೆ ಇದ್ದು ಅಪಾರ ಪ್ರಮಾಣದಲ್ಲಿ ಶ್ರದ್ಧೆ, ಪ್ರಯತ್ನಗಳಿದ್ದಲ್ಲಿ ಯಾರಲ್ಲಿಯೂ ಈ ಕಲೆ ನೆಲೆಸುತ್ತದೆ. ಇದೀಗ ವಿಶೇಷವೆಂದರೆ ಕೋಕ್​ ಸ್ಟುಡಿಯೋದ ಸೀಸನ್​ 9 ರಲ್ಲಿ ರಾಹತ್​ ಫತೇ ಅಲೀ ಕಾನ್​ ಮತ್ತು ಮೊಮಿನಾ ಹಾಡಿದ ಈ ಆಫ್ರೀನ್​ ಆಫ್ರೀನ್​ (Afreen Afreen)ಗೆ ಯುವಕರಿಬ್ಬರು ಆಕರ್ಷಕವಾಗಿ ನರ್ತಿಸಿದ್ದಾರೆ. ಪುಟ್ಟ ಸಮಾರಂಭವೊಂದರಲ್ಲಿ ಈ ಯುವಕರು ಈ ನೃತ್ಯವನ್ನು ಪ್ರದರ್ಶಿಸಿದ್ದರೂ ಈ ವಿಡಿಯೋ ಸುಮಾರು 10 ಮಿಲಿಯನ್​ ಜನರಿಂದ ವೀಕ್ಷಿಸಲ್ಪಟ್ಟಿದ್ದು, 7 ಲಕ್ಷ ಜನರಿಂದ ಮೆಚ್ಚುಗೆ ಗಳಿಸಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Siddhartha Dayani (@siddharthadayani)

ಅನೇಕರು ಇವರ ಈ ನೃತ್ಯವನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಾರೆ. ಅವರು ಎಷ್ಟು ಲೀಲಾಜಾಲವಾಗಿ ನರ್ತಿಸಿದ್ದಾರೆ. ಎಲ್ಲಿಯೂ ಅವರಿಗೆ ಈ ನೃತ್ಯ ತ್ರಾಸದಾಯಕ ಎನ್ನಿಸಿಯೇ ಇಲ್ಲ. ಗಾಳಿ ತೇಲಿದಂತೆ, ಹಾವು ಹರಿದಂತೆ, ಪಕಳೆಗಳು ಹಾರಿದಂತೆ ಸಹಜವಾಗಿ ನರ್ತಿಸಿದ್ದಾರೆ ಎಂದು ಒಬ್ಬರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನು ಮೂವತ್ತು ಸಲವಾದರೂ ನೋಡಿದೆ ಎಂದಿದ್ದಾರೆ ಮತ್ತೊಬ್ಬರು. ಇಬ್ಬರೂ ಚೆನ್ನಾಗಿ ನರ್ತಿಸಿದ್ದಾರೆ, ಆದರೆ ಕಪ್ಪು ಕುರ್ತಾ ಧರಿಸಿರುವವರ ಭಾವಾಭಿನಯ ಬಹಳ ಸುಂದರವಾಗಿದೆ ಎಂದಿದ್ದಾರೆ ಇನ್ನೊಬ್ಬರು.

ಇದನ್ನೂ ಓದಿ : Viral: 5 ಜೀವಂತ ಹಾವುಗಳನ್ನು ತನ್ನ ಎದೆಯಬಳಿ ಅಡಗಿಸಿಟ್ಟುಕೊಂಡಿದ್ದ ಮಹಿಳೆ

ಪುರುಷರು ನರ್ತಿಸುವಾಗ ಮಹಿಳೆಯರ ಹಾಗೆ ಸಂಪೂರ್ಣವಾಗಿ ಭಾವಾಭಿನಯ ಮಾಡಲಾರರು ಎನ್ನುವ ಆರೋಪವಿದೆ, ಅದನ್ನು ಈ ಯುವಕರು ತಳ್ಳಿಹಾಕಿದ್ದಾರೆ ಎಂದಿದ್ದಾರೆ ಇನ್ನೂ ಒಬ್ಬರು. ಕಪ್ಪು ಕುರ್ತಾದಲ್ಲಿ ನರ್ತಿಸುವ ಯುವಕನ ಮೇಲೇ ನನ್ನ ಕಣ್ಣು ಎಂದಿದ್ದಾರೆ ಮಗದೊಬ್ಬರು.

ಇದನ್ನೂ ಓದಿ : Viral: ’70ವರ್ಷದ ನನ್ನ ತಾಯಿ ನನಗಾಗಿ ಹಾಸಿಗೆ ಅಣಿಗೊಳಿಸುತ್ತಾರೆ’; ಕ್ಲಾಸ್ ತೆಗೆದುಕೊಂಡ ನೆಟ್ಟಿಗರು

ನನಗೆ ಈ ಹಾಡಿನ ಒಂದು ಪದವೂ ಅರ್ಥವಾಗುತ್ತಿಲ್ಲ, ಆದರೆ ಇವರು ನರ್ತಿಸಿದ ರೀತಿ ಬಹಳ ಹಿಡಿಸಿತು ಎಂದಿದ್ದಾರೆ ವಿದೇಶಿಗರೊಬ್ಬರು. ಅರೆ! ಇದು ಮುಗಿಯುವತನಕವೂ ನನಗರಿವಿಲ್ಲದಂತೆ ನನ್ನ ಮುಖದ ಮೇಲೆ ಮಂದಹಾಸ ಸುಳಿದಾಡುತ್ತಿತ್ತು ಎಂದು ಮತ್ತೊಬ್ಬರು ಹೇಳಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 5:17 pm, Tue, 11 July 23