Viral Video: ನಿಮಗೆ ಇಂಥವರ ಕಥೆ ಗೊತ್ತಿಲ್ಲ, ದೂರವಿಡುವ ಮುನ್ನ ದಯವಿಟ್ಟು ಯೋಚಿಸಿ

Helping : ಒಂದು ಘಟನೆಯಿಂದಲೋ, ವರ್ತನೆಯಿಂದಲೋ ಅವರು ಹೀಗೆಯೇ ಎಂಬ ಹಣೆಪಟ್ಟಿ ಹಚ್ಚಿಬಿಡುತ್ತೇವೆ. ಆದರೆ ಅವರು ಹಾಗಿರಲು ಕಾರಣವಿರುತ್ತದೆ. ಅವರಿಗೆ ನಮ್ಮಿಂದ ಸಹಾಯವಾಗಬೇಕಿರುತ್ತದೆ. ನೋಡಿ ಈ ವಿಡಿಯೋ.

Viral Video: ನಿಮಗೆ ಇಂಥವರ ಕಥೆ ಗೊತ್ತಿಲ್ಲ, ದೂರವಿಡುವ ಮುನ್ನ ದಯವಿಟ್ಟು ಯೋಚಿಸಿ
ಕರುಣೆ ಇರಲಿ ಎನ್ನುವುದನ್ನು ಈ ಪರಿಕಲ್ಪನೆಯಲ್ಲಿ ಅರ್ಥ ಮಾಡಿಸುತ್ತಿರುವ ಯುವಕ.
Follow us
ಶ್ರೀದೇವಿ ಕಳಸದ
|

Updated on:Jul 14, 2023 | 4:59 PM

Be Kind : ಯಾವಾಗಲೂ ಅವನದು ಗೋಳೇ. ಆಕೆಯೋ ಯಾರೊಂದಿಗೂ ಮಾತನಾಡುವುದಿಲ್ಲ. ಅವನಂತೂ ಸಣ್ಣಪುಟ್ಟದಕ್ಕೆ ಸಿಟ್ಟು ಮಾಡಿಕೊಳ್ತಾನೆ. ಆಕೆ ಮನೆಯಿಂದ ಹೊರಗೇ ಬರುವುದಿಲ್ಲ. ಅವನು ರಸ್ತೆಯಲ್ಲಿಯೇ ಜಗಳಕ್ಕೆ ನಿಂತ. ಆಕೆ ಬರೀ ಹೆದರ್ತಾಳೆ. ಎಷ್ಟೊತ್ತಿನಿಂದ ಅದೇ ಕೆಲಸವನ್ನೇ ಮಾಡ್ತಿದಾನೆ ಅವ. ನೆಟ್ಟಗೆ ಅವನಿಗೆ ಮಾತನಾಡೋಕೆ ಬರುವುದಿಲ್ಲ. ಅವ ಯಾರ ಜೊತೆನೂ ಹೊಂದಿಕೊಳ್ಳಲ್ಲ. ಒಂದು ಕಂಪೆನಿಯಲ್ಲಿ ನೆಲೆಯೂರಲ್ಲ. ಮುಟ್ಟಿದರೆ ಈಕೆ ಭಯ ಬೀಳ್ತಾಳೆ. ಕಂಡಕಂಡವರನ್ನೆಲ್ಲಾ ಹಚ್ಚಿಕೊಳ್ಳೋಕೆ ನೋಡ್ತಾನೆ ಅವ. ಡೆಡ್​ಲೈನ್​ ಮೀಟ್ ಮಾಡೋದಕ್ಕೆ ಆಕೆಗೆ ಯಾಕೆ ಆಗಲ್ವೋ. ಆಫೀಸಲ್ಲೂ (Office) ಮಲಗ್ತಾನೆ ಇವ… ಇಂಥವರು ನಮ್ಮೊಂದಿಗೆ ಅಥವಾ ನಮ್ಮ ಸುತ್ತಮುತ್ತಲೂ ಇರುತ್ತಾರೆ. ಯಾಕೆ ಹೀಗೆ? ಈ ವಿಡಿಯೋ ನೋಡಿ.

ಅರ್ಥವಾಯಿತೆ? ಪ್ರತಿಯೊಬ್ಬರಿಗೂ ಅವರದೇ ಆದ ಹಿನ್ನೆಲೆ ಇರುತ್ತದೆ. ಎಷ್ಟೋ ಜನಕ್ಕೆ ಬಾಲ್ಯದ ಆಘಾತಗಳು ಅವರ ಮನಸಿನಲ್ಲಿ ಅಚ್ಚೊತ್ತಿರಬಹುದು; ದೌರ್ಜನ್ಯ, ಒತ್ತಡ, ಆಘಾತ, ಪ್ರೀತಿಯ ಕೊರತೆ, ಒಂಟಿತನ, ಅಭದ್ರತೆ ಮತ್ತು ಇನ್ನೂ ಏನೇನೋ ಸಂಗತಿಗಳು. ಕೆಲವರ ಪಾಲಿಗೆ ಬದುಕು ಬಹಳ ಕಠಿಣವೂ ಕ್ರೂರಿಯೂ ಆಗಿರುತ್ತದೆ. ಯಾವುದ್ಯಾವುದೋ ಕಾರಣಗಳಿಗಾಗಿ ಮತ್ತು ಯಾರಿಂದಲೋ ಕೆಲವೊಮ್ಮೆ ನಮ್ಮ ಹೊಳಪನ್ನೇ ಕಳೆದುಕೊಂಡುಬಿಡುತ್ತೇವೆ. ಆಗ ಕತ್ತಲಾದ ನಮ್ಮ ದಾರಿಗೆ ಬೆಳಕನ್ನು ಹಿಡಿಯಲು ಮತ್ತೊಬ್ಬರ ಸಹಾಯ ಬೇಕಾಗುತ್ತದೆ. ಹಾಗಾಗಿ ಹೃದಯದಲ್ಲಿ ಕರುಣೆ ಇರಲಿ ಎನ್ನುವುದೇ ಈ ವಿಡಿಯೋದ ಸಾರ.

ಇದನ್ನೂ ಓದಿ : Viral Video: ಕ್ಯಾ ಬಾತ್​ ಹೈ ಛೋಟೇ ಉಸ್ತಾದ್​! ಎಲ್ಲಿಯವರು ನೀವು?

ಈ ವಿಡಿಯೋ ನೋಡಿದವರ ಸಂಖ್ಯೆ ಇನ್ನೇನು 10 ಮಿಲಿಯನ್​ ಆಗುತ್ತದೆ. ಇದನ್ನು ಲೈಕ್ ಮಾಡಿದವರ ಸಂಖ್ಯೆ 2 ಲಕ್ಷ ತಲುಪುತ್ತದೆ. 60 ಸಾವಿರ ಜನರು ಇದನ್ನು ರೀಟ್ವೀಟ್ ಮಾಡಿದ್ದಾರೆ. ಇಷ್ಟೊಂದು ಪವರ್​ಫುಲ್​ ಆದ ಮೆಸೇಜ್​ ಅನ್ನು ಈತನಕ ನಾನು ನೋಡಿರಲಿಲ್ಲ. ಇದರ ಕರ್ತೃವಿಗೆ ಧನ್ಯವಾದ ಎಂದು ಹೇಳಿದ್ದಾರೆ ಅನೇಕರು. ಅಬ್ಬಾ! ಈ ವಿಡಿಯೋ ನನ್ನ ಹೃದಯವನ್ನೇ ಕರಗಿಸಿಬಿಟ್ಟಿತು, ಎಷ್ಟು ಸರಳವಾಗಿ ಈ ಪರಿಕಲ್ಪನೆಯ ಮೂಲಕ ಮನಮುಟ್ಟುವಂತೆ ಹೇಳಿದ್ದಾನೆ! ಈ ಯುವಕನಿಗೆ ಒಳ್ಳೆಯದಾಗಲಿ ಎಂದಿದ್ದಾರೆ ಕೆಲವರು.

ನೀವೇನು ಹೇಳುತ್ತೀರಿ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 4:55 pm, Fri, 14 July 23

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್