AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಜನರೆಲ್ಲ ಬದುಕುಳಿದದ್ದಕ್ಕೆ ಈ ಕಾರಿನ ಗುಣಮಟ್ಟ ಕಾರಣವೋ, ಅವರ ಅದೃಷ್ಟವೋ?

Accident : ಇದನ್ನು ಟ್ವೀಟ್ ಮಾಡಿದ ವ್ಯಕ್ತಿಯ ವಿತಂಡವಾದದಿಂದ ಬೇಸತ್ತ ನೆಟ್ಟಿಗರು, ನಿನಗೆ 'ಟಾಟಾ' ಹಣ ಕೊಟ್ಟಿದೆಯೇ? ಎನ್ನುತ್ತಿದ್ದಾರೆ. ನಿಮಗೆ ಅಟೋಮೊಬೈಲ್​ ಬಗ್ಗೆ ಗೊತ್ತಿಲ್ಲ, ನನ್ನ ಟ್ವೀಟ್​ನ ಒಳಾರ್ಥವೂ ಅರ್ಥವಾಗುತ್ತಿಲ್ಲ ಎನ್ನುತ್ತಿದ್ದಾನೆ ಈತ.

Viral Video: ಜನರೆಲ್ಲ ಬದುಕುಳಿದದ್ದಕ್ಕೆ ಈ ಕಾರಿನ ಗುಣಮಟ್ಟ ಕಾರಣವೋ, ಅವರ ಅದೃಷ್ಟವೋ?
ಟಾಟಾ ಹ್ಯಾರಿಯರ್​ ಕಾರಿನ ಮೇಲೆ ದೊಡ್ಡ ಬಂಡೆಗಲ್ಲೊಂದು ಉರುಳಿ ಬಿದ್ದಾಗ...
Follow us
ಶ್ರೀದೇವಿ ಕಳಸದ
|

Updated on:Jul 13, 2023 | 4:38 PM

Tata Harrier : ‘ಟಾಟಾ ಹ್ಯಾರಿಯರ್‌ನಲ್ಲಿರುವ ಜನರು ಅದೃಷ್ಟವಂತರು. ಆ ದೊಡ್ಡ ಬಂಡೆಗಲ್ಲು ಎರಡು ಅಡಿ ಹಿಂದೆ ಏನಾದರೂ ಬಿದ್ದಿದ್ದರೆ ಕಾರಿನೊಳಗಿನವರೆಲ್ಲರೂ ಖಂಡಿತ ಸಾವನ್ನಪ್ಪುತ್ತಿದ್ದರು. ಟಾಟಾ ಮೊಟಾರ್ಸ್​​ನ ಈ ಕಾರು​ ಉತ್ತಮ ಗುಣಮಟ್ಟವನ್ನು ಹೊಂದಿದೆ. ಇಷ್ಟೊಂದು ದೊಡ್ಡ ಹೊಡೆತಕ್ಕೂ ಅದು ಬಗ್ಗಲಿಲ್ಲ. ಉತ್ತಮ ಗುಣಮಟ್ಟವು ಜೀವವನ್ನು ಉಳಿಸುತ್ತದೆ.’ ಸಿನಿಕಲ್​ ಉಜ್ವಲ್​ ಎಂಬ ಟ್ವಿಟರ್​ ಖಾತೆಯಲ್ಲಿ ಈ ವಿಡಿಯೋ ಟ್ವೀಟ್​ ಆಗಿದೆ. ಈ ಟ್ವೀಟ್​ನಡಿಯೇ, ಖಂಡಿತ ಟಾಟಾ ಮೋಟಾರ್ಸ್​ ಈ ಟ್ವೀಟ್ ಮಾಡಲು ನನಗೆ ಹಣ ಕೊಟ್ಟಿಲ್ಲ. ನೀವು ಈ ಟ್ವೀಟ್​ ಅನ್ನು ಮತ್ತೊಮ್ಮೆ ಓದಿ ಎಂದಿದ್ದಾರೆ ಇದರ ಖಾತೆದಾರ.

ಈ ವಿಡಿಯೋ ಅನ್ನು 1.8 ಲಕ್ಷಕ್ಕಿಂತಲೂ ಹೆಚ್ಚು ಜನ ನೋಡಿದ್ದಾರೆ. ಸುಮಾರು 2,000 ಜನರು ಲೈಕ್ ಮಾಡಿದ್ದಾರೆ. ಸುಮಾರು 500 ಜನರು ರೀಟ್ವೀಟ್ ಮಾಡಿದ್ದಾರೆ. ಇಂಥ ಘೋರ ಅಪಘಾತದಲ್ಲಿಯೂ ಕಾರಿನಲ್ಲಿರುವವರೆಲ್ಲ ಬದುಕುಳಿದಿದ್ದಾರಲ್ಲ, ಅವರ ಅದೃಷ್ಟ! ಎಂದು ಹಲವಾರು ಜನ ಹೇಳಿದ್ದಾರೆ. ನಿಮ್ಮ ಟ್ವೀಟ್​ ಅದನ್ನು ಧ್ವನಿಸದೆ ಟಾಟಾ ಹ್ಯಾರಿಯರ್​ ಬ್ರ್ಯಾಂಡ್​ನ ಗುಣಮಟ್ಟದ ಬಗ್ಗೆ ಪ್ರಚಾರ ಮಾಡುತ್ತಿರುವಂತೆ ತೋರುತ್ತಿದೆ. ಇದಕ್ಕಾಗಿ ಎಷ್ಟು ಹಣವನ್ನು ನಿಮಗೆ ಕೊಟ್ಟಿರುತ್ತಾರೆ ಎಂದು ಸಿನಿಕಲ್​ ಉಜ್ವಲ್​ ಗೆ ಕೇಳಿದ್ದಾರೆ ಅನೇಕರು. ಆದರೂ ಈ ವ್ಯಕ್ತಿ ಮತ್ತೆ ಮತ್ತೆ ಕಾರು ಮತ್ತು ಅಟೊಮೊಬೈಲ್​ ಬಗ್ಗೆಯೇ ವಿವರಣೆ ನೀಡುತ್ತಿದ್ದಾರೆ.

ಇದನ್ನೂಓದಿ : Viral: ಹೇರ್ ಎಕ್ಸ್ಟೆನ್ಷನ್​ ತಂದಿಟ್ಟ ಫಜೀತಿ; ಈ ಸಲೂನಿಗೆ ಯಾರೂ ಹೋಗಬೇಡಿ ಎಂದ ಮಹಿಳೆ

ಕಾರಿನ ಗುಣಮಟ್ಟಕ್ಕೆ ಇದು ಸಂಬಂಧವೇ ಇಲ್ಲ. ಜನರ ಅದೃಷ್ಟ, ಬದುಕುಳಿದಿದ್ದಾರೆ ಅಷ್ಟೇ ಎಂದು ಅನೇಕರು ಹೇಳಿದ್ದಾರೆ. ಆದರೂ ಈ ವ್ಯಕ್ತಿ ತನ್ನ ಟ್ವೀಟ್​ ಅನ್ನು ಸಮರ್ಥಿಸಿಕೊಳ್ಳುವುದನ್ನು ನಿಲ್ಲಿಸುವ ಲಕ್ಷಣಗಳೇ ಕಂಡಿಲ್ಲ. ಆಗ ಹಲವಾರು ಜನ ಈತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅದಕ್ಕೆ ಪ್ರತಿಯಾಗಿ ಟಾಟಾ ಮೋಟಾರ್ಸ್​ ಅನ್ನು ಟ್ಯಾಗ್ ಮಾಡಿದ ಈ ವ್ಯಕ್ತಿ ನೆಟ್ಟಿಗರ ಹಾವಳಿಯನ್ನು ಸಹಿಸಿಕೊಳ್ಳಲಾಗದೆ ಬೇಗ ಹಣ ಕಳಿಸಿಬಿಡಿ! ಎಂದು (ತಮಾಷೆಯಿಂದ?) ಶರಣಾಗಿದ್ದಾರೆ.

ಈ ದುರ್ಘಟನೆ ಭಾರತದಲ್ಲಿ ಎಲ್ಲಿ ನಡೆದಿದೆ ಎಂಬ ಮಾಹಿತಿ ಈ ಟ್ವೀಟ್​ನಲ್ಲಿಲ್ಲ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 4:30 pm, Thu, 13 July 23

ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಹತ್ಯೆ: ಸ್ಫೋಟಕ ಅಂಶ ಬಹಿರಂಗ
ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಹತ್ಯೆ: ಸ್ಫೋಟಕ ಅಂಶ ಬಹಿರಂಗ
ಬಜರಂಗದಳದ ಸುಹಾಸ್ ಶೆಟ್ಟಿ ಕೊಲೆ: ಹಂತಕರ ಸ್ಕೆಚ್​ ಬಿಚ್ಚಿಟ್ಟ ಕಮಿಷನರ್
ಬಜರಂಗದಳದ ಸುಹಾಸ್ ಶೆಟ್ಟಿ ಕೊಲೆ: ಹಂತಕರ ಸ್ಕೆಚ್​ ಬಿಚ್ಚಿಟ್ಟ ಕಮಿಷನರ್
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಮಂಗಳೂರಿನಲ್ಲಿ ಸೇಡಿಗೆ ಸೇಡು: ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ
ಮಂಗಳೂರಿನಲ್ಲಿ ಸೇಡಿಗೆ ಸೇಡು: ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ