AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಹೇರ್ ಎಕ್ಸ್ಟೆನ್ಷನ್​ ತಂದಿಟ್ಟ ಫಜೀತಿ; ಈ ಸಲೂನಿಗೆ ಯಾರೂ ಹೋಗಬೇಡಿ ಎಂದ ಮಹಿಳೆ

UK : ಹೇರ್​ ಎಕ್ಸ್ಟೆನ್ಷನ್​ಗಾಗಿ ಶೌನಾ ಮ್ಯಾಂಡಿಗೆ ಸುಮಾರು ರೂ. 1.39 ಲಕ್ಷ ಹಣವನ್ನು ಪಾವತಿಸಿರುವುದಾಗಿ ಹೇಳಿದ್ದಾಳೆ. ಆದರೆ ಅಂದುಕೊಂಡಿದ್ದೆ ಒಂದು ಆಗಿದ್ದೇ ಇನ್ನೊಂದು.

Viral: ಹೇರ್ ಎಕ್ಸ್ಟೆನ್ಷನ್​ ತಂದಿಟ್ಟ ಫಜೀತಿ; ಈ ಸಲೂನಿಗೆ ಯಾರೂ ಹೋಗಬೇಡಿ ಎಂದ ಮಹಿಳೆ
ಶೌನಾ ಹಿಗ್ಗಿನ್ಸ್​ಳ ಫೇಸ್​ಬುಕ್​ ಪುಟದಿಂದ.
Follow us
ಶ್ರೀದೇವಿ ಕಳಸದ
|

Updated on:Jul 13, 2023 | 3:40 PM

Hair Extension : ಲಂಡನ್​ನ ಶೌನಾ ಹಿಗ್ಗಿನ್ಸ್​ ಎಂಬ 24 ವರ್ಷದ ಮಹಿಳೆ ಕೂದಲು ಉದುರುವ ಸಮಸ್ಯೆಗೆ ಪರ್ಯಾಯ ಮಾರ್ಗ ಕಂಡುಕೊಳ್ಳಲು ಹೋದಾಗ ಹೊಸದೊಂದು ಸಮಸ್ಯೆಯೇ ಉದ್ಭವಿಸಿದೆ. ಹೇರ್​ ಎಕ್ಸ್ಟೆನ್ಷನ್​ ಪ್ರಕ್ರಿಯೆಯಿಂದಾಗಿ ಆಕೆಯ ನೆತ್ತಿಯೇ ಬೋಳಾಗಿದೆ. ಹಣವನ್ನು ಮರುಪಾವತಿಸುವ ಬದಲು ಹೇರ್​ಸ್ಟೈಲಿಸ್ಟ್​ ಮತ್ತು ಸಲೂನಿನ ಮಾಲಿಕಳೂ ಆದ ಮ್ಯಾಂಡಿ ಕಾಲಿನ್ಸ್, ಆದ ಸಮಸ್ಯೆಯನ್ನು ಸರಿಪಡಿಸಲು ಹೆಚ್ಚುವರಿ ಹಣವನ್ನು ಶೌನಾಗೆ ಕೇಳಿದ್ದಾಳೆ. ಮನನೊಂದ ಶೌನಾ ಈ ವಿಷಯವನ್ನು ಫೇಸ್​ಬುಕ್​ನಲ್ಲಿ ಫೋಟೋಸಮೇತ ಹಂಚಿಕೊಂಡಿದ್ದಾಳೆ.

ನ್ಯೂಯಾರ್ಕ್​ ಪೋಸ್ಟ್​ ಈ ವರದಿಯನ್ನು ಮಾಡಿದೆ. ಹೇರ್​ ಎಕ್ಸ್ಟೆನ್ಷನ್​ಗಾಗಿ ಶೌನಾ ಮ್ಯಾಂಡಿಗೆ ಸುಮಾರು ರೂ. 1.39 ಲಕ್ಷ ಹಣವನ್ನು ಪಾವತಿಸಿರುವುದಾಗಿ ಹೇಳಿದ್ದಾಳೆ. ಆದರೆ ಅಂದುಕೊಂಡಿದ್ದೆ ಒಂದು ಆಗಿದ್ದೇ ಇನ್ನೊಂದು. ಹಣವೂ ಹೋಯ್ತು ಇದ್ದ ಕೂದಲೂ ಹೋದವು ಎಂಬಂಥ ಪರಿಸ್ಥಿತಿ ಶೌನಾಳದ್ದಾಗಿದೆ.

ಇದನ್ನೂ ಓದಿ : Viral: ಪಾಕಿಸ್ತಾನದಲ್ಲಿ ಶಾರುಖ್​, ಸೆಲೆನಾ, ವಿರಾಟ್​, ದೀಪಿಕಾ, ಮೆಸ್ಸಿ, ಕಿಮ್?!

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

‘ಹೇರ್ ಎಕ್ಸ್ಟೆನ್ಷನ್​ ತುಂಡುತುಂಡಾಗಿ ಉದುರಲಾರಂಭಿಸಿತು. ಜೊತೆಗೆ ನನ್ನ ನೆತ್ತಿಯ ಕೂದಲೂಗಳೂ. ನಂತರ ನೆತ್ತಿಯಲ್ಲಿ ಗುಳ್ಳೆಗಳು ಕಾಣಿಸಿಕೊಂಡು ರಕ್ತಸ್ರಾವವಾಗಲಾರಂಭಿಸಿತು. ದೊಡ್ಡ ದೊಡ್ಡ ಗಾಯಗಳುಂಟಾಗಿ ಆ ಭಾಗದ ಕೂದಲೆಲ್ಲಾ ಸಂಪೂರ್ಣ ಉದುರಿದವು. ಈ ಹೊತ್ತಿಗೆ ಒಂದು ತಿಂಗಳು ಕಳೆದು ಹೋಗಿತ್ತು. ನಂತರ ಚರ್ಮರೋಗ ವೈದ್ಯರನ್ನು ಸಂಪರ್ಕಿಸಿದಾಗ ಹೇರ್​​ ಎಕ್ಸ್ಟೆನ್ಷನ್​ ಪ್ರಕ್ರಿಯೆಯಲ್ಲಿ ವ್ಯತ್ಯಾಸವಾಗಿದ್ದಕ್ಕೆ ನೆತ್ತಿ ಗಾಯಗೊಂಡಿದೆ ಎಂದರು’ ಎಂದು ಶೌನಾ ಹೇಳಿದ್ದಾಳೆ.

ಇದನ್ನೂ ಓದಿ : Viral Video: ಪಿರಿಯಡ್​ ಪೇನ್​ ಸಿಮ್ಯುಲೇಟರ್​; ಪೊಲೀಸ್​ಗೆ ಅಳವಡಿಸಿದಾಗ…

ಅನುಭವಿಸಿದ ನೋವು ಮತ್ತು ಅವಮಾನಕ್ಕಾಗಿ ಹಣವನ್ನು ಮರುಪಾವತಿ ಮಾಡಬೇಕಾಗಿ ಮ್ಯಾಂಡಿಯಲ್ಲಿ ಕೇಳಿದಾಗ ಆಕೆ, ಮತ್ತೆ ಬೇರೆ ಎಕ್ಸ್ಟೆನ್ಷನ್​ ಅಳವಾಡಿಸಲಾಗುವುದು ಎಂದಿದ್ದಾಳೆ. ತನಗೆ ನೆತ್ತಿಯ ಮೇಲೆ ಕೂದಲುಗಳೇ ಇಲ್ಲದಿರುವಾಗ ಮತ್ತೆ ಹೇರ್​ ಎಕ್ಸ್ಟೆನ್ಷನ್​ ಅಳವಡಿಸಲು ಹೇಗೆ ಸಾಧ್ಯ? ಎಂದು ಕೇಳಿದ್ದಾಳೆ ಶೌನಾ. ಕೊನೆಗೆ ಶೌನಾ ತನ್ನ ಇಡೀ ತಲೆಯನ್ನೇ ಬೋಳಿಸಿಕೊಂಡಿದ್ದಾಳೆ. ಈ ಸಲೂನಿಗೆ ಯಾರೂ ಹೋಗಬೇಡಿ ಎಂದು ಇತರರನ್ನು ಎಚ್ಚರಿಸಿದ್ದಾಳೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 3:39 pm, Thu, 13 July 23

ಬಜರಂಗದಳದ ಸುಹಾಸ್ ಶೆಟ್ಟಿ ಕೊಲೆ: ಹಂತಕರ ಸ್ಕೆಚ್​ ಬಿಚ್ಚಿಟ್ಟ ಕಮಿಷನರ್
ಬಜರಂಗದಳದ ಸುಹಾಸ್ ಶೆಟ್ಟಿ ಕೊಲೆ: ಹಂತಕರ ಸ್ಕೆಚ್​ ಬಿಚ್ಚಿಟ್ಟ ಕಮಿಷನರ್
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಮಂಗಳೂರಿನಲ್ಲಿ ಸೇಡಿಗೆ ಸೇಡು: ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ
ಮಂಗಳೂರಿನಲ್ಲಿ ಸೇಡಿಗೆ ಸೇಡು: ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ