Viral: ವಿಮಾನ ಟಿಕೆಟ್​ ದರ ರೂ14000, ಕ್ಯಾನ್ಸೆಲ್ ಮಾಡಿದಾಗ ಸಿಕ್ಕಿದ್ದು ರೂ20!

Refund : ದಯವಿಟ್ಟು ಉತ್ತಮವಾದ ಇನ್ವೆಸ್ಟ್​ಮೆಂಟ್​ ಪ್ಲ್ಯಾನ್​ ಇದ್ದರೆ ಹೇಳಿ, ಈ ಮರುಪಾವತಿಸಿದ ಹಣವನ್ನು ತೊಡಗಿಸಬೇಕಿದೆ ಎಂದಿದ್ದಾರೆ ಐಎಎಸ್​ ಅಧಿಕಾರಿ. ನೆಟ್ಟಿಗರು ಒಂದಿಷ್ಟು ಕಂಪೆನಿಗಳ ಹೆಸರು ಹೇಳಿದ್ದಾರೆ. ನೀವು?

Viral: ವಿಮಾನ ಟಿಕೆಟ್​ ದರ ರೂ14000, ಕ್ಯಾನ್ಸೆಲ್ ಮಾಡಿದಾಗ ಸಿಕ್ಕಿದ್ದು ರೂ20!
ಸಾಂದರ್ಭಿಕ ಚಿತ್ರ
Follow us
ಶ್ರೀದೇವಿ ಕಳಸದ
|

Updated on:Jul 13, 2023 | 11:24 AM

Air Ticket : ವಿಮಾನಪ್ರಯಾಣವೆಂದರೆ ಅದು ಎಂದಿಗೂ ತುಟ್ಟಿಯೇ. ಯಾವುದೋ ಕಾರಣಕ್ಕೆ ಟಿಕೆಟ್​ ಕ್ಯಾನ್ಸೆಲ್ ಮಾಡಬೇಕೆಂದು ನಿಮಗೆ ಅನ್ನಿಸಿದರೆ, ಮರುಪಾವತಿಯ ಬಗ್ಗೆ ಆಸೆಯನ್ನೇ ಬಿಡಬೇಕಾಗುತ್ತದೆ. ಹಾಗಾಗಿ ಈ ಸೌಲಭ್ಯ ಕೆಲವರಿಗಷ್ಟೇ. ಇದೀಗ ವೈರಲ್ ಆಗುತ್ತಿರುವ ಈ ಟ್ವೀಟ್ ಗಮನಿಸಿ. ಐಎಎಸ್ ಅಧಿಕಾರಿಯೊಬ್ಬರು ತಮ್ಮ ವಿಮಾನಯಾನದ ಟಿಕೆಟ್​ ಅನ್ನು ಕ್ಯಾನ್ಸೆಲ್ ಮಾಡಿದ್ದಾರೆ. ಆ ಟಿಕೆಟ್​ನ ಮೂಲಬೆಲೆ ಸುಮಾರು ರೂ. 14,000. ಆದರೆ ವಿಮಾನಸಂಸ್ಥೆಯು ಅವರಿಗೆ ಮರುಪಾವತಿ ಮಾಡಿದ್ದು ರೂ. 20! ಈ ವಿಷಯವನ್ನು ಐಎಎಸ್​ ಅಧಿಕಾರಿ ಸಾಮಾಜಿಕ ಜಾಲತಾಣಿಗಳ ಮುಂದೆ ಸಾಕ್ಷಿಸಮೇತ ಬಿಚ್ಚಿಟ್ಟಿದ್ದಾರೆ.

ರೂ. 13,820 ಮೊತ್ತದ ಟಿಕೆಟ್ ರದ್ದುಗೊಳಿಸಿದ್ದಕ್ಕೆ ರೂ. 20 ಮರುಪಾವತಿ ಎಂದರೆ ಯಾರಿಗೂ ಬೇಸರವಾಗುವ ಸಂಗತಿಯೇ. ಐಎಎಸ್ ಆಫೀಸರ್ ರಾಹುಲ್​ ಕುಮಾರ್​​, “ಉತ್ತಮವಾದ ಇನ್ವೆಸ್ಟ್​ಮೆಂಟ್​ ಪ್ಲ್ಯಾನ್ಸ್ ಇದ್ದರೆ ತಿಳಿಸಿ, ಮರುಪಾವತಿಯಾದ ಹಣವನ್ನು ತೊಡಗಿಸಬೇಕಿದೆ” ಎಂದು ತಮಾಷೆಯ ಒಕ್ಕಣೆ ಬರೆದು ಮರುಪಾವತಿಸಿದ ಬಿಲ್​​​ನ ಸ್ಕ್ರೀನ್​ ಶಾಟ್​ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : Viral: ಕಿರುಚುತ್ತಿರುವ ಮಹಿಳೆಯನ್ನು ಪತ್ತೆ ಹಚ್ಚಲು 3 ಪೊಲೀಸ್​ ವ್ಯಾನ್​​ಗಳು ಬಂದವು, ಆದರೆ…

ನೆಟ್ಟಿಗರು ಅಧಿಕಾರಿಯ ಹಾಸ್ಯಪ್ರವೃತ್ತಿ ಮತ್ತು ಬುದ್ಧಿವಂತಿಕೆಯನ್ನು ಶ್ಲಾಘಿಸುತ್ತಿದ್ದಾರೆ ಒಬ್ಬರು. ನೀವು Yes Bank ನಲ್ಲಿ ಒಂದು ಶೇರ್​, Vodafone ನಲ್ಲಿ ಎರಡು ಶೇರ್​​ಗಳನ್ನು ಕೊಳ್ಳಬಹುದು ಸರ್​ ಎಂದಿದ್ದಾರೆ ಇನ್ನೊಬ್ಬರು. ಹಾಗೆ ನೋಡಿದರೆ ವಿಮಾನಸಂಸ್ಥೆಗಳಿಗಿಂತ ರೈಲುಗಳೇ ಉತ್ತಮ. ಟಿಕೆಟ್​ ಕ್ಯಾನ್ಸೆಲ್ ಮಾಡಿದಾಗ ಮರುಪಾವತಿಸುತ್ತವೆ ಎಂದಿದ್ದಾರೆ ಮತ್ತೂ ಒಬ್ಬರು.

ಇದನ್ನೂ ಓದಿ : Viral Video: ಬೆಂಗಳೂರು ಅನ್ನೋ ತಾಯಿ ಯಾರನ್ನೂ ಬರೀಗೈಲೆ ಕಳಸೂದಿಲ್ಲ

ಟಿಕೆಟ್​ ಕ್ಯಾನ್ಸೆಲ್ ಮಾಡಿ ನಾವೂ ಸಾಕಷ್ಟು ಹಣ ಕಳೆದುಕೊಂಡಿದ್ದೇವೆ. ಆದರೆ ಹೀಗೆ ಎರಡಂಕೆಯಲ್ಲಿ ಅಲ್ಲ ಎಂದು ಸ್ಕ್ರೀನ್​ ಶಾಟ್ ಹಾಕಿದ್ದಾರೆ ಕೆಲವರು. ನೆಟ್ಟಿಗರು ಯಾವೆಲ್ಲ ವಿಮಾನ ಸಂಸ್ಥೆಗಳನ್ನು ಟ್ಯಾಗ್ ಮಾಡಿದ್ದಾರೋ ಆ ಎಲ್ಲ ಸಂಸ್ಥೆಗಳು ಜನರಿಗೆ ಪ್ರತಿಕ್ರಿಯಿಸಿವೆ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:23 am, Thu, 13 July 23

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್