Viral Video: ಪಿರಿಯಡ್​ ಪೇನ್​ ಸಿಮ್ಯುಲೇಟರ್​; ಪೊಲೀಸ್​ಗೆ ಅಳವಡಿಸಿದಾಗ…

Woman : ಮುಟ್ಟಿನ ನೋವು ಸಾಮಾನ್ಯವಾದದ್ದಲ್ಲ!; ಆಕೆ ಯಂತ್ರದ ಲೆವೆಲ್ ಜಾಸ್ತಿ ಮಾಡುತ್ತಾ, ನೀವು ಈಗ ಡ್ಯೂಟಿ ಮಾಡಬೇಕು, ಅಡುಗೆ ಮತ್ತು ಮನೆಗೆಲಸಗಳನ್ನು ಮಾಡಬೇಕು, ಮಕ್ಕಳನ್ನು ಎತ್ತಿಕೊಳ್ಳಬೇಕು ಎಂದಾಗ ಆತ ಅಯ್ಯೋ... ಎನ್ನುತ್ತಾನೆ.

Viral Video: ಪಿರಿಯಡ್​ ಪೇನ್​ ಸಿಮ್ಯುಲೇಟರ್​; ಪೊಲೀಸ್​ಗೆ ಅಳವಡಿಸಿದಾಗ...
ಪಿರಿಯಡ್ ಪೇನ್ ಸಿಮ್ಯುಲೇಟರ್​ ಯಂತ್ರವನ್ನು ಪೊಲೀಸರೊಬ್ಬರಿಗೆ ಅಳವಡಿಸಿದಾಗ
Follow us
ಶ್ರೀದೇವಿ ಕಳಸದ
|

Updated on:Jul 13, 2023 | 12:29 PM

Periods : ಸಂತೋಷವನ್ನು ಹಂಚಿಕೊಳ್ಳಬಹುದು ಆದರೆ ನೋವನ್ನು ಅವರವರೇ ಅನುಭವಿಸಬೇಕು. ಅದರಲ್ಲೂ ಹೆಣ್ಣುಮಕ್ಕಳ ಮುಟ್ಟಿನ ನೋವಿನ ವಿಷಯದಲ್ಲಂತೂ ಮಾತೇ ಬೇಡ. ನೋವು ನಿವಾರಕ ಮಾತ್ರೆಗಳು ಮತ್ತು ನೋವು ಕಡಿಮೆ ಮಾಡುವ ಯಂತ್ರಗಳು ಇದ್ದರೂ ಆ ದಿನಗಳು ಮಾತ್ರ ಶಬ್ದಗಳಲ್ಲಿ ಹಿಡಿದಿಡಲಾಗದಂಥವು. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಮಹಿಳೆಯೊಬ್ಬಳು ಪಿರಿಯಡ್ ಪೇನ್​ ಸಿಮ್ಯುಲೇಟರ್​​ ​ (period pain simulator) ಯಂತ್ರವನ್ನು ಪೊಲೀಸರೊಬ್ಬರಿಗೆ ಅಳವಡಿಸಿ, ಒಂದೊಂದೇ ಲೆವೆಲ್​ ಹೆಚ್ಚಿಸುತ್ತಾ ಮುಟ್ಟಿನ ನೋವಿನ ಬಗ್ಗೆ ಅರಿವು ಮೂಡಿಸುತ್ತಿದ್ದಾಳೆ. ಈತನಕ 1.9 ಮಿಲಿಯನ್​ ಜನರು ಇದನ್ನು ವೀಕ್ಷಿಸಿದ್ದಾರೆ. ಸುಮಾರು 16,000 ಜನರು ಲೈಕ್ ಮಾಡಿದ್ದಾರೆ ಮತ್ತು 2,400 ಜನರು ರೀಟ್ವೀಟ್ ಮಾಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ.

ಮುಟ್ಟು ಎನ್ನುವುದು ಗಂಡಸರಿಗೆ ಸಂಬಂಧಿಸಿದ್ದರೆ ಖಂಡಿತ ಅವರಿಗೆ ಉಚಿತ ರಜೆಯನ್ನು ಮುಂಜೂರು ಮಾಡಲಾಗುತ್ತಿತ್ತು ಎಂದಿದ್ದಾರೆ ಒಬ್ಬಾಕೆ. ಇದು ಪ್ರಾತ್ಯಕ್ಷಿಕೆಗೆ ಸರಿ. ಆದರೆ ಗರ್ಭಕೋಶವೇ ಇಲ್ಲದ ಗಂಡಸು ನೋವನ್ನು ಅನುಭವಿಸಲು ಹೇಗೆ ಸಾಧ್ಯ? ಎಂದು ಕೇಳಿದ್ದಾರೆ ಇನ್ನೊಬ್ಬರು. ಫೈಬ್ರಾಯ್ಡ್ ಇದ್ದು ಪ್ರತೀ ಸಲ ಮುಟ್ಟಾದಾಗ ಉಂಟಾಗುವ ನೋವು ಮತ್ತು ರಕ್ತಸ್ರಾವದಿಂದಾಗಿ ಉಂಟಾಗುವ ಸುಸ್ತನ್ನು ಯಾವ ಔಷಧಿ ಮತ್ತು ಯಂತ್ರವೂ ಸಮಾಧಾನಿಸದು ಎಂದಿದ್ದಾರೆ ಮತ್ತೊಬ್ಬಾಕೆ.

ಇದನ್ನೂ ಓದಿ : Viral: ವಿಮಾನ ಟಿಕೆಟ್​ ದರ ರೂ14000, ಕ್ಯಾನ್ಸೆಲ್ ಮಾಡಿದಾಗ ಸಿಕ್ಕಿದ್ದು ರೂ20!

ನಾನೊಬ್ಬ ಕಪ್ಪು ಮಹಿಳೆ. ವೈದ್ಯರುಗಳು ಕಪ್ಪುಮಹಿಳೆಯರ ನೋವಿಗೆ ಔಷಧಿಯನ್ನೇ ಶಿಫಾರಸು ಮಾಡುವುದಿಲ್ಲ. ಒಟ್ಟಾರೆ ಕಪ್ಪುಮಹಿಳೆಯರನ್ನು ಕಡೆಗಣಿಸುತ್ತಾರೆ. ಹೀಗಾಗಿ ನಾನು ಮುಟ್ಟಾದಾಗ ಬಹಳ ನೋವಿನಿಂದ  ಒದ್ದಾಡುತ್ತೇನೆ ಎಂದಿದ್ದಾರೆ ಒಬ್ಬಾಕೆ.

ಇದನ್ನೂ ಓದಿ : Viral: ಕಿರುಚುತ್ತಿರುವ ಮಹಿಳೆಯನ್ನು ಪತ್ತೆ ಹಚ್ಚಲು 3 ಪೊಲೀಸ್​ ವ್ಯಾನ್​​ಗಳು ಬಂದವು, ಆದರೆ...

ಮುಟ್ಟಾದಾಗ ಆಯಾಸ, ತಲೆನೋವು, ತಲೆತಿರುಗುವಿಕೆ, ಸ್ನಾಯು ಸೆಳೆತ, ಸ್ತನಗಳ ನೋವು ಮಾತ್ರ ಭಯಾನಕ ಎಂದಿದ್ದಾರೆ ಅನೇಕರು. ಗಂಡಸರಲ್ಲಿ ಜಾಗೃತಿ ಮೂಡಿಸುವುದು ಒಳ್ಳೆಯದು. ಆದರೂ ಹೆಣ್ಣುಮಕ್ಕಳ ಮುಟ್ಟು ಮತ್ತು ಆಗ ಉಂಟಾಗುವ ನೋವಿನಿಂದ ಮುಕ್ತಿ ಪಡೆಯುವುದು ಅಷ್ಟು ಸುಲಭವಲ್ಲ ಎಂದೇ ಅನೇಕರ ವಾದ.

ಈ ವಿಡಿಯೋ ನೋಡಿದ ನಿಮ್ಮ ಅನುಭವವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:23 pm, Thu, 13 July 23

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್