Viral: ಕಿರುಚುತ್ತಿರುವ ಮಹಿಳೆಯನ್ನು ಪತ್ತೆ ಹಚ್ಚಲು 3 ಪೊಲೀಸ್ ವ್ಯಾನ್ಗಳು ಬಂದವು, ಆದರೆ…
Police : ಗಾಬರಿಯಾಗಬೇಡಿ ನಿಮ್ಮ ಮನೆಯಲ್ಲಿ ಯಾರೋ ಮಹಿಳೆಯೊಬ್ಬರು ತೊಂದರೆಗೆ ಸಿಲುಕಿದ ಹಾಗಿದೆ, ಅವರಿಗೆ ಸಹಾಯ ಬೇಕಿರಬಹುದು. ಈ ಕುರಿತು ಪರಿಶೀಲನೆ ನಡೆಸಲು ನಾವು ಬಂದಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಂದೆ?
Screaming : ಪಕ್ಕದ ಮನೆಯಲ್ಲಿ ಮಹಿಳೆಯೊಬ್ಬರು ಕಿರುಚಾಡುತ್ತಿದ್ದಾರೆ ಎಂದು ಕರೆ ಹೋದಾಗ ಲಂಡನ್ನ ಕ್ಯಾನ್ವೆ ದ್ವೀಪದ (Canvey Island) ಸ್ಥಳಕ್ಕೆ ಬಂದಿಳಿದಿದ್ದಾರೆ. ಒಂದಲ್ಲ ಒಟ್ಟು ಮೂರು ವಾಹನಗಳಲ್ಲಿ! ನಂತರ ಧ್ವನಿ ಕೇಳಿಬಂದ ಮನೆಯೆಡೆ ಧಾವಿಸಿದ್ದಾರೆ. ಸ್ಟೀವ್ ವುಡ್ಸ್ ಎಂಬುವವರ ಪೊಲೀಸರನ್ನು ಕಂಡು ಕೆಲಕ್ಷಣ ದಂಗಾಗಿದ್ದಾರೆ. ಬಂದ ವಿಷಯವನ್ನೂ ತಿಳಿಸಿದ್ಧಾರೆ. ಆದರೆ ಎಲ್ಲಿಯೂ ಯಾವ ಮಹಿಳೆಯೂ ಪತ್ತೆಯಾಗದೆ ನಿರಾಶೆಗೊಂಡಿದ್ದಾರೆ. ಹೀಗೆ ಕೂಗಿದ್ದು ಇಲ್ಲಿರುವ ಗಿಳಿ ಇರಬಹುದೆ? ಎಂಬ ಅನುಮಾನ ಮೂಡಿದೆ ಮತ್ತು ಅದು ನಿಜವೇ ಆಗಿದೆ. ಈ ಘಟನೆ ಜು. 11ರಂದು ನಡೆದಿದೆ.
ಇದನ್ನೂ ಓದಿ : Viral Video: ಬೆಂಗಳೂರು ಅನ್ನೋ ತಾಯಿ ಯಾರನ್ನೂ ಬರೀಗೈಲೆ ಕಳಸೂದಿಲ್ಲ
ಕ್ಯಾನ್ವೆ ದ್ವೀಪದ ಸ್ಟೀವ್ ವುಡ್ಸ್ ಪಕ್ಷಿಪ್ರಿಯರು. ಕಳೆದ 21 ವರ್ಷಗಳಿಂದ ಪಕ್ಷಿಗಳನ್ನು ಸಾಕಿದ್ದಾರೆ. ಸದ್ಯ ಮಕಾವ್‌ಗಳು, ಹಾನ್ಸ್ ಮಕಾವ್‌ಗಳು, ಎರಡು ಅಮೆಜಾನ್ ಗಿಳಿಗಳು, ಎಂಟು ಭಾರತೀಯ ರಿಂಗ್‌ನೆಕ್ ಗಿಳಿಗಳು, ಹಸಿರು ರೆಕ್ಕೆಯ ಮಕಾವ್‌ಗಳು ಇವರ ಬಳಿ ಇವೆ. ‘ಸಾಮಾನ್ಯವಾಗಿ ಬೆಳಗಿನ ಜಾವದಲ್ಲಿ ಪಕ್ಷಿಗಳು ತಮ್ಮ ಧ್ವನಿಯನ್ನು ಹೊಮ್ಮಿಸಲು ಶುರುಮಾಡುತ್ತವೆ. ಫ್ರೆಡ್ಡಿ ಎಂಬ ಗಿಳಿಗೆ ನಿರ್ದಿಷ್ಟವಾದ ದಿನ ಹಾರ್ಮೋನ್ ಬಿಡುಗಡೆಯಾಗುತ್ತದೆ. ಅದು ಆಗ ಹೀಗೆ ಕಿರುಚಾಡುತ್ತದೆ’ ಎಂದಿದ್ದಾರೆ ಸ್ಟೀವ್.
ಇದನ್ನೂ ಓದಿ : Viral Video: ಚೈತನ್ಯ ಚಿತ್ರ; ಅಜ್ಜಿಯ ಅಂದದ ಮೊಗಕೆ ನಗುವೇ ಭೂಷಣ
ಇದ್ದಕ್ಕಿದ್ದಂತೆ ಪೊಲೀಸರು ಸ್ಟೀವ್ ಮನೆಬಾಗಿಲಿಗೆ ಬಂದಾಗ ಸಹಜವಾಗಿ ಸ್ಟೀವ್ಗೆ ಗಾಬರಿಯಾಗಿದೆ. ಅಯ್ಯೋ ನಾನೇನು ಮಾಡಿದ್ದೇನೆ ಎಂದು ಪೊಲೀಸರಿಗೆ ಕೇಳಿದ್ದಾರೆ. ಗಾಬರಿಯಾಗಬೇಡಿ ನಿಮ್ಮ ಮನೆಯಲ್ಲಿ ಯಾರೋ ಮಹಿಳೆಯೊಬ್ಬರು ತೊಂದರೆಗೆ ಸಿಲುಕಿದ ಹಾಗಿದೆ, ಅವರಿಗೆ ಸಹಾಯ ಬೇಕಿರಬಹುದು. ಈ ಕುರಿತು ಪರಿಶೀಲನೆ ನಡೆಸಲು ನಾವು ಬಂದಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : Viral Video: ಕರುನಾಡ ಸರಸ್ವತಿ ಅಂಕಿತಾ ಕುಂಡುಗೆ ಅಭಿಮಾನಿಗಳಿಂದ ಖಡಕ್ ಪತ್ರ
‘ಪೊಲೀಸರು ಅವರ ಕೆಲಸವನ್ನು ಅವರು ಮಾಡಿದ್ದಾರೆ. ನೆರೆಹೊರೆಯವರು ಕರೆ ಮಾಡಿ ಹೇಳಿದ್ದೂ ಸರಿ ಇದೆ. ಇವರಿಬ್ಬರ ಬಗ್ಗೆ ನನಗೆ ಯಾವುದೇ ರೀತಿಯ ತಕರಾರಿಲ್ಲ. ಆದರೆ ಇಷ್ಟೆಲ್ಲ ಅವಾಂತರಕ್ಕೆ ಈಡು ಮಾಡಿದ್ದು ಫ್ರೆಡ್ಡಿ ಎಂಬ ಗಿಳಿ! ಅದರ ಮೇಲೂ ಬೇಸರವಿಲ್ಲ, ಅದು ಅದರ ಸಹಜತೆ.’ ಎಂದಿದ್ದಾನೆ ಸ್ಟೀವ್.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 10:29 am, Thu, 13 July 23