Viral Video: ಚೈತನ್ಯ ಚಿತ್ರ; ಅಜ್ಜಿಯ ಅಂದದ ಮೊಗಕೆ ನಗುವೇ ಭೂಷಣ
Pune : ಈ ಸ್ಕೆಚ್ ನೋಡಿ ನನಗೆ ಆರ್.ಕೆ. ಲಕ್ಷ್ಮಣ ಮತ್ತು ಮಾಲ್ಗುಡಿ ಡೇಸ್ ನೆನಪಾಯಿತು ಎಂದು ಕೆಲವರು. ಈ ವಿಡಿಯೋಗೆ ಅಳವಡಿಸಿದ ಹಾಡಿಗೆ ಶರಣು ಎಂದು ಹಲವರು. 2.5 ಮಿಲಿಯನ್ ಜನರು ಈ ವಿಡಿಯೋ ನೋಡಿದ್ದಾರೆ. ನೀವು?
Sketch : ಪಾರ್ಕಿಂಗ್ನಲ್ಲಿ ಸಿಕ್ಕ ಬೆಕ್ಕನ್ನು ನೋಡಿದ ಜಸ್ಟಿನ್ ಬಟೇಮನ್ ಎಂಬ ಕಲಾವಿದ ಬೆಣಚುಕಲ್ಲುಗಳಿಂದ ಗಾಂಧೀಜಿ, ರಮಣ ಮಹರ್ಷಿ ಮತ್ತು ಬೆಕ್ಕಿನ ಪೋರ್ಟ್ರೇಟ್ ರಚಿಸಿದ್ದನ್ನು ನೀವೆಲ್ಲ ಈ ಹಿಂದೆ ಓದಿದ್ದೀರಿ, ನೋಡಿದ್ದಿರಿ. ಕಲಾವಿದರಿಗೆ ಯಾವಾಗ ಯಾರು ಯಾಕೆ ಮತ್ತು ಹೇಗೆ ಸ್ಫೂರ್ತಿಯಾಗುತ್ತಾರೆ ಎನ್ನುವುದು ಊಹೆಗೆ ಅತೀತ. ಇದೀಗ ಪುಣೆಯ ಚೈತನ್ಯ ಲಿಮಯೇ (Chaitanya Limaye) ಎಂಬ ಯುವಕಲಾವಿದರೊಬ್ಬರ ಚಿತ್ತಕ್ಕೆ ಬೀದಿಬದಿ ಹೂಮಾರುವ ಅಜ್ಜಿಯೊಬ್ಬರು ಸಿಕ್ಕಿದ್ದಾರೆ. ವೈರಲ್ ಆಗುತ್ತಿರುವ ವಿಡಿಯೋ ಇಲ್ಲಿದೆ ನೋಡಿ.
ಇದನ್ನೂ ಓದಿView this post on Instagram
‘ಈ 70 ದಾಟಿದ ಅಜ್ಜಿ ತನ್ನ ಅಂಗಡಿಯಲ್ಲಿ ಹೂಮಾಲೆ ಕಟ್ಟುವುದನ್ನು ನೋಡಿದೆ. ಅವಳು ಆ ಬಣ್ಣಬಣ್ಣದ ಹೂಗಳನ್ನು ಮಾಲೆ ಮಾಡುವುದರಲ್ಲಿ ಧ್ಯಾನಸ್ಥಳಾದ ಬಗೆ ನನ್ನನ್ನು ಸೆಳೆಯಿತು. ತಕ್ಷಣವೇ ನನ್ನ ಸ್ಕೆಚ್ ಪ್ಯಾಡ್ನಲ್ಲಿ ಆಕೆಯನ್ನು ಅರಳಿಸಿದೆ. ಆ ಚಿತ್ರವನ್ನು ಆಕೆಗೆ ತೋರಿಸಿದೆ. ಆಕೆಯ ಮುಖದಲ್ಲಿ ಅರಳಿದ ಹೂನಗೆಗೆ ಬೆಲೆ ಕಟ್ಟಲಾದೀತೇ?’ ಎಂದಿದ್ದಾರೆ ಚೈತನ್ಯ.
ಇದನ್ನೂ ಓದಿ : Viral Video: ಕರುನಾಡ ಸರಸ್ವತಿ ಅಂಕಿತಾ ಕುಂಡುಗೆ ಅಭಿಮಾನಿಗಳಿಂದ ಖಡಕ್ ಪತ್ರ
ಈ ವಿಡಿಯೋ ಅನ್ನು ಜೂ. 26ರಂದು ಹಂಚಿಕೊಳ್ಳಲಾಗಿದೆ. ಈತನಕ ಸುಮಾರು 2.5 ಮಿಲಿಯನ್ ಜನರು ಇದನ್ನು ನೋಡಿದ್ದಾರೆ. 2.5 ಲಕ್ಷ ಜನರು ಇಷ್ಟಪಟ್ಟಿದ್ದಾರೆ. ಸಹಸ್ರಾರು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೀವು ಅದ್ಭುತವಾದ ಕಲಾವಿದರು, ನಿಮಗೂ ಆ ಅಜ್ಜಿಗೂ ಒಳ್ಳೆಯದಾಗಲಿ ಎಂದಿದ್ದಾರೆ ಅನೇಕರು. ಆರ್ಕೆ ಲಕ್ಷ್ಮಣ್ ಅವರನ್ನು ನೀವು ನೆನಪಿಸುತ್ತಿದ್ದೀರಿ ಎಂದಿದ್ಧಾರೆ ಕೆಲವರು. ಮಾಲ್ಗುಡಿ ಡೇಸ್ ನೆನಪಾಗುತ್ತಿದೆ ಎಂದಿದ್ದಾರೆ ಮತ್ತೊಂದಿಷ್ಟು ಜನ. ಈ ವಿಡಿಯೋಗೆ ಅಳವಡಿಸುವ ಹಾಡನ್ನು ಕೇಳಲೆಂದೇ ಇದನ್ನು 20 ಸಲ ನೋಡಿದೆ ಎಂದಿದ್ದಾರೆ ಒಬ್ಬರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 4:38 pm, Wed, 12 July 23