Viral: ಅಮೇಝಾನ್​; ಆರ್ಡರ್ ಮಾಡಿದ್ದು ಆ್ಯಪಲ್​ ವಾಚ್​, ತಲುಪಿದ್ದು ನಕಲಿ ವಾಚ್​​

Amazon : 'ಅಮೇಝಾನ್​ನಲ್ಲಿ ಯಾರೂ ಏನೂ ಆರ್ಡರ್​ ಮಾಡಬೇಡಿ. ಆ್ಯಪಲ್​ 8 ಸೀರೀಸ್​ ವಾಚ್ ಆರ್ಡರ್ ಮಾಡಿದರೆ, ಫಿಟ್​ಲೈಟ್​ನ ನಕಲಿ ವಾಚ್ ಬಂದು ತಲುಪಿದೆ' ಎಂದು ಮಹಿಳೆಯೋರ್ವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Viral: ಅಮೇಝಾನ್​; ಆರ್ಡರ್ ಮಾಡಿದ್ದು ಆ್ಯಪಲ್​ ವಾಚ್​, ತಲುಪಿದ್ದು ನಕಲಿ ವಾಚ್​​
ಅಮೇಝಾನ್​ನಿಂದ ಪಡೆದ ಫಿಟ್​ಲೈಫ್​ ನಕಲಿ ವಾಚ್
Follow us
ಶ್ರೀದೇವಿ ಕಳಸದ
|

Updated on: Jul 12, 2023 | 3:51 PM

Online Order : ಬಯಸಿದಂಥ ಉತ್ಪನ್ನಗಳು ನಿರಾಯಾಸವಾಗಿ ಅತಿವೇಗದಲ್ಲಿ ಕುಳಿತಲ್ಲಿಯೇ ನಮ್ಮನ್ನು ತಲುಪುತ್ತವೆ ಎನ್ನುವ ಕಾರಣಕ್ಕೆ ಆನ್​​ಲೈನ್​ ಮಾರುಕಟ್ಟೆ ಇಷ್ಟೊಂದು ವ್ಯಾಪಕವಾಗಿ ಹಬ್ಬಿರುವುದು. ಆದರೆ ಎಲ್ಲಾ ಸಂದರ್ಭದಲ್ಲಿಯೂ ಹೀಗೆಯೇ ಆಶಿಸಲಾಗುವುದೆ? ಕೆಲವೊಮ್ಮೆ ಯಡವಟ್ಟುಗಳು ಖಂಡಿತ ಸಂಭವಿಸುತ್ತವೆ. ಏನನ್ನೋ ಆರ್ಡರ್ ಮಾಡಿದರೆ ಇನ್ನೊಂದೇನೋ ಬಂದು ತಲುಪಿರುತ್ತದೆ ಅಥವಾ ಹಣವು ಕೈಬಿಟ್ಟು ಹೋಗಿರುತ್ತದೆ. ಇಂಥ ಅನೇಕ ಘಟನೆಗಳು ನಿತ್ಯವೂ ನಡೆಯುತ್ತಲೇ ಇರುತ್ತವೆ. ಇದೀಗ ಇಂಥದೇ ಒಂದು ಘಟನೆ ನಡೆದಿದೆ. ಅಮೇಝಾನ್​ನಲ್ಲಿ ಆ್ಯಪಲ್​ ವಾಚ್ (Apple Watch) ಆರ್ಡರ್ ಮಾಡಿದ ಮಹಿಳೆಯೊಬ್ಬರಿಗೆ ಫಿಟ್​ಲೈಫ್​  (Fit Life) ನಕಲಿ ವಾಚ್​ ಬಂದು ತಲುಪಿದೆ.

ನಂತರ ಸನಾಯಾ ಎಂಬ ಈ ಮಹಿಳೆ ಅಮೇಝಾನ್​ ಕಂಪೆನಿಯನ್ನು ಸಂಪರ್ಕಿಸಿದರೂ ಸೂಕ್ತ ಸ್ಪಂದನೆಯಾಗಲಿ ಪರಿಹಾರವಾಗಲಿ  ಸಿಕ್ಕಿಲ್ಲ. ಆಗ ಬೇಸರಗೊಂಡ ಆಕೆ ಟ್ವಿಟರ್​ ಮೊರೆ ಹೋಗಿದ್ಧಾರೆ. ಈ ಅಮೇಝಾನ್​ನಿಂದ ‘ಏನನ್ನೂ ಆರ್ಡರ್ ಮಾಡಬೇಡಿ. ಜು. 9ರಂದು ನಾನು ಆ್ಯಪಲ್​ ವಾಚ್​ ಸೀರೀಸ್​ 8 ಬದಲಾಗಿ ನಕಲಿ ಫಿಟ್​ಲೈಫ್​ ವಾಚ್​ ಪಡೆದಿದ್ದೇನೆ.’ ಎಂದು @AmazonHelp ಗೆ ಈ ಟ್ವೀಟ್​ ಟ್ಯಾಗ್ ಮಾಡಿದ್ದಾರೆ.

ಇದನ್ನೂ ಓದಿ : Viral Video: ಕರುನಾಡ ಸರಸ್ವತಿ ಅಂಕಿತಾ ಕುಂಡುಗೆ ಅಭಿಮಾನಿಗಳಿಂದ ಖಡಕ್​ ಪತ್ರ

ಈ ಟ್ವೀಟ್​ ಸುಮಾರು 4.7 ಲಕ್ಷ ಜನರು ನೋಡಿದ್ದಾರೆ. ಸುಮಾರು 4,000 ಜನರು ಲೈಕ್​ ಮಾಡಿದ್ದಾರೆ. ಸುಮಾರು 1,000 ಜನರು ರೀಟ್ವೀಟ್ ಮಾಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ. ಅನೇಕರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅಂತೂ @AmazonHelp ಈ ಟ್ವೀಟ್​ಗೆ ಪ್ರತ್ಯುತ್ತರ ನೀಡಿದೆ, ‘ಅನಾನುಕೂಲತೆಗಾಗಿ ಕ್ಷಮೆ ಯಾಚಿಸುತ್ತೇವೆ. ಸಹಾಯ ಮಾಡಲು ಆದಷ್ಟು ಪ್ರಯತ್ನಿಸುತ್ತೇವೆ’ ಎಂದಿದೆ. ಗ್ಯಾಜೆಟ್​ ಅಥವಾ ದುಬಾರಿ ವಸ್ತುಗಳ ಖರೀದಿಗಾಗಿ ನಾನಂತೂ ಆನ್​ಲೈನ್​ ಪೋರ್ಟಲ್​​ಗಳನ್ನು ನಂಬುವುದೇ ಇಲ್ಲ. ಅಂಗಡಿಗಳಿಂದ ನೇರ ಖರೀದಿಸುವುದು ಒಳ್ಳೆಯದು, ಇದು ತೃಪ್ತಿಯನ್ನು ಕೊಡುತ್ತದೆ ಎಂದಿದ್ದಾರೆ ಕೆಲವರು.

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ