Video Viral: ರೈಲಿನಲ್ಲಿ ಮಹಿಳೆಯರ ಶಕ್ತಿ ಪ್ರದರ್ಶನ; ಪರಸ್ಪರ ಚಪ್ಪಲಿ ಹಿಡಿದು ಹೊಡೆದಾಡಿಕೊಂಡ ಮಹಿಳೆಯರು

ಲೋಕಲ್ ರೈಲಿನಲ್ಲಿ ಮಹಿಳೆಯರ ಗುಂಪೊಂದು ಜಗಳಕ್ಕಿಳಿದ್ದಿದ್ದು, ವಿಡಿಯೋ ಇದೀಗಾ ಸೋಶಿಯಲ್​​ ಮೀಡಿಯಾಗಳಲ್ಲಿ ವೈರಲ್​ ಆಗಿದೆ.

Video Viral: ರೈಲಿನಲ್ಲಿ ಮಹಿಳೆಯರ ಶಕ್ತಿ ಪ್ರದರ್ಶನ; ಪರಸ್ಪರ ಚಪ್ಪಲಿ ಹಿಡಿದು ಹೊಡೆದಾಡಿಕೊಂಡ ಮಹಿಳೆಯರು
ಪರಸ್ಪರ ಚಪ್ಪಲಿ ಹಿಡಿದು ಹೊಡೆದಾಡಿಕೊಂಡ ಮಹಿಳೆಯರು Image Credit source: Twitter
Follow us
ಅಕ್ಷತಾ ವರ್ಕಾಡಿ
|

Updated on:Jul 12, 2023 | 5:02 PM

ಕೋಲ್ಕತ್ತಾ: ಲೋಕಲ್ ರೈಲಿನಲ್ಲಿ ಮಹಿಳೆಯರ ಗುಂಪೊಂದು ಮಾತಿಗೆ ಮಾತು ಬೆಳೆದು ಪರಸ್ಪರ ಚಪ್ಪಲಿಯಲ್ಲಿ ಬಡಿದಾಟ ಶುರು ಮಾಡಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಈ ಮಹಿಳೆಯರ ಈ ವರ್ತನೆ ವಿಡಿಯೋದಲ್ಲಿ ಸೆರೆಯಾಗಿದ್ದು, ಇದೀಗಾ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗಿದೆ. ವಿಡಿಯೋದಲ್ಲಿ ಮಹಿಳೆಯರಿಬ್ಬರು ಪರಸ್ಪರ ಕೂದಲು ಎಳೆದಾಡುತ್ತಿರುವುದು ಹಾಗೂ ಚಪ್ಪಲಿಯಲ್ಲಿ ಪರಸ್ಪರ ಹೊಡೆದಾಡುತ್ತಿರುವುದು ಕಂಡುಬಂದಿದೆ. ಮಹಿಳೆಯ ಈ ಅಸಭ್ಯ ವರ್ತನೆ ಸೋಶಿಯಲ್​ ಮೀಡಿಯಾಗಳಲ್ಲಿ ಭಾರೀ ಟೀಕೆಗೆ ಒಳಗಾಗಿದೆ.

ಈ ವೀಡಿಯೊವನ್ನು @Ayushihihaha ಎಂಬ ಟ್ವಿಟರ್‌ ಬಳಕೆದಾರರು ಜುಲೈ 11ರಂದು ಹಂಚಿಕೊಂಡಿದ್ದು, ಈಗಾಗಲೇ 5ಸಾವಿರಕ್ಕಿಂತೂ ಹೆಚ್ಚಿನ ವೀಕ್ಷಣೆ ಪಡೆದುಕೊಂಡಿದೆ. ಜಗಳಕ್ಕೆ ಕಾರಣ ಸ್ಪಷ್ಟವಾಗಿಲ್ಲವಾದರೂ, ಈ ಮಹಿಳೆಯರು ಜಗಳವಾಡುವುದನ್ನು ನೋಡುವುದು ಸಂಪೂರ್ಣವಾಗಿ ಭಯಾನಕವಾಗಿದೆ. ಅಲ್ಲಿದ್ದ ಕೆಲವರು ತಡೆಯಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ.

ಇದನ್ನೂ ಓದಿ: 70 ವರ್ಷದ ನನ್ನ ತಾಯಿ ನನಗಾಗಿ ಹಾಸಿಗೆ ಅಣಿಗೊಳಿಸುತ್ತಾರೆ’; ಕ್ಲಾಸ್ ತೆಗೆದುಕೊಂಡ ನೆಟ್ಟಿಗರು

ವಿಡಿಯೋ ವೈರಲ್​​ ಆಗುತ್ತಿದ್ದಂತೆ ನೆಟ್ಟಿಗರಿಂದ ಭಾರೀ ಟೀಕೆಗೆ ಕಾರಣವಾಗಿದೆ. ‘ನಾರಿ ಶಕ್ತಿ’ ಎಂದು ಸಾಕಷ್ಟು ನೆಟ್ಟಿಗರು ಹಾಸ್ಯಸ್ಪದವಾಗಿ ಬರೆದುಕೊಂಡಿದ್ದಾರೆ. “ರೈಲಿನೊಳಗೆ ಉಚಿತ WWE,” ಮತ್ತೊಬ್ಬ ನೆಟ್ಟಿಗರು ಬರೆದುಕೊಂಡಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 5:00 pm, Wed, 12 July 23