AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vijayapura News: ವಿವಸ್ತ್ರವಾಗಿ ಮೊಬೈಲ್​ ಟವರ್ ಏರಿದ ಮಾನಸಿಕ ಅಸ್ವಸ್ಥ ಯುವಕ; ವಿಡಿಯೋ ವೈರಲ್​

Vijayapura News: ವಿವಸ್ತ್ರವಾಗಿ ಮೊಬೈಲ್​ ಟವರ್ ಏರಿದ ಮಾನಸಿಕ ಅಸ್ವಸ್ಥ ಯುವಕ; ವಿಡಿಯೋ ವೈರಲ್​

ಅಶೋಕ ಯಡಳ್ಳಿ, ವಿಜಯಪುರ
| Updated By: ಕಿರಣ್ ಹನುಮಂತ್​ ಮಾದಾರ್

Updated on:Jul 08, 2023 | 2:37 PM

ಮಾನಸಿಕ ಅಸ್ವಸ್ಥ ಯುವಕನೊಬ್ಬ ವಿವಸ್ತ್ರವಾಗಿ ಮೊಬೈಲ್​ ಟವರ್ ಏರಿದ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬಳಗಾನೂರ ಗ್ರಾಮದಲ್ಲಿ ನಡೆದಿದ್ದು, ಇತನನ್ನ ಸಿಂದಗಿ ತಾಲೂಕಿನ ತೆಗ್ಗಿಹಳ್ಳಿ ಗ್ರಾಮದ ಸತೀಶ್ ಎಂದು ಗುರುತಿಸಲಾಗಿದೆ.

ವಿಜಯಪುರ: ಮಾನಸಿಕ ಅಸ್ವಸ್ಥ(Mentally ill)ಯುವಕನೊಬ್ಬ ವಿವಸ್ತ್ರವಾಗಿ ಮೊಬೈಲ್​ ಟವರ್ ಏರಿದ ಘಟನೆ ವಿಜಯಪುರ (Vijayapura) ಜಿಲ್ಲೆಯ ಸಿಂದಗಿ ತಾಲೂಕಿನ ಬಳಗಾನೂರ ಗ್ರಾಮದಲ್ಲಿ ನಡೆದಿದೆ. ಬಟ್ಟೆಗಳನ್ನು ಬಿಚ್ಚಿ ನಗ್ನವಾಗಿಯೇ ಟವರ್ ಹತ್ತಿದ ಯುವಕ, ವಿಚಿತ್ರವಾಗಿ ವರ್ತನೆ ಮಾಡಿತ್ತಿದ್ದಾನೆ. ಇತನನ್ನ ಸಿಂದಗಿ ತಾಲೂಕಿನ ತೆಗ್ಗಿಹಳ್ಳಿ ಗ್ರಾಮದ ಸತೀಶ್ ಎಂದು ಗುರುತಿಸಲಾಗಿದ್ದು, ಟವರ್ ತುದಿಯ ಮೇಲೆ ಹತ್ತಿ ಅಪಾಯಕಾರಿಯಾಗಿ ವರ್ತನೆ ಮಾಡುತ್ತಿದ್ದು, ಸ್ವಲ್ಪ ಆಯತಪ್ಪಿದರೂ ಅನಾಹುತಕ್ಕೀಡಾಗುವ ಸಂಭವವಿದೆ. ಇನ್ನು ಟವರ್ ಬಳಿ ಬಳಗಾನೂರು ಗ್ರಾಮದ ಜನರು ಹಾಗೂ ಆಲಮೇಲ ಠಾಣೆ ಪೊಲೀಸರು ಬೀಡು ಬಿಟ್ಟಿದ್ದು, ಯುವಕನನ್ನ ಕೆಳಗಿಳಿಸೋಕೆ ಪೊಲೀಸರ ಹಾಗೂ ಗ್ರಾಮಸ್ಥರ ಪ್ರಯತ್ನ ಪಡುತ್ತಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jul 08, 2023 02:37 PM