MLA on Budget; ಅಭಿವೃದ್ಧಿ ವಿಷಯದಲ್ಲಿ ತಾರತಮ್ಯವಿಲ್ಲ, ಒಂದು ವಿಷನ್​ನೊಂದಿಗೆ ನಾವು ಸಾಗುತ್ತಿದ್ದೇವೆ: ಪ್ರದೀಪ್ ಈಶ್ವರ್

MLA on Budget; ಅಭಿವೃದ್ಧಿ ವಿಷಯದಲ್ಲಿ ತಾರತಮ್ಯವಿಲ್ಲ, ಒಂದು ವಿಷನ್​ನೊಂದಿಗೆ ನಾವು ಸಾಗುತ್ತಿದ್ದೇವೆ: ಪ್ರದೀಪ್ ಈಶ್ವರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 08, 2023 | 1:30 PM

ವಿರೋಧ ಪಕ್ಷದವರು ತನ್ನನ್ನು ಬಯ್ಯಲಿ, ತೆಗಳಲಿ ಆದರೆ ಅಭಿವೃದ್ಧಿ ವಿಷಯದಲ್ಲಿ ಎಲ್ಲರೂ ಕೈ ಜೋಡಿಸಬೇಕು ಎಂದು ಪ್ರದೀಪ್ ಈಶ್ವರ್ ಹೇಳಿದರು.

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಗೆ ಅತಿ ಹೆಚ್ಚಿನ ಅನುದಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಬಿಡುಗಡೆ ಮಾಡಿದ್ದಾರೆ, ಎತ್ತಿನಹೊಳೆ ಯೋಜನೆಗೆ ಹಣ, ಶಿಡ್ಲಘಟ್ಟಕ್ಕೆ ರೂ. 75 ಕೋಟಿ ಅನುದಾನ ಮಂಜೂರು ಮಾಡಿದ್ದಾರೆ, ಕಾಂಗ್ರೆಸ್ ಸರ್ಕಾರ ಒಂದು ವಿಷನ್ ಇಟ್ಟುಕೊಂಡು ಮುಂದೆ ಸಾಗುತ್ತಿದೆ, ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ನಗರದಲ್ಲಿಂದು ಹೇಳಿದರು. ಅಭಿವೃದ್ಧಿ ವಿಷಯ ಬಂದಾಗ ನಮ್ಮ ಸರ್ಕಾರ ತಾರತಮ್ಯ ಮನೋಭಾವ ಪ್ರದರ್ಶಿಸುವುದಿಲ್ಲ, ಹಾಗೆ ಮಾಡಿದ್ದೇಯಾದರೆ, ಶಿಡ್ಲಘಟ್ಟದಿಂದ ಕಾಂಗ್ರೆಸ್ ಪಕ್ಷದ ಶಾಸಕ ಆಯ್ಕೆಯಾಗಿರದಿದ್ದರೂ ಅನುದಾನ ಬಿಡುಗಡೆ ಮಾಡಲಾಗಿದೆ, ಇದರ ಹಿಂದಿನ ಉದ್ದೇಶ ಒಂದೇ-ಅಲ್ಲಿ ಒಂದು ರೇಷ್ಮೆ ಮಾರ್ಕೆಟ್ ಅಭಿವೃದ್ಧಿಗೊಂಡರೆ ಭಾಗದ ರೇಷ್ಮೆ ಬೆಳೆಗಾರರಿಗೆ (sericulture farmers) ಬಹಳ ಅನುಕೂಲವಾಗುತ್ತದೆ ಎಂದು ಶಾಸಕ ಹೇಳಿದರು. ವಿರೋಧ ಪಕ್ಷದವರು ತನ್ನನ್ನು ಬಯ್ಯಲಿ, ತೆಗಳಲಿ ಆದರೆ ಅಭಿವೃದ್ಧಿ ವಿಷಯದಲ್ಲಿ ಎಲ್ಲರೂ ಕೈ ಜೋಡಿಸಬೇಕು ಎಂದು ಪ್ರದೀಪ್ ಈಶ್ವರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ